

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ವಿರೋಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ದೆಹಲಿಯ ಜಂತರ್-ಮಂತರ್ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.
ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಪೊಲೀಸ್ ವ್ಯಾನ್ನಿಂದ ಕೀಲಿ ಕಳ್ಳತನ ಮಾಡಿ ನಂತರ ಪೊಲೀಸರಲ್ಲಿ ತಗಲಾಕೊಂಡಿರುವ ಯುವತಿಯೊಬ್ಬಳ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ದೆಹಲಿಯ ಜಂತರ್-ಮಂತರ್ನಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗ ವಿರೋಧಿ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು ಭಾಗವಹಿಸಿದ್ದು, ಪೊಲೀಸರ ವ್ಯಾನ್ನ ಕೀಲಿ ಕಳ್ಳತನ ಮಾಡಿದ್ದಾಗಿ ಇಕೆ ಹೇಳಿದ್ದಾಳೆ. ಈ ಮಾತನ್ನು ಕೇಳುತ್ತಲೇ, ತಕ್ಷಣ ಇಕೆಯನ್ನು ಸುತ್ತುವರಿದ ಮಾಧ್ಯಮಗಳ ಜೊತೆ ಇಕೆ ಮಾತನಾಡಲು ಶುರುವಿಟ್ಟಿದ್ದಾಳೆ.
ನಾನು, ದೆಹಲಿ ಪೊಲೀಸರು ಬಂಧಿಸರಿಂದ ಬಂಧನಕ್ಕೊಳಗಾಗಿದ್ದ ಪ್ರತಿಭಟನಾಕಾರರಿದ್ದ ಬಸ್ನ ಕೀಲಿಯನ್ನು ಕದ್ದು ಬಂದಿದ್ದೇನೆಂದು ಹೇಳಿದ್ದಾಳೆ. ಈಗ ನಿಮ್ಮನ್ನು ಪೊಲೀಸರು ಬಂಧಿಸಿದರೆ ನಿವೇನು ಮಾಡುತ್ತೀರಾ? ಎಂಬ ಪ್ರಶ್ನೆಗೆ, ನೀವು ದೆಹಲಿ ಪೊಲೀಸರನ್ನು ನೋಡಿದ್ದಿರಾ, ಮಡಿಕೆ ರೀತಿಯ ಹೊಟ್ಟೆಯನ್ನು ಇಟ್ಟುಕೊಂಡು ಅವರಿಗೆ ಓಡಲು ಆಗುವುದಿಲ್ಲ, ಇನ್ನು ನನ್ನನ್ನು ಹೇಗೆ ಹಿಡಿಯುತ್ತಾರೆಂದು ಬಾಡಿ ಶೆಮಿಂಗ್ ಮಾಡಿದ್ದಾರೆ.
ಅವರು ನನ್ನನ್ನು ಹಿಡಿಯಲು ಬಂದರೆ, ನಾನು ಓಡಿ ಹೋಗುತ್ತೇನೆ. ಅವರಿಗೆ ಒಂದು 50 ನಿಮಿಷ ಓಡಲು ವಾರಗಳೇ ಬೇಕು ಎಂದು ಅಪಹಾಸ್ಯ ಮಾಡಿದ್ದಾಳೆ. ನಮ್ಮ ಪೊಲೀಸರಿಗೆ ಫಿಟ್ನೆಸ್ ಬಗ್ಗೆ ಮಾಹಿತಿಯೇ ಇಲ್ಲ, ಹೊಟ್ಟೆ ತಗೊಂಡು ಬಂದು ಬಿಡುತ್ತಾರೆ ಎಂದು ಜೋರಾಗಿ ನಗುತ್ತಾ, ತನ್ನನ್ನು ಹಿಡಿಯಲು ಇವರಿಂದೆಲ್ಲಾ ಆಗುವ ಮಾತಲ್ಲ ಎಂದಿದ್ದಾಳೆ.
ಆದರೆ, ಆಕೆ ಮಾತು ಮುಗಿಸುವಷ್ಟರಲ್ಲಿ ಕೆಲ ಪೊಲೀಸರು ಅಲ್ಲಿಗೆ ಆಗಮಿಸಿ, ಆ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ ಆ ಯುವತಿಯು ನನ್ನನ್ನು ಏಕೆ ಬಂಧಿಸುತ್ತಿದ್ದರಿ, ನಾನು ಕೇವಲ ಮಾತನಾಡುತ್ತಿದ್ದೆ. ನನ್ನನ್ನು ಬಿಟ್ಟುಬಿಡಿ ಎಂದು ಗೋಗರೆಯುತ್ತಿರುವುದನ್ನು ವಿಡಿಯೋನಲ್ಲಿ ಕಾಣಬಹುದಾಗಿದೆ.
ಈ ಯುವತಿಯ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್ ಸುರಿಮಳೆ ಹರಿದು ಬಂದಿದೆ. ಇದನ್ನೇ ಬಹುಶಃ ಇನ್ಸ್ಟಂಟ್ ಕರ್ಮಾ ಎನ್ನುತ್ತಾರೆಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಇದಕ್ಕೆ ಹೇಳುವುದು ಜೀವನದಲ್ಲಿ ವಿಶ್ವಾಸ ವಿರಬೇಕು, ಆದರೆ ಅತೀಯಾದ ಆತ್ಮವಿಶ್ವಾಸ ಇರಬಾರದೆಂದು ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೊಲೀಸರ ಹೊಟ್ಟೆ ಬಗ್ಗೆ ಮಾತನಾಡುವುದಲ್ಲ, ದಿನಕ್ಕೆ 12-14 ಗಂಟೆ ಜನರಿಗಾಗಿ ಕೆಲಸ ಮಾಡುವ ಜೀವವದು ಎಂದು ಮತ್ತೊಬ್ಬರು ಯುವತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ, (ಏಜೆನ್ಸೀಸ್).