Ankita Amar: ಕುಲವಧು ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ನಮ್ಮನೆ ಯುವರಾಣಿ, ಶ್ರೀಮತಿ ಶ್ರೀನಿವಾಸ ಮೊದಲಾದ ಸೀರಿಯಲ್ಗಳಲ್ಲಿ ಸೈ ಎನಿಸಿಕೊಂಡು, ನಂತರ ಮೈ ಹಿರೋ, ಇಬ್ಬನಿ ತಬ್ಬಿದ ಇಳೆಯಲಿ ಹಾಗೂ ಜಸ್ಟ್ ಮ್ಯಾರಿಡ್ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ನಟಿ ಎಂದರೆ ಅದು ಅಂಕಿತಾ ಅಮರ್ ಆಗಿದ್ದಾರೆ. ಇವರ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಅಭಿನಯಕ್ಕೆ ಸೈಮಾ ಅತ್ಯುತ್ತಮ ಪಾದಾರ್ಪಣಾ ನಟಿ ಪ್ರಶಸ್ತಿ ಕೂಡ ಲಭಿಸಿದೆ.
ಇತ್ತೀಚೆಗೆ ಅಂಕಿತಾ, ಮೈಸೂರಿನ ಮಾನಸ ಗಂಗ್ರೋತ್ರಿಯಲ್ಲಿ ನಡೆಯುತ್ತಿರುವ ಯುವ ಸಂಭ್ರಮ ಎಂಬ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಲ್ಲಿ ಕ್ಲಕ್ಕಿಸಿಕೊಂಡ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.