ನಮ್ಮನ್ನು 'ಕಾಕ್ರೋಚ್' ಎಂದಿದಕ್ಕೆ ಥ್ಯಾಂಕ್ಸ್: ಅಂದು CJI 'ಆ' ಮಾತನ್ನು ಹೇಳದಿದ್ದರೆ ಇಂದು ಪ್ರಧಾನ್ ರಾಜೀನಾಮೆ ನೀಡುತ್ತಿರಲಿಲ್ಲ: ಅಭಿಜಿತ್ ದೀಪ್ಕೆ! Abhijit Dipke on CJI Surya Kant
ಸಿಜೆಐ ತಮ್ಮನ್ನು 'ಕಾಕ್ರೋಚ್' ಎಂದು ಕರೆಯದಿದ್ದರೆ ಈ ಹೋರಾಟವೇ ಹುಟ್ಟುತ್ತಿರಲಿಲ್ಲ: ಅಭಿಜಿತ್ ದೀಪ್ಕೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿಜೆಐ ತಮ್ಮನ್ನು 'ಕಾಕ್ರೋಚ್' ಎಂದು ಕರೆಯದಿದ್ದರೆ ಈ ಹೋರಾಟವೇ ಹುಟ್ಟುತ್ತಿರಲಿಲ್ಲ: ಅಭಿಜಿತ್ ದೀಪ್ಕೆ
ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿಕೆ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ನಂತರ ಅವರು ಮುಖ್ಯ ನ್ಯಾಯಾಧೀಶರಿಗೆ ಧನ್ಯವಾದ
ನವದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ ಕ್ರಾಕ್ರೋಚ್ ಜನತಾ ಪಾರ್ಟಿ ನಡೆಸಿದ್ದ ಹೋರಾಟಕ್ಕ ಜನ ದೊರೆತಿದ್ದು, ಸಿಜೆಪಿ ಆಗ್ರಹದಂತೆ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಶನಿವಾರ (ಜು.25) ರಾಜೀನಾಮೆ ನೀಡಿದ್ದಾರೆ.
ಸಚಿವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆ ಕಾಕ್ರೋಚ್ ಪಾರ್ಟಿಯ ಸ್ಥಾಪಕ ಅಭಿಜಿತ್ ದೀಪ್ಕೆ, ಭಾರತದ ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ್ (Abhijit Dipke on CJI Surya Kant) ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಶಿಕ್ಷಣ ಸಚಿವ ಸ್ಥಾನದಿಂದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸುತ್ತಿದ್ದಂತೆ ಅಭಿಜಿತ್ ದೀಪ್ಕೆ ಹರ್ಷ ವ್ಯಕ್ತಪಡಿಸಿದ್ದು, ಇದು ಕಾಕ್ರೋಚ್ಗಳ ಗೆಲುವು, ಪ್ರಜಾಪ್ರಭುತ್ವದ ಗೆಲುವು ಎಂದಿದ್ದಾರೆ.
ಹಾಗೆಯೇ ನಮ್ಮಂಥ ಯುವಕ-ಯುವತಿಯರಿಗೆ ಕಾಕ್ರೋಚ್ಗಳೆಂದು ಕರೆದಿದ್ದ ಭಾರತದ ಮುಖ್ಯನ್ಯಾಯಾಧೀಶರಾದ ಸೂರ್ಯಕಾಂತ್ ಅವರಿಗೂ ಧನ್ಯವಾದಗಳು.ಅವರು ಆ ದಿನ ನಮನ್ನು ಕಾಕ್ರೋಚ್ಗಳು ಎಂದು ಕರೆಯದೇ ಹೋಗಿದ್ದರೆ, ನಮ್ಮ ಪಾರ್ಟಿ ಹುಟ್ಟುತ್ತಿರಲಿಲ್ಲ, ಈ ಹೋರಾಟವಾಗುತ್ತಿರಲಿಲ್ಲ ಹಾಗೂ ಮಕ್ಕಳಿಗೆ ನ್ಯಾಯ ಸಿಗುತ್ತಲೂ ಇರಲಿಲ್ಲ ಎಂದಿದ್ದಾರೆ.
ನ್ಯಾಯಾಧೀಶರ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡ ಕಾಕ್ರೋಚ್ಗಳು!
ಮೇ.15ರಂದು ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಸಿಜೆಐ ಸೂರ್ಯಕಾಂತ್ ಅವರು, ಕೆಲವೊಂದಿಷ್ಟು ಯುವಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ವೃತ್ತಿಯಲ್ಲಿ ಯಾವುದೇ ಸ್ಥಾನಮಾನವಿಲ್ಲ, ತಮ್ಮನ್ನು ತಾವೇ ಏನೋ ಎಂದಿಕೊಂಡಿದ್ದಾರೆ. ಅವರೆಲ್ಲಾ ಕಾಕ್ರೋಚ್ (ಜಿರಳೆ) ಗಳಿದ್ದಂತೆ ಎಂದು ಹೇಳಿದ್ದರು.
ಆದರೆ ಸಿಜೆಐ ಅವರು ಈ ಮಾತನ್ನು ದೇಶದ ಎಲ್ಲಾ ಯುವಕ/ಕಿ ಗಲ್ಲ ಬದಲಾಗಿ ನಕಲಿ ವಕೀಲಿ ವೃತ್ತಿಯಲ್ಲಿ ನಿರತರಾಗಿರುವವರಿಗೆ ಈ ಮಾತನ್ನು ಹೇಳಿದ್ದರು. ಆದರೆ ಈ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡ ಅಭಿಜಿತ್ ದೀಪ್ಕೆ ಎಂಬಾತ ಕಾಕ್ರೋಚ್ ಜನತಾ ಪಾರ್ಟಿ ಎಂಬ ಸೋಷಿಯಲ್ ಮೀಡಿಯಾ ಖಾಯೆಯನ್ನು ಸೃಷ್ಟಿಸಿ ದೇಶದ ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ.
ನಮ್ಮ ಜೊತೆ ನಿಮ್ಮ ಆಟ ಬೇಡ: ಅಭಿಜಿತ್ ದೀಪ್ಕೆ
'ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ. ನಾವು ಸಾಧಿಸಿದ್ದೇವೆ, ಪ್ರಜಾಪ್ರಭುತ್ವ ಗೆದ್ದಿದೆ, ಜಿರಳೆಗಳು ಗೆದ್ದಿವೆ. ಈಗ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು ಮತ್ತು ಪೊಲೀಸರ ದೌರ್ಜನ್ಯದ ವಿರುದ್ಧ ಕ್ರಮ ಜರುಗಬೇಕು ಎಂದಿದ್ದಾರೆ.
ವಿದ್ಯಾರ್ಥಿಗಳ ಪೊಲೀಸರು ಲಾಠಿ ಬೀಸಿದ್ದೀರಿ ಅಲ್ವಾ? ನಮ್ಮ ಜೊತೆ ನಿಮ್ಮ ಆಟ ಬೇಡ. ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಕಾಕ್ರೋಚ್ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ, (ಏಜನ್ಸೀಸ್).