ಮೇ 04ರ ಚುನಾವಣೆ ಫಲಿತಾಂಶಕ್ಕೂ ಮುನ್ನ ದಳಪತಿ ವಿಜಯ್ ಟೆಂಪಲ್ ರನ್; ನಿನ್ನೆ ತಿರುಚೆಂಡೂರು, ಇಂದು ಶಿರಡಿ | Thalapathy Vijay

ದಳಪತಿ ವಿಜಯ್
ದಳಪತಿ ವಿಜಯ್
Published on
ಚೆನ್ನೈ: ಮೇ 04ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಟೆಂಪಲ್ ರನ್ ಶುರು ಮಾಡಿಕೊಂಡಿರುವ ತಮಿಳು ಸೂಪರ್ ಸ್ಟಾರ್ ಮತ್ತು ಟಿವಿಕೆ ಮುಖಸ್ಥ ದಳಪತಿ ವಿಜಯ್, ನಿನ್ನೆ ತಿರುಚೆಂಡೂರು ಮುರುಗನ್​ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ಇಂದು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಮಂಗಳವಾರ ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಪಕ್ಷದ ಮೊದಲ ಚುನಾವಣಾ ಸ್ಪರ್ಧೆಯಲ್ಲಿ ಯಶಸ್ಸು ಕೋರಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಶತ್ರು ಸಂಹಾರ ಪೂಜೆ ನಡೆಸಿದ್ದಾರೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಮುರುಗನ್ ದೇವರ ಆರು ಪವಿತ್ರ ಸ್ಥಳಗಳಲ್ಲಿ ಎರಡನೆಯದಾದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ತೂತುಕುಡಿ ಜಿಲ್ಲೆಯಲ್ಲಿದೆ.
ಇಂದು ಬೆಳಗ್ಗೆ ವಿಜಯ್ ಚೆನ್ನೆ ವಿಮಾನ ನಿಲ್ದಾಣದಿಂದ ಶಿರಡಿಗೆ ಪ್ರಯಾಣ ಬೆಳಿಸಿದ್ದಾರೆ. ಆಡಳಿತರೂಢ ಡಿಎಂಕೆ ಮತ್ತು ವಿಪಕ್ಷ ಎಐಎಡಿಎಂಕೆ ಎರಡನ್ನೂ ಎದುರಿಸಿ ಏಕಾಂಗಿಯಾಗಿ ಸ್ಪರ್ಧಿಸಿರುವ ವಿಜಯ್, ಅಧಿಕಾರ ಹಿಡಿಯುವ ಅಥವಾ ಕಿಂಗ್ ಮೇಕರ್ ಆಗುವ ಕನಸು ಕಂಡಿದ್ದಾರೆ.
ಇನ್ನೂ ಚುನಾವಣೆ ಬಳಿಕ ವಿಶ್ರಾಂತಿ ಮೂಡನಲ್ಲಿರುವ ಡಿಎಂಕೆ ಮುಖ್ಯಸ್ಥ ಮತ್ತು ಸಿಎಂ ಎಂ.ಕೆ.ಸ್ಟಾಲಿನ್, ಕುಟುಂಬದೊಂದಿಗೆ ಕೊಡೈಕೆನಾಲ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ವಿಪಕ್ಷ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರು ತಮ್ಮ ಹುಟ್ಟೂರು ಸೇಲಂನಲ್ಲಿ ತಂಗಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net