ನವದೆಹಲಿ: ಬಿಷ್ಕೆಕ್‌ನಲ್ಲಿ ಮಂಗಳವಾರ(ಏ. 28) ನಡೆದ ಶಾಂಘೈ ಸಹಕಾರಿ ಸಂಸ್ಥೆಯ ರಕ್ಷಣಾ ಸಚಿವರ ಶೃಂಗಸಭೆಯಲ್ಲಿ, ಭಯೋತ್ಪಾದನೆಗೆ ರಾಷ್ಟ್ರೀಯತೆ ಮತ್ತು ಧರ್ಮಶಾಸ್ತ್ರವಿಲ್ಲ ಎಂಬ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಆರೋಪಿಸಿದೆ.