

ಬೇರೋಬ್ಬ ಲೆಕ್ಚರರ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದಕ್ಕೆ ಸಿಟ್ಟು
ಕೀಟನಾಶಕ ಕುಡಿಸಿ 20 ವರ್ಷದ ವಿದ್ಯಾರ್ಥಿನಿ ಅಕ್ಷಿತಾ ರಾಣಿ ಕೊಲೆ
ರವಿಕುಮಾರ್, ನವೀನ್ ಕುಮಾರ್ ಹೆಸರಿನ ಲೆಕ್ಚರರ್ಸ್ ಅರೆಸ್ಟ್
ಹೈದರಾಬಾದ್: ಬೇರೋಬ್ಬ ಲೆಕ್ಚರರ್ನೊಂದಿಗೆ ಆತ್ಮೀಯವಾಗಿ ಸ್ನೇಹ ಬೆಳಸಿಕೊಂಡಿದ್ದಕ್ಕೆ ಸಿಟ್ಟಾದ ಶಿಕ್ಷಕ, 20 ವರ್ಷದ ವಿದ್ಯಾರ್ಥಿನಿಗೆ ಬಲವಂತವಾಗಿ ಕೀಟನಾಶಕ ಸೇವಿಸುವಂತೆ ಮಾಡಿ, ಡೆತ್ ನೋಟ್ ಬರೆಸಿ ಕೊಲೆ ಮಾಡಿದ ಘಟನೆ ತೆಲಂಗಾಣದ ಬೆಳಕಿಗೆ ಬಂದಿದೆ.
ಮೃತ ವಿದ್ಯಾರ್ಥಿನಿಯನ್ನು ಥಂಡ್ರಾ ಅಕ್ಷಿತಾ ರಾಣಿ ಎಂದು ಗುರುತಿಸಲಾಗಿದೆ. ಇನ್ನೂ ನಸ್ಪುರದ ಸಿಂಗರೇಣಿ ಕಾಲರಿಯೀಸ್ ಪಾಲಿಟೆಕ್ನಿಕ್‌ನಲ್ಲಿ ಹೊರ ಗುತ್ತಿಗೆ ಲೆಕ್ಚರ್ ಆಗಿ ಸೇವೆ ಸಲ್ಲಿಸುತ್ತಿರುವ ನವೀನ್ ಕುಮಾರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಷಿತಾ ನಸ್ಪುರದ ಸಿಂಗರೇಣಿ ಕಾಲರಿಯೀಸ್ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲಮೋ ಓದುವಾಗ ನವೀನ್ ಕುಮಾರ್(38) ಪರಿಚಯವಾದರು. ಅಲ್ಲಿಂದ ಆಕೆ ಹೈದರಾಬಾದ್ಗೆ ಮೈನಿಂಗ್ ಎಂಜಿನಿಯರ್ ಮಾಡಲು ತೆರಳಿದಳು. ಅಲ್ಲಿ ಅಪ್ರೆಂಟಿಸ್ ವಿಭಾದಲ್ಲಿದ್ದ ರವಿ ಕುಮಾರ್(35) ಎಂಬ ಯುವಕ ಪರಿಚಯವಾಗಿದ್ದ. ಆತನೊಂದಿಗೆ ಆತ್ಮೀತವಾಗಿದ್ದಳು.
ಈ ನಿಟ್ಟಿನಲ್ಲಿ ನವೀನ್ ಕುಮಾರ್ ಜೊತೆಗೆ ಅಕ್ಷತಾಳ ಮಾತುಕತೆ ಕಡಿಮೆಯಾಗುತ್ತಾ ಬಂದಿತ್ತು. ರವಿ ಕುಮಾರ್ ಜೊತೆಗೆ ಕ್ಲೋಸ್ ಆಗಿರುವ ಕಾರಣ ನನ್ನೊಂದಿಗೆ ಮಾತನಾಡೋದು ಕಡಿಮೆ ಮಾಡಿದ್ದಾಳೆ. ತನ್ನಿಂದ ದೂರದ ಅಕ್ಷತಾ ರಾಣಿ ರವಿಕುಮಾರ್ ಜೊತೆಗೆ ಸಂಬಂಧ ಬೆಳೆಸುತ್ತಿರುವುದನ್ನು ನವೀನ್ ಸಹಿಸಲಾಗಲಿಲ್ಲ ಎಂದು ಒಳಗೊಳಗೆ ಬೇಸರ ಮಾಡಿಕೊಳ್ಳುತ್ತಿದ್ದ. ಜೊತೆಗೆ ಕೊಲೆಗೆ ಕತ್ತಿ ಮಸಿದುಕೊಳ್ಳುತ್ತಿದ್ದ.
ಇದನ್ನೂ ಓದಿ: ತಮ್ಮನ ಸಾವಿನ ಸುಳಿವು ಕೊಟ್ಟ ವಾಟ್ಸಾಪ್ ಮೆಸೇಜ್!; Sharjahದಲ್ಲಿ ಉಡುಪಿ ಮೂಲದ ವ್ಯಕ್ತಿ ಹ*ತ್ಯೆ, ಪತ್ನಿ-ಮಗ ನಾಪತ್ತೆ
ಅವರಿಬ್ಬರ ವಿರುದ್ಧ ದ್ವೇಷ ಬೆಳೆಸಿಕೊಂಡನು. ಅದಾದ ಬಳಿಕ ಹಠಾತ್ತನೇ ಅಕ್ಷಿತಾ ರಾಣಿ ಡೆತ್ ನೋಟ್ ಬರೆದಿಟ್ಟು ಕೀಟ ನಾಶಕ ಸೇವನೆ ಮಾಡಿ ಅತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ನಂಬಿ ಸುಮ್ಮನಾದರು. ಪೊಲೀಸರು ಸಹ ಅಸಹಜ ಸಾವು ಎಂದು ಪರಿಗಣಿಸಿ ತೀವ್ರ ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.
ಪೆದ್ದ ಪಲ್ಲಿ ಉಪ ಪೊಲೀಸ್ ಆಯುಕ್ತ ಬಿ ರಾಮ್ ರೆಡ್ಡಿ ಅವರು ಕೊಟ್ಟ ಮಾಹಿತಿ ಪ್ರಕಾರ, ಸೆ.12ರಂದು ಅಕ್ಷಿತಾ ರಾಣಿ ಅವರು ಕಾಲೇಜಿನಿಂದ ಎಫ್‌ಸಿಐ ಕ್ರಾಸ್‌ರೋಡ್ಸ್ ಬಳಿ ಆಕೆಯನ್ನು ಅಡ್ಡಗಟ್ಟಿ ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಕೂರಿಸಿ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಅಲ್ಲದೇ ರವಿ ಕುಮಾರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿ ಪತ್ರ ಬರೆಯುವಂತೆ ಒತ್ತಾಯಿಸಿದ್ದಾನೆ. ಜೊತೆಗೆ ಕೀಟನಾಶಕವನ್ನು ಕುಡಿಸಿದ್ದ. ಸರಿಯಾದ ಸಮಯದಲ್ಲಿ ಅಕ್ಷಿತಾ ರಾಣಿಗೆ ವೈದ್ಯಕೀಯ ಚಿಕಿತ್ಸೆ ಸಿಗಬಾರದು ಎಂದು ತಡ ಮಾಡಿದ್ದ.
ಯುವತಿಯ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಿದ್ದಾರೆ. ಅಕ್ಷಿತಾ ರಾಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾದೇ ಅವರು ಮೃತಪಟ್ಟಿದ್ದಾರೆ.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ, ಕಾಲ್ ರೆಕಾರ್ಡಿಂಗ್, ಕಾಲ್ ಲಾಗ್ ತಾಂತ್ರಿಕ ಸಾಕ್ಷಿಯಿಂದಾಗಿ ನವೀನ್ನಿಂದಲೇ ಈ ಕೊಲೆಯಾಗಿದೆ ಎಂದು ಬಂಧಿಸಲಾಗಿದೆ. ಇನ್ನು ರವಿಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಆತನ ಪತ್ನಿ ದೌರ್ಜನ್ಯ ಆರೋಪವನ್ನು ಅವರ ತಳ್ಳಿ ಹಾಕಿದ್ದಾರೆ, (ಏಜೆನ್ಸೀಸ್).