ಸಮೀಕ್ಷೆಯಲ್ಲಿ, ಈ ಬೆಳವಣಿಗೆಗಳನ್ನು ನಿರ್ಣಯಿಸಲು ಯುಎಸ್‌ನಲ್ಲಿ ವೃತ್ತಿಪರ, ವ್ಯವಹಾರ ಮತ್ತು ಮಾಹಿತಿ ಸೇವೆಗಳ (PBIS) ವಲಯವನ್ನು ಪ್ರಮುಖ ಸೂಚಕವಾಗಿ ಬಳಸಲಾಯಿತು. ಡಿಸೆಂಬರ್ 2022ರ ಬಳಿಕ ಉತ್ಪಾದಕ ಎಐ ಆವಿಷ್ಕಾರಗಳನ್ನು ಪರಿಚಯಿಸಿದಾಗಿನಿಂದ ಜಿಡಿಪಿ ಬೆಳವಣಿಗೆ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಆದರೆ, ಉದ್ಯೋಗ ಬೆಳವಣಿಗೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಯ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂದು ಹೇಳಿದೆ.