ಫ್ರೀ ವೈಫೈ ಬಳಸ್ತಿದ್ರೆ ಎಚ್ಚರ! ಈ ಸೆಟ್ಟಿಂಗ್ಸ್​ ಆಫ್​/ಆನ್​ ಮಾಡಿಕೊಂಡ್ರೆ ಮಾತ್ರ ಹ್ಯಾಕರ್​ಗಳಿಂದ ಬಚಾವ್​​​ | WiFi

ಉಚಿತ ವೈ-ಫೈ
ಉಚಿತ ವೈ-ಫೈ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಉಚಿತ ವೈಫೈ ಬಳಕೆ ಹೆಚ್ಚಾಗಿದೆ
  • ಕೆಫೆ, ರೈಲು ನಿಲ್ದಾಣ, ಮಾಲ್‌, ಏರ್​ಪೋರ್ಟ್​ಗಳಲ್ಲಿ ಸಿಗುವ ಉಚಿತ ವೈ-ಫೈ ಬಳಕೆಗೆ ಜನರು ಮುಂದಾಗುತ್ತಿದ್ದಾರೆ
  • ಯಾವುದೇ ಲಿಂಕ್ ಕ್ಲಿಕ್ ಮಾಡದಿದ್ರೂ, OTP ಇಲ್ಲದಿದ್ರೂ ಕ್ಷಣಮಾತ್ರದಲ್ಲಿ ನಿಮ್ಮ ಖಾಸಗಿ ಡಿಟೇಲ್​ಗಳು ಲೀಕ್​​
  • ಡೇಟಾ ಎನ್‌ಕ್ರಿಪ್ಶನ್ ಕೊರತೆಯು ಹ್ಯಾಕರ್‌ಗಳಿಗೆ ಸುಲಭ
ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಳ್ಳುವುದು, ಆಗಾಗ್ಗೆ ಮೊಬೈಲ್​ ಫೋನ್​ ನೋಡುವ ಅಭ್ಯಾಸ ಇಂದು ಹಲವರಿಗೆ ತೀರ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಇದು ಡಿಜಿಟಲ್ ಯುಗ ಅಂದಮೇಲೆ ಕೇಳಬೇಕೇ? ಸ್ಮಾರ್ಟ್​ಫೋನ್​ ಒಂದಿದ್ರೆ ಸಾಕು ಈ ಪ್ರಪಂಚವೇ ಬೇಡ. ರೀಲ್ಸ್, ವಿಡಿಯೋ ಎನ್ನುತ ಸಮಯ ಕಳೆಯುವವರ ಸಂಖ್ಯೆಯೇ ಹೆಚ್ಚು.
ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಬಸ್​, ರೈಲು ಮತ್ತು ಫ್ಲೈಟ್​ಗಳಿಗೆ ಕಾಯುವ ಅನೇಕರು, ಅಲ್ಲಿ ಸಿಗುವ ಉಚಿತ ವೈ-ಫೈಗೆ ಬೇಗ ಕನೆಕ್ಟ್​ ಆಗ್ತಾರೆ. ಕಾರಣ, ಇದಕ್ಕೆ ಯಾವುದೇ ಇತಿ-ಮಿತಿ ಇಲ್ಲ ಎಂಬ ಕಾರಣ. ಕೆಲವರು ರೀಲ್ಸ್​, ವಿಡಿಯೋ ನೋಡಲು ಬಳಸಿದರೆ, ಇನ್ನೂ ಕೆಲವರು ತಮ್ಮ ಇಮೇಲ್​ ಕಳುಹಿಸುವಿಕೆ ಸೇರಿದಂತೆ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ಬಳಕೆ ಮಾಡುತ್ತಾರೆ. ಆದರೆ, ಇದು ಭಾರೀ ಡೇಂಜರ್​ ಎಂಬುದು ನಿಮಗೆ ನೆನಪಿರಲಿ.
ಫ್ರೀ ವೈಫೈ ಬಳಸುವುದರಿಂದ ನಿಮ್ಮ ವೈಯಕ್ತಿಕ ಡೇಟಾಗೆ ದೊಡ್ಡ ಬೆದರಿಕೆ ಎದುರಾಗುಬಹುದು. ನೀವು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದಿದ್ದರೂ, ಒಟಿಪಿ ಕೊಡದೇ ಹೋದ್ರೂ ಹ್ಯಾಕರ್​ಗಳು ಬಹಳ ಸುಲಭವಾಗಿ ಹಾಗೂ ಕ್ಷಣಮಾತ್ರದಲ್ಲಿ ನಿಮ್ಮ ಖಾತೆಗಳನ್ನು ಹ್ಯಾಕ್ ಮಾಡಿಡುತ್ತಾರೆ. ಆಗ ನಿಮ್ಮ ಬ್ಯಾಂಕ್​ ಅಕೌಂಟ್​, ಫೋಟೋಸ್​, ಪ್ರಮುಖ ದಾಖಲಾತಿ, ಪಾಸ್​ವರ್ಡ್​ಗಳ ಮೇಲಿನ ಸಂಪೂರ್ಣ ಹಿಡಿತ ಹ್ಯಾಕರ್​ಗಳ ಕೈಯಲ್ಲಿರುತ್ತದೆ. ಇದು ನಿಮಗೆ ನೀವೇ ತಂದಿಟ್ಟುಕೊಳ್ಳುವ ದೊಡ್ಡ ದುರಂತ.

ಉಚಿತ ವೈ-ಫೈ ಬಳಕೆಗೂ ಮುನ್ನ ಮುನ್ನಚ್ಚೆರಿಕೆ ವಹಿಸಿ

VPN ಬಳಸಿ: ಇದು ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ನೆಟ್‌ವರ್ಕ್ ಅನ್ನು ಗಮನಿಸುವ ಯಾರಾದರೂ ನಿಮ್ಮ ಮಾಹಿತಿಯನ್ನು ಓದಲು ಹಾಗೂ ಕದಿಯಲು ಸಾಧ್ಯವಿಲ್ಲ.

HTTPS ವೆಬ್‌ಸೈಟ್‌ಗಳಿಗೆ ಮಾತ್ರ ಪ್ರಾಮುಖ್ಯತೆ

ನಿಮ್ಮ ಪಾಸ್‌ವರ್ಡ್‌ಗಳು ಮತ್ತು ವಿವರಗಳನ್ನು ಎಂಟ್ರಿ ಮಾಡುವ ಮೊದಲು, ವೆಬ್‌ಸೈಟ್ https:// ನಿಂದ ಆರಂಭವಾಗುತ್ತದೆಯೋ ಎಂಬುದನ್ನು ಚೆಕ್​ ಮಾಡಿಕೊಳ್ಳಿ. ಇದೀದ್ದರೆ ಮಾತ್ರ ಬಳಸಿಕೊಳ್ಳಿ.

2 ಸ್ಟೆಪ್​ ವೆರಿಫಿಕೇಶನ್​ ಆನ್ ಇರಲಿ

ಇಮೇಲ್, ಸೋಷಿಯಲ್ ಮೀಡಿಯಾ, ಬ್ಯಾಂಕಿಂಗ್ ಮತ್ತು ಯುಪಿಐ ಪೇಮೆಂಟ್​ ಅಪ್ಲಿಕೇಶನ್‌ಗಳಿಗೆ ದೃಢೀಕರಣ ಕಡ್ಡಾಯ ಮಾಡಿಕೊಳ್ಳಿ. ಅಂದರೆ ಎರಡು ಹಂತದ ವೆರಿಫಿಕೇಶನ್​ ಆನ್​ ಮಾಡಿ. ಇದು ಆಗಾಗ್ಗೆ ನಿಮ್ಮ ಅನುಮತಿಯನ್ನು ಕೇಳುತ್ತಿರುತ್ತದೆ. ಇದರಿಂದ ನಿಮ್ಮ ಡೇಟಾಗೆ ಭದ್ರತೆ ಇರುತ್ತದೆ.

ಆಟೋ ಕನೆಕ್ಟ್​ ಆಫ್​ ಮಾಡಿ

ನಿಮ್ಮ ವೈಫೈ ಸೆಟ್ಟಿಂಗ್ಸ್​ನಲ್ಲಿ ಆಟೋ ಕನೆಕ್ಟ್​ ಆಯ್ಕೆಯನ್ನು ಮೊದಲು ಆಫ್​ ಮಾಡಿ. ಇದು ಸಿಕ್ಕ ಸಿಕ್ಕ ನೆಟ್‌ವರ್ಕ್‌ಗಳಿಗೆ ಆಟೋಮೆಟಿಕ್​ ಆಗಿ ಕನೆಕ್ಟ್ ಆಗಿಬಿಡುತ್ತದೆ.

ಇದಕ್ಕೆಲ್ಲ ಮೊಬೈಲ್ ಡೇಟಾ ಬಳಸಿ

ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ಸ್​ ಮತ್ತು ಆಫೀಸ್​ ಐಡಿ ಲಾಗಿನ್‌ ಸೇರಿದಂತೆ ಒಂದಷ್ಟು ನಿಮ್ಮ ವೈಯಕ್ತಿಕ ಕೆಲಸಗಳಿಗೆ ಮೊಬೈಲ್ ಡೇಟಾ ಆನ್​ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net