ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾಗಿರುವ ರೆಹಮಾನ್, 17 ವರ್ಷಗಳ ಕಾಲ ದೇಶಭ್ರಷ್ಟರಾಗಿ ವಿದೇಶದಲ್ಲಿ ನೆಲೆಸಿದ್ದರು. 2024ರ ಸಾಮೂಹಿಕ ದಂಗೆ ಬಳಿಕ ಮತ್ತು ಶೇಖ್ ಹಸೀನಾ ಸರ್ಕಾರ ಪತನವಾಗಿ ವರ್ಷದ ನಂತರ ಚುನಾವಣೆ ಹಿನ್ನೆಲೆ ಮತ್ತು ಕಳೆದ ಡಿಸೆಂಬರ್ನಲ್ಲಿ ತಾಯಿ ಖಲೀದಾ ಜಿಯಾ ನಿಧನರಾದ ಬಳಿಕ ರೆಹಮಾನ್ ಇತ್ತೀಚೆಗೆ ಸ್ವದೇಶಕ್ಕೆ ಆಗಮಿಸಿದ್ದರು.