ಹೆಸರು ಕೇಳಿ ಗುಂಡಿಕ್ಕಿದ ಉಗ್ರರು: ಧರ್ಮವನ್ನಾಧರಿಸಿ ಕೊಲೆ ಶಂಕೆ; ಕಣಿವೆ ರಾಜ್ಯದಲ್ಲಿ ಬಲಿಯಾದ ಛತ್ತೀಸ್​ಗಢದ ಕಾರ್ಮಿಕರು! Targeted Killings in Jammu And Kashmir

ಹೆಸರು ಕೇಳಿ ಗುಂಡಿಕ್ಕಿ ಛತ್ತೀಸ್​ಗಢದ ಇಬ್ಬರು ಕಾರ್ಮಿಕರ ಹತ್ಯೆ
ಹೆಸರು ಕೇಳಿ ಗುಂಡಿಕ್ಕಿ ಛತ್ತೀಸ್​ಗಢದ ಇಬ್ಬರು ಕಾರ್ಮಿಕರ ಹತ್ಯೆ
Published on

ಪ್ರಮುಖ ಮುಖ್ಯಾಂಶಗಳು

  • ಕಣಿವೆ ರಾಜ್ಯದಲ್ಲಿ ಉಗ್ರರ ಕೃತ್ಯ
  • ಹೆಸರು ಕೇಳಿ ಗುಂಡಿಕ್ಕಿ ಛತ್ತೀಸ್​ಗಢದ ಇಬ್ಬರು ಕಾರ್ಮಿಕರ ಹತ್ಯೆ
  • ಧರ್ಮವನ್ನಾಧರಿಸಿ ನಡೆದ ಹತ್ಯೆ ಶಂಕೆ
ಜಮ್ಮು-ಕಾಶ್ಮೀರ: ಛತ್ತೀಸ್​ಗಢದಿಂದ ಜಮ್ಮು-ಕಾಶ್ಮೀರಕ್ಕೆ ಕೂಲಿ ಕೆಲಸಕ್ಕೆಂದು ತೆರಳಿದ್ದ ಇಬ್ಬರು ಕಾರ್ಮಿಕರನ್ನು ಅವರ ಧರ್ಮದ ಗುರುತಿನ ಆಧಾರದ ಮೇಲೆ (Targeted Killings in Jammu And Kashmir) ಹತ್ಯೆ ಮಾಡಿರುವ ಘಟನೆ ಕಾಶ್ಮೀರದ ಕುಲ್ಗಮ್​ನಲ್ಲಿ ವರದಿಯಾಗಿದೆ.
ಈ ಘಟನೆಯು ಶುಕ್ರವಾರ (ಜು.31) ಸಂಜೆ ಸಮಯದಲ್ಲಿ ನಡೆದಿದ್ದು, ಈ ಕೃತ್ಯವು ಕಳೆದ ವರ್ಷ ಪಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯ ಮಾದರಿಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಹೆಸರನ್ನು ಕೇಳಿ ಹಲ್ಲೆ!

ಮೃತ ದುರ್ದೈವಿಗಳನ್ನು ದೀಪಕ್ ರಾತ್ರೇ, ಹಾಗೂ ಬೋಪಿಂದರ್​ ಎಂದು ಗುರುತಿಸಲಾಗಿದೆ. ಇವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಇತರ ಧರ್ಮದ ವಲಸೆ ಕಾರ್ಮಿಕರಿದ್ದರೂ ಇವರಿಬ್ಬರನ್ನೇ ಆಯ್ಕೆ ಮಾಡಿ ಭಯೋತ್ಪಾದಕರು ಸಾಯಿಸಿದ್ದಾರೆಂದು ತಿಳಿದು ಬಂದಿದೆ. ಈ ಉಗ್ರದಾಳಿಯನ್ನು ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್​-ಎ-ತೊಬ್ದಾ ನಡೆಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ದೀಪಕ್ ರಾತ್ರೇಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆಯೇ ಪ್ರಾಣವನ್ನು ಕಳೆದುಕೊಂಡಿದ್ದರೆ, ಬೋಪಿಂದರ್​ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ಭದ್ರತಾ ಸಿಬ್ಬಂದಿಗಳು ತಿಳಿಸಿದ್ದಾರೆ.


ಸೇನೆ ಅಲರ್ಟ್​; ಮುಂದುವರಿದ ಕಾರ್ಯಾಚರಣೆ!


ಕಳೆದ ಕೆಲ ದಿನಗಳಿಂದ ಕಣಿವೆ ರಾಜ್ಯದಲ್ಲಿ ಮತ್ತೆ ಭಯೋತ್ಪಾದಕತೆ ಹಾಗೂ ಉದ್ವಿಗ್ನ ವಾತಾವರಣ ಹೆಚ್ಚಿದಂತಿದೆ. ಕೆಲ ದಿನಗಳ ಹಿಂದೆ ಪೊಲೀಸ್​ ಸಿಬ್ಬಂದಿವೊಬ್ಬನನ್ನು ಲಷ್ಕರ್​ ಉಗ್ರರು ಕೊಂದಿದ್ದ ಘಟನೆ ವರದಿಯಾಗಿತ್ತು.
ಈಗ ಹೆಸರನ್ನು ಕೇಳಿ, ಧರ್ಮವನ್ನು ಗುರುತಿಸಿ ವಲಸೆ ಕಾರ್ಮಿಕರನ್ನು ಕೊಲೆ ಮಾಡಿದ ಘಟನೆ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಉದ್ವಗ್ನ ಪರಿಸ್ಥಿತಿಗೆ ಕಾರಣವಾಗಬಹುದಾಗಿದೆ.
ಈ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಜಮ್ಮು ಪೊಲೀಸರು ಸಕ್ರೀಯರಾಗಿದ್ದು, ಈ ಕೊಲೆ ಹಿಂದಿರುವ ಗುಂಪು ಯಾವುದು? ಇವರ ಮೇಲೆ ಏಕೆ ದಾಳಿ ನಡೆಸಲಾಯಿತು? ಇದು ವೈಯಕ್ತಿಕ ದ್ವೇಷವೇ? ಅಥವಾ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಉದ್ದೇಶವೇ? ಎಂದು ತನಿಖೆ ಬಳಿಕ ತಿಳಿದು ಬರಬೇಕಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net