ತಮಿಳುನಾಡು ಚುನಾವಣೆ; ತನ್ನ 27 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ | Congress
ರಾಹುಲ್ ಗಾಂಧಿ ಮತ್ತು ಕೆ.ಸೆಲ್ವಪೆರುಂಥಗೈ
Published on:
Copied
Follow Us
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಆಡಳಿತರೂಢ ಡಿಎಂಕೆ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್(Congress), ಶುಕ್ರವಾರ(ಏ. 03) ತನ್ನ 27 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಸೆಲ್ವಪೆರುಂಥಗೈ ಅವರು ಶ್ರೀಪೆರುಂಬುದೂರಿನಿಂದ ಸ್ಪರ್ಧಿಸುತ್ತಿದ್ದು, ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆ ಕೆ.ಪಳನಿ ವಿರುದ್ಧ 11 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಶಾಸಕ ದುರೈ ಚಂದ್ರಶೇಖರ್ ಮತ್ತೊಮ್ಮೆ ಪೊನ್ನೇರಿಯಿಂದ ಸ್ಪರ್ಧಿಸುತ್ತಿದ್ದಾರೆ.
ಡಾ. ಎ. ಚೆಲ್ಲಾ ಕುಮಾರ್ ಕೃಷ್ಣಗಿರಿಯಿಂದ, ಜೆ.ಎಂ.ಎಚ್. ಅಸಾನ್ ಮೌಲಾನಾ ವೇಲಾಚೇರಿಯಿಂದ, ಎ.ಎಂ. ಮುನಿರತ್ನಂ ಶೋಲಿಂಗೂರಿನಿಂದ ಹಾಗೂ ಆರ್. ಕುಪ್ಪುಸ್ವಾಮಿ ಉತ್ತಂಗರೈ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಮಾ. 30ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಏ. 06 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏ. 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 04ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).