ಥೇಣಿ ಜೈಲಿನಿಂದ 17 ಕೈದಿಗಳು ಪರಾರಿ​: ಹಿರಿಯ ಜೈಲಧಿಕಾರಿ ಅಮಾನತು, ಸಿಬ್ಬಂದಿಗಳ ವರ್ಗಾವಣೆ ಮಾಡಿದ ಸಿಎಂ ವಿಜಯ್​ | CM Vijay

CM Vijay
ಥೇಣಿ ಜೈಲಿನಿಂದ 17 ಕೈದಿಗಳು ಎಸ್ಕೆಪ್! ಹಿರಿಯ ಜೈಲಧಿಕಾರಿ ಅಮಾನತು, ಸಿಬ್ಬಂದಿಗಳ ವರ್ಗಾವಣೆ ಮಾಡಿದ ಸಿಎಂ ವಿಜಯ್​ | CM Vijay
Published on: 

ಚೆನ್ನೈ: ತಮಿಳುನಾಡಿನ ಥೇಣಿ ಜಿಲ್ಲಾ ಕಾರಾಗೃಹದಿಂದ 17 ಕೈದಿಗಳು ಪರಾರಿಯಾಗಿರುವ ಘಟನೆಗೆ ಸಿಡಿದೆದ್ದ ಸಿಎಂ ವಿಜಯ್​ ನೇತೃತ್ವದ ಸರ್ಕಾರ ಇದೀಗ ಕಠಿಣ ಕ್ರಮ ಕೈಗೊಳ್ಳುವ ಮೂಲಕ ರಾಜ್ಯ ಪೊಲೀಸ್​ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಾರಾಗೃಹ ಆಡಳಿತ ಮತ್ತು ಭದ್ರತಾ ಮೇಲ್ವಿಚಾರಣೆಯಲ್ಲಿ ವೈಫಲ್ಯ ಆರೋಪದ ಹಿನ್ನೆಲೆಯಲ್ಲಿ ಥೇಣಿ ಜಿಲ್ಲಾ ಕಾರಾಗೃಹದ ಉಪ ಅಧೀಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹಲವಾರು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಕೆಲವರನ್ನು ವರ್ಗಾವಣೆ ಮಾಡಿ ಎಂದು ಸಿಎಂ ಜೋಸೆಫ್​ ವಿಜಯ್​ ಆದೇಶ ಹೊರಡಿಸಿದ್ದಾರೆ.

ಎಎನ್‌ಐ ವರದಿ ಪ್ರಕಾರ, 2024ರ ಆಗಸ್ಟ್‌ನಿಂದ ಥೇಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಾಗೃಹದ ಉಪ ಅಧೀಕ್ಷಕ ಎನ್.ರಾಮಲಿಂಗಂ ವಿರುದ್ಧ ಜೈಲಾಡಳಿತ ಮತ್ತು ಭದ್ರತಾ ಮೇಲ್ವಿಚಾರಣೆಯಲ್ಲಿ ವೈಫಲ್ಯಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 17 ಸಿಬ್ಬಂದಿ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.

ಥೇಣಿ ಜೈಲಿನಿಂದ 17 ಕೈದಿಗಳು ಪರಾರಿ

ಥೇಣಿ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದ ಒಟ್ಟು 17 ಕೈದಿಗಳನ್ನು ಪೊಲೀಸರು ಮತ್ತೆ ಬಂಧಿಸಿ, ಜೈಲಿಗೆ ನೂಕುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಬಂಧಿತ ಕೈದಿಗಳನ್ನು ರಾಜ್ಯದ ವಿವಿಧ ಹೆಚ್ಚಿನ ಭದ್ರತೆಯ ಜೈಲುಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ಚುರುಕಾಗಿಸಿದ್ದಾರೆ ಎಂದು ವರದಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಎಲ್ಲಾ ಜೈಲುಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತು ಕಣ್ಗಾವಲು ಬಿಗಿಗೊಳಿಸುವಂತೆ ಸಿಎಂ ಆದೇಶ ಹೊರಡಿಸಿದ್ದಾರೆ.

Also Read
ಶುಕ್ರವಾರವೇ ಸಿನಿಮಾಗಳು ರಿಲೀಸ್​ ಆಗುವುದೇಕೆ? ಚಿತ್ರೋದ್ಯಮದ ಈ ಲಾಜಿಕ್​ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್​ ಸ್ಟೋರಿ | Friday Release
CM Vijay

ಒಂದೇ ವಾರದಲ್ಲಿ 2 ಜೈಲು ಪರಾರಿ ಘಟನೆ

ಥೇಣಿ ಜಿಲ್ಲಾ ಕಾರಾಗೃಹದ ಘಟನೆಗೂ ಮುನ್ನ, ಇದೇ ಅಕ್ಟೋಬರ್ 20ರಂದು ಚೆನ್ನೈ ಸಮೀಪದ ಪುಝಲ್ ಹೈ ಸೆಕ್ಯುರಿಟಿ ಜೈಲಿನಿಂದ ಇಬ್ಬರು ಕೈದಿಗಳು ಪರಾರಿಯಾಗಿದ್ದರು. ಅವರನ್ನು ಹಿಡಿಯಲು ಪೊಲೀಸರು ಏಳು ವಿಶೇಷ ತಂಡಗಳನ್ನು ನಿಯೋಜಿಸಿದ್ದರು. ಎರಡು ದಿನಗಳ ನಿರಂತರ ಶೋಧದ ನಂತರ ಇಬ್ಬರು ಕೈದಿಗಳನ್ನು ಬಂಧಿಸಲಾಯಿತು. ಆದರೆ, ಅದರ ಮಧ್ಯೆಯೇ ಈಗ 17 ಕೈದಿಗಳು ಪರಾರಿಯಾದ ಘಟನೆ ಸದ್ಯ ರಾಜ್ಯ ಸರ್ಕಾರದ ಶಿಸ್ತಿನ ಕ್ರಮಕ್ಕೆ ಸಾಕ್ಷಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಸಂದೀಪ್ ರಾಯ್ ರಾಥೋಡ್ ಅವರನ್ನೂ ವರ್ಗಾವಣೆ ಮಾಡಲಾಗಿದೆ,(ಏಜೆನ್ಸೀಸ್).