ನಾಳೆ ಒಟ್ಟು 3.60 ಕೋಟಿಗೂ ಹೆಚ್ಚು ಮಂದಿ ಮತದಾನ ಮಾಡಲಿದ್ದಾರೆ. ಆಯೋಗವು 2,450 ಕೇಂದ್ರ ಅರೆಸೈನಿಕ ಪಡೆಗಳು ಸೇರಿದಂತೆ 2.5 ಲಕ್ಷ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಿದೆ. ಮಾಲ್ಡಾ, ಮುರ್ಷಿದಾಬಾದ್, ಉತ್ತರ ದಿನಾಜ್‌ಪುರ, ಕೂಚ್ ಬೆಹಾರ್, ಬಿರ್ಭುಮ್ ಹಾಗೂ ಬುರ್ದ್ವಾನ್‌ನಂತಹ ಜಿಲ್ಲೆಗಳ 8,000 ಮತಗಟ್ಟೆಗಳನ್ನು ಅತ್ಯಂತ ಸೂಕ್ಷ್ಮವೆಂದು ಗುರುತಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ 2,193 ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಿದೆ.