ಕೇರಳದ ಪಲಕ್ಕಾಡ್‌ನಲ್ಲಿ 'ಇಸ್ಲಾಮಿಕ್ ಫ್ರೆಂಡ್ಲಿ' ಜಿಮ್ ಆರಂಭಕ್ಕೆ ಸಿದ್ಧತೆ
ಹಿಜಾಬ್ ಕಡ್ಡಾಯ, ಮ್ಯೂಸಿಕ್ ಬ್ಯಾನ್ ನಿಯಮಗಳಿಗೆ ನೆಟ್ಟಿಗರು ಫುಲ್ ಗರಂ
ಇದು ತಾಲಿಬಾನ್ ಸಂಸ್ಕೃತಿ ಎಂದು ಆಕ್ರೋಶ
ಕೇರಳ: ಕೇರಳದ ಪಲಕ್ಕಡ್ನಲ್ಲಿ ವ್ಯಕ್ತಿಯೊಬ್ಬ ಇಸ್ಲಾಮಿಕ್ ಸ್ನೇಹಿ(ಇಸ್ಲಾಮಿಕ್ ಫ್ರೆಂಡ್ಲಿ) ಜಿಮ್ನ್ನು ತೆರೆಯಲು ಮುಂದಾಗಿದ್ದು, ಈ ಜಿಮ್ನ ನೂತನ ನಿಯಮಗಳು ಈಗ ಸೋಷಿಯಲ್ ಮೀಡಿಯಾನಲ್ಲಿ ಭಾರಿ ಚರ್ಚೆಗೆ (Kerala Gym Controversy) ಗ್ರಾಸವಾಗಿದೆ.
ಫಿಟ್ನೆಸ್ ಇಂಡಸ್ಟ್ರಿನಲ್ಲಿ ಸುಮಾರು 15 ವರ್ಷಗಳ ಅನುಭವ ಹೊಂದಿರುವ ವ್ಯಕ್ತಿಯೊಬ್ಬ ಕಳೆದ 15 ವರ್ಷಗಳಿಂದ ಕೇರಳದ ಪಲಕ್ಕಡ್ನ ಪುತ್ತುನಗರಂ ಎಂಬಲ್ಲಿ ಜಿಮ್ ನಡೆಸುತ್ತಾ ಬಂದಿದ್ದಾನೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾನಲ್ಲಿ ಪೋಸ್ಟ್ ಹಾಕಿದ್ದ ಈತ ಇನ್ಮುಂದೆ ನನ್ನ ಜಿಮ್ನ್ನು ಇಸ್ಲಾಮಿಕ್ ಫ್ರೆಂಡ್ಲಿಯಾಗಿ ಪರಿವರ್ತಿಸಲಿದ್ದೆನೆ. ಇಲ್ಲಿ ಈಗ ಹೊಸ ನಿಯಮಗಳು ಅನುಷ್ಠಾನಗೊಳ್ಳಲಿವೆ ಎಂದು ಹೇಳಿದ್ದಾನೆ.
ವ್ಯಕ್ತಿ ವಿಡಿಯೋನಲ್ಲಿ ಹೇಳಿರುವಂತೆ, ಜಿಮ್ನಲ್ಲಿ ಮುಂದಿನ ದಿನಗಳಲ್ಲಿ ಇಸ್ಲಾಮಿಕ್ ನಿಯಮಗಳು ಜಾರಿಗೆ ಬರಲಿದೆ. ಅದರಂತೆ ಇನ್ಮುಂದೆ ಪುರುಷರು ಹಾಗೂ ಮಹಿಳೆಯರು ಜೊತೆಯಲ್ಲಿ ವರ್ಕೌಟ್ ಮಾಡುವುದನ್ನು ರದ್ದು ಪಡಿಸಲಾಗುತ್ತದೆ.
ಜಿಮ್ಗೆ ಬರುವ ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಿ ವರ್ಕೌಟ್ ಮಾಡುವ ನಿಯಮವನ್ನು ಹೇರಲಾಗಿದೆ. ಹಾಗೆಯೇ ಇಸ್ಲಾಂನಲ್ಲಿ ಸಂಗೀತ ಹರಾಮ್ ಆಗಿರುವ ಕಾರಣ ಯಾವುದೇ ಹಾಡುಗಳನ್ನು ಜಿಮ್ನಲ್ಲಿ ಇನ್ಮುಂದೆ ಫ್ಲೇ ಮಾಡುವುದಿಲ್ಲ ಮತ್ತು ವರ್ಕೌಟ್ ಮಾಡುವವರು ಹಾಡನ್ನು ಕೇಳಿಸಿ ಕೊಳ್ಳುವಂತಿಲ್ಲ ಎಂದು ತಿಳಿಸಿದ್ದಾರೆ.
ಈ ಜಿಮ್ಗೆ ಎಲ್ಲಾ ಧರ್ಮದವರು ಪ್ರವೇಶ ಪಡೆಯಬಹುದಾಗಿದೆ. ಆದರೆ ಈ ಮೇಲೆ ತಿಳಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವವರಿಗೆ ಮಾತ್ರ ಪ್ರವೇಶ ಎಂದು ಜಿಮ್ ಮಾಲೀಕ ತಿಳಿಸಿದ್ದಾನೆ.
ಈ ಇಸ್ಲಾಮಿಕ್ ಜಿಮ್ನ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದಂತೆ ನೆಟ್ಟಿಗರ ಪಿತ್ತ ನೆತ್ತಿಗೇರಿದೆ. ಈ ಜಿಮ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿದೆಯೋ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ರೀತಿ ಮಹಿಳೆಯರನ್ನು ಹಿಂಸಿಸಿ ಎಂದು ಯಾವ ಧರ್ಮ ಗ್ರಂಥ ಹೇಳುತ್ತದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಈ ಜಿಮ್ಗೆ ಯಾರು ತಾನೆ ಪ್ರವೇಶ ಪಡೆಯುತ್ತಾರೆ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.
ಇವೆಲ್ಲಾ ಕೇವಲ ಮಾರ್ಕೆಟಿಂಗ್ ಗಿಮಿಕ್ ಅಷ್ಟೇ, ತನ್ನ ಜಿಮ್ ಬಗ್ಗೆ ಪ್ರಚಾರವಾಗಲಿ ಎಂದು ಈ ರೀತಿ ಮಾಡಿದ್ದಾನೆ, ಆಮೇಲೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, (ಏಜನ್ಸೀಸ್).