ಇಟಾಲಿಯನ್ ಕನ್ನಡಕ ತೆಗೆದು 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿ ನೋಡಿ: ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು | BJP

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂಬ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ನಿಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿ ನೋಡಿ ಎಂದು ತಿರುಗೇಟು ನೀಡಿದೆ.
ಇಟಾಲಿಯನ್ ಕನ್ನಡಕ ತೆಗೆದು 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿ ನೋಡಿ: ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು | BJP
Published on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂಬ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ನಿಮ್ಮ ಇಟಾಲಿಯನ್ ಕನ್ನಡಕವನ್ನು ತೆಗೆದು 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿ ನೋಡಿ ಎಂದು ತಿರುಗೇಟು ನೀಡಿದೆ.

ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆಯ ಒಂದು ದಿನ ಮುಂಚಿತವಾಗಿ ದಿ ಹಿಂದೂ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಮೋದಿ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ನಮ್ಮ ದೇಶದ ಸಾಮಾಜಿಕ ಸೌಹಾರ್ದತೆ, ಪ್ರಜಾಪ್ರಭುತ್ವ ಮತ್ತು ದೇಶದ ಪ್ರಮುಖ ಸಂಸ್ಥೆಗಳಿಗೆ ಅಪಾರ ಹಾನಿಯಾಗಿದೆ. ಈ ಸರ್ಕಾರ ತೊಲಗಿದ ನಂತರವೂ ನಮ್ಮ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತೆ ಹಳಗೆ ತರಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳಿಂದ ಅಪಾರ ಶ್ರಮದ ಅಗತ್ಯವಿದ್ದು, ಕಾಲಕ್ರಮೇಣ ಭಾರತೀಯ ವ್ಯವಸ್ಥೆಯು ಮತ್ತೆ ಸರಿಯಾದ ಆಡಳಿತಕ್ಕೆ ಮರಳುತ್ತದೆ ಎಂಬ ಭರವಸೆ ತಮಗಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

Also Read
12 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಾನಿ!: ಮೋದಿಯಿಂದ ನಾವೇನೂ ಕಲಿಯಬೇಕಿಲ್ಲ ಎಂದು ಸೋನಿಯಾ ಗಾಂಧಿ ಆಕ್ರೋಶ! | Sonia Gandhi
ಇಟಾಲಿಯನ್ ಕನ್ನಡಕ ತೆಗೆದು 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿ ನೋಡಿ: ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು | BJP

ಸೋನಿಯಾ ಗಾಂಧಿಯವರ ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ತರುಣ್ ಚುಗ್, ಸೋನಿಯಾ ಗಾಂಧಿಯವರು ತಮ್ಮ ಇಟಾಲಿಯನ್ ಕನ್ನಡಕ ತೆಗೆದು ಭಾರತದ ಪ್ರಗತಿಯನ್ನು ನೋಡಬೇಕು. ಕಳೆದ 12 ವರ್ಷಗಳಲ್ಲಿ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ ಮತ್ತು ಭಾರತವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ನಂಬಿಕೆಯ ಹೊಸ ಅಲೆ ಗೋಚರಿಸುತ್ತಿದೆ, ಆದರೆ ಸೋನಿಯಾ ಗಾಂಧಿ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿರುವ ಅವರು, ಕಾಂಗ್ರೆಸ್ ಆಳ್ವಿಕೆಯಲ್ಲಿ ಬೆಳಕಿಗೆ ಬಂದ ಹಗರಣಗಳ ಬಗ್ಗೆಯೂ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಬೇಕು. ಜಾತಿ, ಧರ್ಮ ಮತ್ತು ಮತ ಬ್ಯಾಂಕ್ ರಾಜಕೀಯದ ಮೂಲಕ ದೇಶವನ್ನು ವಿಭಜಿಸುವ ಇತಿಹಾಸ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಕಿಡಿಕಾರಿದ್ದಾರೆ.

ಮುಂದುವರೆದು, ಬಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಉಗ್ರ ಹತನಾದ ಬಳಿಕ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರು ಎಂಬ ಆರೋಪದ ಕುರಿತು ಪ್ರಶ್ನೆ ಎತ್ತಿರುವ ಚುಗ್, ಈ ಬಗ್ಗೆ ಸೋನಿಯಾ ಗಾಂಧಿಯವರು ಏನು ಹೇಳುತ್ತಾರೆ? ಭಾರತೀಯ ಸೈನಿಕರ ಬಲಿದಾನದ ಕುರಿತು ಸೋನಿಯಾ ಗಾಂಧಿ ಇದುವರೆಗೆ ಯಾವುದೇ ಹೇಳಿಕೆ ನೀಡದಿರುವುದೇಕೆ? 1984ರ ಸಿಖ್ ವಿರೋಧಿ ದಂಗೆಗಳು ಮತ್ತು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ "ದೊಡ್ಡ ಮರಬಿದ್ದರೆ ಭೂಮಿ ಕಂಪಿಸುತ್ತದೆ" ಎಂಬ ಹೇಳಿಕೆಯ ಬಗ್ಗೆ ಅವರು ಏನು ಹೇಳುತ್ತಾರೆ? ಬೋಪೋರ್ಸ್​ ಹಗರಣ ಕುರಿತು ಅವರು ತಮ್ಮ ಪುಸ್ತಕದಲ್ಲಿ ಏನು ಬರೆಯಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ (ಏಜೆನ್ಸೀಸ್).