ಪ್ರೇಮ ಸೌಧ ವಿಶ್ವ ವಿಖ್ಯಾತ ತಾಜ್ ಮಹಲ್ ಈ ಹಿಂದೆ ಶಿವ ಮಂದಿರವಾಗಿತ್ತು ಎಂದು ವಾದಿಸಿರುವ ವಕೀಲರ ಗುಂಪೊಂದು ಅದನ್ನು ಹಿಂದೂಗಳಿಗೆ ವರ್ಗಾಯಿಸಬೇಕೆಂದು ಕೋರ್ಟ್ ಮೆಟ್ಟಿಲೇರಿತ್ತು. ದಶಕಗಳಿಂದಲೂ ಸಾಕಷ್ಟು ಇತಿಹಾಸಕರರೂ ತಾಜ್ ಮಹಲ್ ಹಿಂದೂ ದೇವಾಲಯವೇ ಎಂದು ತೀವ್ರವ ಚರ್ಚೆಯನ್ನೂ ನಡೆಸುತ್ತಿದ್ದರು. ಇದೀಗ ಈ ಚರ್ಚೆ ನೇರವಾಗಿ ಅಲಹಬಾದ್ ಹೈಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ ಪೂರ್ಣ ವಿಚಾರಣೆ ನಡೆಸಿರೋ ಅಲಹಬಾದ್ ಹೈಕೋರ್ಟ್, ಈ ಬಗ್ಗೆ ಸೂಕ್ತ ವಿವರಣೆ ಮತ್ತು ಕೌಂಟರ್ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್, ಅವರ ಏಕಸದಸ್ಯ ಪೀಠ ನೀಡಿರುವ ಈ ಕಠಿಣ ಆದೇಶ ಇವತ್ತು ಇಡೀ ದೇಶದಲ್ಲಿ ಭಾರೀ ಸಂಚಲನವನ್ನ ಮೂಡಿಸಿದೆ. ತಾಜ್ ಮಹಲ್ ಶಿವ ದೇವಾಲಯವಾಗಿತ್ತಾ ಹಾಗಿದ್ರೆ ಕೋರ್ಟ್ ಹೇಳಿದ್ದೇನು ನೋಡೋಣ...