ವಾಂಖೆಡೆಯಲ್ಲಿ ಸೂರ್ಯನ ಮ್ಯಾಜಿಕ್.. ಆರಂಭಿಕ ಆಘಾತದ ನಡುವೆಯೂ ಸವಾಲಿನ ಮೊತ್ತ ಪೇರಿಸಿದ ಟೀಮ್ ಇಂಡಿಯಾ | IND Vs USA

IND Vs USA | ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್
IND Vs USA | ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್
Published on
ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಮೆರಿಕ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತಗಳ ನಡುವೆಯೂ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav ) ಸಮಯೋಚಿತ ಆಟದ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.
360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಂಡದ ಸಂಕಷ್ಟದ ಸಮಯದಲ್ಲಿ ಆಪದ್ಬಾಂಧವರಾಗಿ ಮೂಡಿಬರುವ ಮೂಲಕ ಕೇವಲ 49 ಎಸೆತಗಳಲ್ಲಿ ಅಜೇಯ 84 ರನ್ ಸಿಡಿಸಿ ಟೀಮ್​ ಇಂಡಿಯಾ 162 ರನ್​ ಗುರಿ ನೀಡಲು ಕಾರಣರಾದರು.

ಆರಂಭಿಕ ಆಘಾತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಯುಎಸ್​ಎ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಪ್ರಮುಖ ಬ್ಯಾಟರ್‌ಗಳಾದ ಅಭಿಷೇಕ್​ ಶರ್ಮಾ, ಇಶಾನ್​ ಕಿಶನ್​, ತಿಲಕ್​ ವರ್ಮಾ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯ ಇನ್ನಿಂಗ್ಸ್​ ಕಟ್ಟಿದ ಸೂರ್ಯಕುಮಾರ್ ಯಾದವ್, ಕೊನೆಯ ಓವರ್​ಗಳಲ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ 84 ರನ್‌ಗಳ ಕೊಡುಗೆ ನೀಡಿದರು.

ಭಾರತದ ಸ್ಕೋರ್​ ಕಾರ್ಡ್​

ಸೂರ್ಯಕುಮಾರ್​ ಯಾದವ್​ 84 (49)
ತಿಲಕ್​ ವರ್ಮಾ 25 (16)
ಇಶಾನ್​ ಕಿಶನ್​ 20 (16)
ಅಕ್ಷರ್​ ಪಟೇಲ್​ 14 (11)
ಯುಎಸ್​ಎ ವೇಗಿ ಶಾಡ್ಲಿ ವ್ಯಾನ್ ಸ್ಚಾಲ್ಕ್ವಿಕ್ ನಿಗದಿತ 4 ಓವರ್‌ಗಳಲ್ಲಿ 25 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸುವ ಮೂಲಕ ಭಾರತದ ಮಧ್ಯಂತರ ಕ್ರಮಾಂಕವನ್ನು ಧೂಳೀಪಟ ಮಾಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net