ಟೀಮ್ ಇಂಡಿಯಾಗೆ ಆರಂಭಿಕ ವಿಘ್ನ...ಅನಾರೋಗ್ಯದ ಕಾರಣಕ್ಕೆ ಬುಮ್ರಾ ಔಟ್! | Jasprit Bumrah
Jasprit Bumrah | ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ
Published on:
Copied
Follow Us
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯುಎಸ್ಎ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅಲಭ್ಯರಾಗಿದ್ದಾರೆ.
ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ ಬದಲು ಮೊಹಮ್ಮದ್ ಸಿರಾಜ್ ವೇಗದ ದಾಳಿಯಲ್ಲಿ ಅರ್ಶದೀಪ್ ಸಿಂಗ್ ಜೊತೆ ಕೈಜೋಡಿಸಲಿದ್ದಾರೆ. ಸುಮಾರು ಎರಡು ವರ್ಷಗಳ ಬಳಿಕ ಟಿ20ಗೆ ಮರಳಿರುವ ಸಿರಾಜ್, ಗಾಯಗೊಂಡಿರುವ ಹರ್ಷಿತ್ ರಾಣಾ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬುಮ್ರಾ ಅಲಭ್ಯತೆಯ ಕುರಿತು ಪ್ರತಿಕ್ರಿಯೆ ನೀಡಿರುವ ನಾಯಕ ಸೂರ್ಯಕುಮಾರ್ ಯಾದವ್, ಸ್ಟಾರ್ ವೇಗಿ ಜ್ವರದಿಂದ ಬಳಲುತ್ತಿದ್ದು, ಆದ್ದರಿಂದ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಇದು ದುರದೃಷ್ಟಕರ ಎಂದು ಹೇಳಿದ್ದಾರೆ. ನಮ್ಮಲ್ಲಿ ವಾಷಿಂಗ್ಟನ್, ಸಂಜು ಮಿಸ್ ಆಗಿದ್ದಾರೆ. ದುರದೃಷ್ಟವಶಾತ್ ಬುಮ್ರಾ ಆರೋಗ್ಯ ಚೆನ್ನಾಗಿಲ್ಲ, ಆದ್ದರಿಂದ ಸಿರಾಜ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ಟಾಸ್ ಗೆದ್ದ ಯುಎಸ್ಎ
ಟಾಸ್ ಗೆದ್ದ ಯುಎಸ್ಎ ನಾಯಕ ಮೋನಾಂಕ್ ಪಟೇಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಕುರಿತಾಗಿಯೂ ಮಾತನಾಡಿದ ಸೂರ್ಯಕುಮಾರ್, ಟಾಸ್ ಏನೇ ಇರಲಿ ನಾವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೆವು, ಅದರಂತೆಯೇ ಆಗಿದೆ ಎಂದರು.
ನಾನು ಇಲ್ಲಿ ಬಹಳಷ್ಟು ಕ್ರಿಕೆಟ್ ಆಡಿದ್ದೇನೆ. ಸುತ್ತಲೂ ಗಾಳಿ ಇದೆ, ಆದ್ದರಿಂದ ಇಬ್ಬನಿ ಬೀಳುವ ಸಾಧ್ಯತೆ ಕಡಿಮೆ, ಪಂದ್ಯದ ವಿಷಯವಾಗಿ ಸ್ವಲ್ಪ ಒತ್ತಡವಿದ್ದು, ಆ ಸಂಗತಿಯಿಂದ ಓಡಿಹೋಗಲು ಸಾಧ್ಯವಿಲ್ಲ. ಹೊಸ ಟೂರ್ನಮೆಂಟ್ನಲ್ಲಿ ಅದೇ ಹಳೇ ಬ್ರಾಂಡ್ ಕ್ರಿಕೆಟ್ ಆಡುವುದು ನಮ್ಮ ಗುರಿಯಾಗಿದೆ ಎಂದು ಸ್ಕೈ ತಿಳಿಸಿದ್ದಾರೆ.