ವಿದ್ಯಾರ್ಥಿಗಳೇ.. ನಿಮ್ಮ ಭವಿಷ್ಯ ಹಾಳಾಗುತ್ತದೆ: ದೇಶವ್ಯಾಪಿ ಪ್ರತಿಭಟನೆಗೆ ಕಾಕ್ರೋಚ್​ ಕರೆ; ಜಂತರ್​-ಮಂತರ್​ನಿಂದ ದೂರವಿರಿ, ದೆಹಲಿ ವಿವಿ ಮಹತ್ವದ ಆದೇಶ! Delhi University Warning to Students

ಜಂತರ್-ಮಂತರ್ ಹೋರಾಟದಿಂದ ದೂರವಿರುವಂತೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಖಡಕ್ ಆದೇಶ
ಜಂತರ್-ಮಂತರ್ ಹೋರಾಟದಿಂದ ದೂರವಿರುವಂತೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಖಡಕ್ ಆದೇಶ
Published on

ಪ್ರಮುಖ ಮುಖ್ಯಾಂಶಗಳು

  • ನೀಟ್‌ ಪರೀಕ್ಷಾ ಅಕ್ರಮ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಶುಕ್ರವಾರ ದೇಶಾದ್ಯಂತ ಬೃಹತ್ ಪ್ರತಿಭಟನೆ
  • ಜಂತರ್-ಮಂತರ್ ಹೋರಾಟದಿಂದ ದೂರವಿರುವಂತೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಖಡಕ್ ಆದೇಶ
  • ನಿಯಮ ಮೀರಿದರೆ ಕ್ರಿಮಿನಲ್ ಕೇಸ್ ದಾಖಲಾಗುವ ಎಚ್ಚರಿಕೆ
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆಯವ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಶುಕ್ರವಾರ (ಜು.24) ಕಾಕ್ರೋಚ್​ ಜನತಾ ಪಾರ್ಟಿ ದೇಶಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ಆದರೆ ಈ ಪ್ರತಿಭಟನೆಯಿಂದ ಹೊರ ಉಳಿಯುವಂತೆ, ದೆಹಲಿ ವಿಶ್ವವಿದ್ಯಾಲಯ (Delhi University Warning to Students) ತನ್ನ ವಿದ್ಯಾರ್ಥಿಗಳಿಗೆ ಖಡಕ್​ ಎಚ್ಚರಿಕೆ ನೀಡಿದೆ. 

ಜಂತರ್​-ಮಂತರ್​ನಿಂದ ದೂರವಿರಿ!

ಶುಕ್ರವಾರ ದೇಶದ್ಯಂತ ಪ್ರತಿಭಟನೆಗೆ ಸಿಜೆಪಿ ಕರೆಕೊಟ್ಟಿರುವ ಹಿನ್ನಲೆ, ದೆಹಲಿಯಲ್ಲಿ ಇಂದು ಪರಿಸ್ಥಿತಿ ಉದ್ವಿಗ್ನತೆಗೆ ಮತ್ತೊಮ್ಮೆ ಸಾಕ್ಷಿಯಾಗಲಿದೆ. ಆದ್ದರಿಂದ ಈ ಪ್ರತಿಭಟನೆ ನಡೆಯಲಿರುವ ಜಂತರ್​ ಮಂತರ್​ನಿಂದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಆಚೆ ಇರುವಂತೆ ಎಕ್ಸ್​ನಲ್ಲಿ ಆದೇಶ ಹೊರಡಿಸಲಾಗಿದೆ.
ಈ ಪ್ರತಿಭಟನೆಯನ್ನು ಸುಪ್ರೀಂ ಕೋರ್ಟ್​ ಗಮನಿಸುತ್ತಿದ್ದು, ಅಲ್ಲಿ ಏನಾದರೂ ಕಾನೂನು ಬಾಹಿರ ಘಟನೆ ಸಂಭವಿಸಿದರೆ ಭಾಗಿಯಾದ ಮಕ್ಕಳ ಮೇಲೆ ಕ್ರಿಮಿನಲ್​ ಪ್ರಕರಣ ದಾಖಲಾಗುತ್ತದೆ. ಇದರಿಂದ ನಿಮ್ಮ ಭವಿಷ್ಯ ಹಾಳಾಗುವ ಸಂಭವ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಸಿಜೆಪಿ ಇಂದ ದೇಶಾದ್ಯಂತ ಪ್ರತಿಭಟನೆ!

ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮವನ್ನು ಖಂಡಿಸಿ ಕಾಕ್ರೋಚ್​ ಜನತಾ ಪಾರ್ಟಿ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗೆ ಆಗ್ರಹಿಸಿ ಈ ಹೋರಾಟ ನಡೆಯಲಿದ್ದು, ಈ ಹೋರಾಟಕ್ಕೆ ದೇಶದ ಜನತೆ ಬೆಂಬಲ ನೀಡಿ ಎಂದು ಸಿಜೆಪಿ ಮನವಿ ಮಾಡಿದೆ. 
ಉಪವಾಸ ನಿಲ್ಲಿಸಿದ ವಾಂಗ್​ಚುಕ್​!
ನೀಟ್​ ಪರೀಕ್ಷೆಯಲ್ಲಾದ ಅಕ್ರಮವನ್ನು ವಿರೋಧಿಸಿ ಕಳೆದ 26 ದಿನಗಳಿಂದ ಉಪವಾಸ ನಡೆಸುತ್ತಿದ್ದ ಪರಿಸರವಾದಿ ಸೋನಮ್​ ವಾಂಗ್​ಚುಕ್​ ತಮ್ಮ ಉಪವಾಸವನ್ನು ಹಿಂಪಡೆದಿದ್ದಾರೆ. ಸರ್ಕಾರ ನೀಟ್​ ಅಕ್ರಮಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮದ ಭರವಸೆ ನೀಡಿದ್ದು, ನನಗೆ ಸರ್ಕಾರದ ಮೇಲೆ ನಂಬಿಕೆಯಿದೆ, ಹೀಗಾಗಿ ಉಪವಾಸವನ್ನು ಹಿಂಪಡೆದಿರುವುದಾಗಿ ವಾಂಗ್​ಚುಕ್​ ಹೇಳಿದ್ದಾನೆ, (ಏಜನ್ಸೀಸ್​​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net