NEET ಅಕ್ರಮ ವಿರುದ್ಧ ಬಾಲಿವುಡ್​ ಬಂಡಾಯ: ವಿದ್ಯಾರ್ಥಿಗಳ ಪರ ನಿಂತ ಕರೀನಾ, ಲಾರಾ, ಸಾನಿಯಾ; ಜಂತರ್​ ಮಂತರ್​ಗೆ ದೌಡಾಯಿಸಿದ ತಾರೆಗಳು! Bollywood Stars Supports Protest

ಜಂತರ್ ಮಂತರ್ ಪ್ರತಿಭಟನೆಗೆ ಧುಮುಕಿದ ಬಾಲಿವುಡ್ ತಾರೆಯರು!
ಜಂತರ್ ಮಂತರ್ ಪ್ರತಿಭಟನೆಗೆ ಧುಮುಕಿದ ಬಾಲಿವುಡ್ ತಾರೆಯರು!
Published on

ಪ್ರಮುಖ ಮುಖ್ಯಾಂಶಗಳು

  • ನೀಟ್ ಅಕ್ರಮದ ವಿರುದ್ಧ ದೇಶವ್ಯಾಪಿ ವಿದ್ಯಾರ್ಥಿಗಳ ಬಂಡಾಯ.
  • ಜಂತರ್ ಮಂತರ್ ಪ್ರತಿಭಟನೆಗೆ ಧುಮುಕಿದ ಬಾಲಿವುಡ್ ತಾರೆಯರು!
  • ಹೋರಾಟಕ್ಕೆ ಕರೀನಾ ಕಪೂರ್​, ಲಾರಾ ದತ್ತಾ ಹಗೂ ಟೆನಿಸ್​ ಸಾನಿಯಾ ಸಾಥ್​
ಮುಂಬೈ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಅಕ್ರಮವನ್ನು ಖಂಡಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈಗ ಈ ಹೋರಾಟಕ್ಕೆ ಬಾಲಿವುಡ್​ (Bollywood Stars Supports Protest) ಹಾಗೂ ಕ್ರೀಡಾ ವಲಯದಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಮೊದಲಿಗೆ ನಟ ಸಲ್ಮಾನ್ ಖಾನ್ ಸೋನಮ್ ವಾಂಗ್‌ಚುಕ್ ಅವರಿಗೆ ಉಪವಾಸವನ್ನು ನಿಲ್ಲಿಸುವಂತೆ ಮಾಡಿದ್ದ ಮನವಿ ಸಖತ್​ ವೈರಲ್​ ಆಗಿತ್ತು. ಅದರ ಬೆನ್ನಲ್ಲೆ ಈಗ ಬಾಲಿವುಡ್​ನ ಬಾಲಿವುಡ್‌ನ 'ಬೆಬೋ' ಕರೀನಾ ಕಪೂರ್ ಖಾನ್, ಲಾರಾ ದತ್ತಾ ಹಾಗೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಅಖಾಡಕ್ಕಿಳಿದು ವಿದ್ಯಾರ್ಥಿಗಳ ಧ್ವನಿಗೆ ಸಾಥ್ ನೀಡಿದ್ದಾರೆ.

ಇನ್ನು ಮೌನವಾಗಿರಲು ಸಾಧ್ಯವಿಲ್ಲ: ಗರ್ಜಿಸಿದ ಕರೀನಾ

ವಿದ್ಯಾರ್ಥಿಗಳ ಸ್ಥಿತಿ ಕಂಡು ಭಾವುಕರಾಗಿರುವ ನಟಿ ಕರೀನಾ ಕಪೂರ್ ಖಾನ್, ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ನಾನು ಕಳೆದ ಕೆಲವು ದಿನಗಳಿಂದ ಇದನ್ನು ಗಮನಿಸುತ್ತಿದ್ದೇನೆ, ಆದರೆ ಇನ್ನು ಮುಂದೆ ಮೌನವಾಗಿರಲು ನನ್ನಿಂದ ಸಾಧ್ಯವಿಲ್ಲ. ಯುವಕರ ಧ್ವನಿಯನ್ನು ಸರ್ಕಾರ ನಿರ್ಲಕ್ಷಿಸಬಾರದು. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ ಎಂದು ಮಕ್ಕಳು ಭಾವಿಸಿದರೆ, ಅವರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ, ಎಂದು ಕರೀನಾ ಆಕ್ರೋಶ ಹೊರಹಾಕಿದ್ದಾರೆ.

ಪೋಲಿಸರ ಲಾಠಿಚಾರ್ಜ್‌ಗೆ ಲಾರಾ ದತ್ತಾ ಕಿಡಿ!

ಮತ್ತೊಂದೆಡೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಪ್ರಹಾರ ಹಾಗೂ ವಾಟರ್ ಕ್ಯಾನನ್ ದಾಳಿಯನ್ನು ಮಾಜಿ ಮಿಸ್ ಯುನಿವರ್ಸ್ ಲಾರಾ ದತ್ತಾ ಉಗ್ರವಾಗಿ ಖಂಡಿಸಿದ್ದಾರೆ. ಲಾಠಿಗಳಿಂದ ಯುವಕರ ಭವಿಷ್ಯವನ್ನು ಮೌನಗೊಳಿಸಲು ಸಾಧ್ಯವಿಲ್ಲ! ನೀರಿನ ಫಿರಂಗಿಗಳಿಂದ ಪ್ರಶ್ನೆಗಳನ್ನು ಮುಳುಗಿಸಲು ಆಗುವುದಿಲ್ಲ. ನಾವು ಮಾಡಿದ ತಪ್ಪನ್ನು ನಮಗೆ ತಿದ್ದಿ ಹೇಳಲು ಹೊರಟಿರುವ ಮಕ್ಕಳಿಗೆ ನಾವು ಋಣಿಯಾಗಿರಬೇಕು, ಎಂದು ಲಾರಾ ಬರೆದುಕೊಂಡಿದ್ದಾರೆ.

ಅವರ ಮಾತನ್ನು ಆಲಿಸಿ: ಸಾನಿಯಾ ಮನವಿ

ಅತ್ತ ಟೆನಿಸ್ ಕ್ರೀಡಾಪಟು ಸಾನಿಯಾ ಮಿರ್ಜಾ ಕೂಡ ವಿದ್ಯಾರ್ಥಿಗಳ ಪರ ನಿಂತಿದ್ದು, ವಿದ್ಯಾರ್ಥಿಗಳು ನಮ್ಮ ದೇಶದ ನಿಜವಾದ ಭವಿಷ್ಯ. ಅಹಿಂಸಾ ಮಾರ್ಗದಲ್ಲಿ ಅವರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕಬೇಕಿದೆ. ಸರ್ಕಾರ ಅವರ ಮನವಿ ಏನೆಂದು ಕೇಳಿಸಿಕೊಂಡು ಶಾಂತಿಯುತವಾಗಿ ಚರ್ಚಿಸಿ ಪರಿಹಾರವನ್ನು ನೀಡಿ ಎಂದು ಆಗ್ರಹಿಸಿದ್ದಾರೆ.

ಜಂತರ್ ಮಂತರ್ ತಲುಪಿದ ಸ್ಟಾರ್‌ಗಳು!

ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಸೀಮಿತವಾಗದೆ, ಹುಮಾ ಖುರೇಷಿ, ಸಾಕಿಬ್ ಸಲೀಮ್ ಮತ್ತು ರಚಿತ್ ಸಿಂಗ್ ನೇರವಾಗಿ ದೆಹಲಿಯ ಜಂತರ್ ಮಂತರ್‌ಗೆ ತೆರಳಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಜೊತೆ ಧರಣಿಗೆ ಕುಳಿತಿದ್ದಾರೆ. ಮುಂಬೈನಲ್ಲಿ ನಟ ಇಮ್ರಾನ್ ಖಾನ್ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಇವರಲ್ಲದೆ ಆಲಿಯಾ ಭಟ್, ರಿತೇಶ್-ಜೆನಿಲಿಯಾ ಜೋಡಿ, ಸೋನಾಕ್ಷಿ ಸಿನ್ಹಾ, ಭೂಮಿ ಪೆಡ್ನೇಕರ್, ದಿಲ್ಜಿತ್ ದೋಸಾಂಜ್, ಪ್ರಕಾಶ್ ರಾಜ್ ಹಾಗೂ ನಾಸಿರುದ್ದೀನ್ ಶಾ ಮುಂತಾದ ಸಿನಿ ತಾರೆಗಳು ಈ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net