ಮಂಗಳವಾರ ತಮ್ಮ ಸ್ವಕ್ಷೇತ್ರ ರಾಯ್ಬರೇಲಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶವು ಹಲವು ವರ್ಷಗಳಿಂದ ಕಾಣದ ದೊಡ್ಡ ಆರ್ಥಿಕ ಆಘಾತ ಎದುರಿಸಲಿದೆ. ವಿಷಾದದ ಸಂಗತಿ ಅಂದ್ರೆ, ಅದರ ಪರಿಣಾಮ ಅದಾನಿ ಮತ್ತು ಅಂಬಾನಿ ಅಥವಾ ಪ್ರಧಾನಿಯವರ ಮೇಲೆ ಬೀರುವುದಿಲ್ಲ, ಬದಲಿಗೆ ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದ್ದರು.