ಪ್ರಧಾನಿ ಮೋದಿಯವರನ್ನು ಹಾವಾಡಿಗನೆಂದು ಕಾರ್ಟೂನ್ ಮೂಲಕ ವರ್ಣಿಸಿದ ನಾರ್ವೇಜಿಯನ್ ಪತ್ರಿಕೆ; ವ್ಯಾಪಕ ಟೀಕೆ | PM Modi

ಪ್ರಧಾನಿ ಮೋದಿ
ಪ್ರಧಾನಿ ಮೋದಿ
Published on
ನವದೆಹಲಿ: ಪ್ರಧಾನಿ ಮೋದಿ ಯುರೋಪಿಯನ್ ದೇಶಗಳ ಪ್ರವಾಸದಲ್ಲಿದ್ದು, ನಾರ್ವೇ ಭೇಟಿ ವೇಳೆ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯೊಬ್ಬರು ಪ್ರಶ್ನೆಗಳಿಗೆ ಉತ್ತರ ನೀಡದ ವಿವಾದದ ನಡುವೆಯೇ, ನಾರ್ವೇಜಿಯನ್ ಪತ್ರಿಕೆಯೊಂದು ಬುಧವಾರ(ಮೇ 20) ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾವಾಡಿಗ ಎಂದು ಚಿತ್ರಿಸುವ ಜನಾಂಗೀಯ ವ್ಯಂಗ್ಯಚಿತ್ರವನ್ನು ಪ್ರಕಟಿಸುವ ಮೂಲಕ ಕುಕೃತ್ಯ ಎಸಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಆಫ್ಟೆನ್‌ಪೋಸ್ಟನ್‌ನಲ್ಲಿನ ವ್ಯಂಗ್ಯ ಚಿತ್ರವೂ ಪ್ರಧಾನಿ ಮೋದಿ ಹಾವಾಡಿಗಂತೆ ಪೀಪಿ ಹೂದುವ ಮತ್ತು ಹಾವಿನ ಆಕಾರದಲ್ಲಿರುವ ಇಂಧನ ಕೇಂದ್ರದ ಪೈಪ್‌ನಂತೆ ಕಾಣುವ ವಸ್ತುವನ್ನು ಹಾಡಿಸುತ್ತಿರುವುದು ತೋರಿಸಿದೆ. ಜೊತೆಗೆ ಬುದ್ಧಿವಂತ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ಮನುಷ್ಯ ಎಂದು ಶೀರ್ಷಿಕೆ ನೀಡಿದೆ.
ಈ ವ್ಯಂಗ್ಯ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರವಾಗಿದ್ದು, ಹಲವಾರು ಜನ ಇದು ಜನಾಂಗೀಯ ಬೇಧ ಎಂದು ಕರೆದರು. ಮತ್ತು ಭಾರತವನ್ನು ಹಾವಡಿಗರ ದೇಶ ಎಂದು ಚಿತ್ರಿಸುವ ಹಳೆಯ ವಸಾಹತುಶಾಹಿ ಸ್ಟೀರಿಯೊಟೈಪ್‌ ಆಗಿದೆ. ಈ ಚಿತ್ರವೂ  ಅನ್ಯದ್ವೇಷಿ ಮತ್ತು ಭಾರತ ಮತ್ತು ಅದರ ಚುನಾಯಿತ ನಾಯಕನಿಗೆ ಮಾಡಿದ ಅಗೌರವ ಎಂದು ಕಿಡಿಕಾರಿದ್ದಾರೆ.
ಎಕ್ಸ್​​ನಲ್ಲಿ ಬಳಕೆದಾರರೊಬ್ಬರು, ಈ ವ್ಯಂಗ್ಯಚಿತ್ರವು ಸ್ಪಷ್ಟವಾಗಿ ಜನಾಂಗೀಯ ಬೇಧದಿಂದ ಕೂಡಿದೆ. ಎದ್ದು ಕಾಣುವ ಅಂಶವೆಂದರೆ ವ್ಯಂಗ್ಯ. ಹಿಂದೆ ಜಗತ್ತು ಭಾರತವನ್ನು ಹಾವಾಡಿಗರ ದೇಶ ಎಂದು ಭಾವಿಸಿತ್ತು ಎಂದು ಪ್ರಧಾನಿ ಮಾತನಾಡ್ತಿದ್ದರು. ಈಗ ಅವರೇ ಓಸ್ಲೋಗೆ ಭೇಟಿ ನೀಡಿದ ಸಮಯದಲ್ಲಿ ಪ್ರಮುಖ ಯುರೋಪಿಯನ್ ಪತ್ರಿಕೆಯೊಂದು ಅವರನ್ನು ಅದೇ ರೀತಿ ಚಿತ್ರಿಸಿದೆ ಎಂದು ಕಿಡಿಕಾರಿದ್ದಾರೆ. 
ಮತ್ತೊಬ್ಬರು, ಯುರೋಪಿಯನ್ನರು ಇನ್ನೂ ತಮ್ಮ ವಸಾಹತುಶಾಹಿ ಕಲ್ಪನೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ನಿಟ್ಟುಸಿರು ಬಿಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮಗದೊಬ್ಬರು, ಪಾಶ್ಚಿಮಾತ್ಯ ಗಣ್ಯ ಮಾಧ್ಯಮಗಳಲ್ಲಿ ವಸಾಹತುಶಾಹಿ ದುರಹಂಕಾರ ಇನ್ನೂ ಉಳಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದಿನಪತ್ರಿಕೆಯನ್ನು ಟೀಕಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net