ನಾಗ ಚೈತನ್ಯ-ಸಮಂತಾ ವಿಚ್ಛೇದನಕ್ಕೆ ಅವರೇ ಕಾರಣ ಎಂಬ ಹೇಳಿಕೆ: ಬಹಿರಂಗವಾಗಿ ಕೆಟಿಆರ್ ಕ್ಷಮೆ ಕೇಳಿದ ಕೊಂಡಾ ಸುರೇಖಾ | Konda Surekha

2024ರಲ್ಲಿ ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಅವರೇ ಕಾರಣ ಎಂದು ಹೇಳಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಮಾಜಿ ಸಚಿವೆ ಕೊಂಡಾ ಸುರೇಖಾ, ಗುರುವಾರ(ಅ. 29) ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಬಹಿರಂಗವಾಗಿ ಬಿಆರ್​ಎಸ್​ ಕಾರ್ಯಾಧ್ಯಕ್ಷ ಕೆಟಿಆರ್​​ ಅವರಿಗೆ ಕ್ಷಮೆ ಕೇಳಿದ್ದಾರೆ.
Konda Surekha
Published on: 

ಹೈದರಾಬಾದ್: 2024ರಲ್ಲಿ ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಅವರೇ ಕಾರಣ ಎಂದು ಹೇಳಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಮಾಜಿ ಸಚಿವೆ ಕೊಂಡಾ ಸುರೇಖಾ, ಗುರುವಾರ(ಅ. 29) ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಬಹಿರಂಗವಾಗಿ ಬಿಆರ್​ಎಸ್​ ಕಾರ್ಯಾಧ್ಯಕ್ಷ ಕೆಟಿಆರ್​​ ಅವರಿಗೆ ಕ್ಷಮೆ ಕೇಳಿದ್ದಾರೆ.

ನಟ ಎ. ನಾಗಚೈತನ್ಯ ಮತ್ತು ನಟಿ ಸಮಂತಾ ನಡುವಿನ ವಿಚ್ಛೇದನಕ್ಕೆ ಕೆಟಿಆರ್​ ಅವರೇ ಕಾರಣ ಎಂದು ಮಾಜಿ ಸಚಿವೆ ಕೊಂಡಾ ಸುರೇಖಾ ಆರೋಪ ಮಾಡಿದ್ದರು. ನಟ ಮತ್ತು ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರು ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಳಿಕ ಕ್ಷಮೆ ಕೇಳಿ ವಾಪಸ್ ಪಡೆದಿದ್ದರು.

ಇತ್ತೀಚೆಗೆ ಸಿಎಂ ರೇವಂತ್ ರೆಡ್ಡಿ ಅವರು ಮತ್ತು ಕುಟುಂಬಸ್ಥರು ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸುರೇಖಾ ಅವರ ಪುತ್ರಿ ಕೊಂಡ ಸುಶ್ಮಿತಾ ಆರೋಪಿಸಿದ ಬಳಿಕ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿತ್ತು. ಇದಾಗಿ ಕೆಲವೇ ತಿಂಗಳಲ್ಲಿ ಬಿಆರ್​ಎಸ್​ ನಾಯಕರಿಗೆ ಕ್ಷಮೆ ಕೇಳಿದ್ದಾರೆ.

Also Read
ಚೀನಾ ಸೈನಿಕರು ಭಾರತದ ಗಡಿ ದಾಟಿದ್ದು ಅತಿಕ್ರಮಣವಲ್ಲ, ಇದೊಂದು ಸಾಮಾನ್ಯ ಗಡಿ ಉಲ್ಲಂಘನೆ: ಸಿಎಂ ಪೆಮಾ ಖಂಡು | CM Pema Khandu
Konda Surekha

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕೊಂಡಾ ಸುರೇಖಾ, ಬಿಆರ್‌ಎಸ್ ಕಾರ್ಯಾಧ್ಯಕ್ಷರಾದ ಕೆಟಿಆರ್​​ ಅವರ ಬಗ್ಗೆ ನಾನು ಈ ಹಿಂದೆ ಮಾಡಿದ್ದ ಕೆಲವು ವೈಯಕ್ತಿಕ ಟೀಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ಆ ಸಂದರ್ಭದಲ್ಲಿದ್ದ ರಾಜಕೀಯ ಸನ್ನಿವೇಶದಲ್ಲಿ, ವಿರೋಧ ಪಕ್ಷವನ್ನು ಟೀಕಿಸುವ ಭರದಲ್ಲಿ ನಾನು ಆ ರೀತಿ ಮಾತನಾಡಿದ್ದೆನೇ ಹೊರತು, ಉದ್ದೇಶಪೂರ್ವಕವಾಗಿ ಹಾಗೆ ಮಾಡಿರಲಿಲ್ಲ.

ಆ ಸಮಯದಲ್ಲಿ ನಾನು ಆಧಾರರಹಿತವಾದ ಅಂತಹ ಟೀಕೆಗಳನ್ನು ಮಾಡಬಾರದಿತ್ತು. ಕೆಟಿಆರ್​​ ಅವರನ್ನಾಗಲಿ ಅಥವಾ ಅವರ ಕುಟುಂಬದ ಸದಸ್ಯರನ್ನಾಗಲಿ ನೋಯಿಸುವ ಯಾವುದೇ ಉದ್ದೇಶ ನನಗಿಲ್ಲ. ಹಾಗೆಯೇ ಅವರ ಘನತೆಗೆ ಧಕ್ಕೆ ತರುವಂತಹ ಯಾವುದೇ ದುರುದ್ದೇಶವೂ ನನಗಿಲ್ಲ. ನನ್ನ ಮಾತುಗಳಿಂದ ಅವರಿಗಾಗಲಿ ಅಥವಾ ಅವರ ಕುಟುಂಬದ ಸದಸ್ಯರಿಗಾಗಲಿ ನೋವಾಗಿದ್ದರೆ, ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಆ ಟೀಕೆಗಳನ್ನು ಹಿಂಪಡೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ವಾರಂಗಲ್​ ಶಾಸಕಿ ಕೊಂಡಾ ಸುರೇಖಾ ಮತ್ತು ಅವರ ಪತಿ ಮಾಜಿ ಎಂಎಲ್​ಸಿ ಕೊಂಡಾ ಮುರುಳಿ ಕಾಂಗ್ರೆಸ್ ಪಕ್ಷದಲ್ಲಿ ಅಂತತ್ರವಾಗಿದ್ದಾರೆ. ಯಾವುದೇ ಪಕ್ಷ ಸೇರಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರೂ, ಕೆಟಿಆರ್​ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಿರುವುದರಿಂದ ಅವರು ಬಿಆರ್​​ಎಸ್ ಕಡೆ ಮರಳಬಹುದು ಎಂದು ಚರ್ಚೆ ನಡೆಯುತ್ತಿದೆ (ಏಜೆನ್ಸೀಸ್).