ವಾಂಗ್ಚುಕ್​ ಇನ್ನೆರಡು ದಿನಗಳಲ್ಲಿ ಸಾಯಲಿದ್ದಾರೆ! ಸರ್ಕಾರ ಅವರನ್ನು ದೇಶದ್ರೋಹಿ ರೀತಿ ನೋಡುತ್ತಿದೆ; ಬಲವಂತವಾಗಿ ಆಹಾರ ನೀಡಲು ಕೋರಿ ದೆಹಲಿ ಹೈಕೋರ್ಟ್​ಗೆ PIL ಸಲ್ಲಿಕೆ! Sonam Wangchuk Hunger Strike

NEET ಅಕ್ರಮದ ವಿರುದ್ಧ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್
NEET ಅಕ್ರಮದ ವಿರುದ್ಧ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್
Published on

ಪ್ರಮುಖ ಮುಖ್ಯಾಂಶಗಳು

  • NEET ಅಕ್ರಮದ ವಿರುದ್ಧ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್
  • ಅವರ ಜೀವ ಉಳಿಸಲು, ಬಲವಂತವಾಗಿ ಆಹಾರ ನೀಡಲು ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆ.
  • ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹೋರಾಡುತ್ತಿರುವ ಸೋನಮ್ ವಾಂಗ್ಚುಕ್
ನವದೆಹಲಿ: ನೀಟ್​​ ಸೇರಿದಂತೆ ದೇಶದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕಂಡುಬರುತ್ತಿರುವ ಅಕ್ರಮವನ್ನು ವಿರೋಧಿಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಇಂಜಿನಿಯರ್​ ಹಾಗೂ ಪರಿಸರವಾದಿ ಸೋನಮ್ ವಾಂಗ್ಚುಕ್ (Sonam Wangchuk Hunger Strike) ಕಳೆದ 18 ದಿನಗಳಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಈ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಿಂದ ಸೋನಮ್​ ವಾಂಗ್ಚುಕ್​​ ಅವರ ಆರೋಗ್ಯ ದಿನ ಕಳೆದಂತೆ ಹದಗೆಡುತ್ತಿರುವ ಹಿನ್ನಲೆ ವಾಂಗ್ಚುಕ್​ ಅವರಿಗೆ ಒತ್ತಾಯ ಪೂರ್ವಕವಾಗಿ ಆಹಾರವನ್ನು ತಿನ್ನಿಸಬೇಕೆಂದು ದೆಹಲಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ವಾಂಗ್ಚುಕ್​ ಅವರ ಹೋರಾಟ 18 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಅವರು ಇಲ್ಲಿವರೆಗೆ ಸುಮಾರು 8 ಕಿ.ಲೋ ತೂಕವನ್ನು ಕಳೆದುಕೊಂಡಿದ್ದು, ಈ ಸತ್ಯಾಗ್ರಹ ಹೀಗೆ ಮುಂದುವರಿದರೆ ಇನ್ನೆರಡು ದಿನಗಳಲ್ಲಿ ಅವರು ಸಾಯಬಹುದು. ಹೀಗಾಗಿ ದೆಹಲಿ ಸರ್ಕಾರ ಅಥವಾ ಕೇಂದ್ರ ಸರ್ಕಾರ ಕೂಡಲೇ ವಾಂಗ್ಚುಕ್​ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ವಾಂಗ್ಚುಕ್​ ಸತ್ತರೆ ದೇಶಕ್ಕೆ ಕಳಂಕ!
ಸೋಮನ್​ ವಾಂಗ್ಚುಕ್​​ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಹೋರಾಟದಲ್ಲಿ ನಿರತರಾಗಿದ್ದಾರೆ. ಆದರೆ ಅವರ ಈ ಹೋರಾಟವನ್ನ, ಅಹವಾಲನ್ನು ಸರ್ಕಾರ ಗುರುತಿಸಲು ವಿಫಲವಾಗಿದೆ. ಕೇಂದ್ರ ಸರ್ಕಾರ ಸೋಮನ್​ ವಾಂಗ್ಚುಕ್​ ಒಬ್ಬ ಭಯೋತ್ಪಾದಕ, ದೇಶದ್ರೋಹಿ ಎಂಬ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ.
ಒಂದು ವೇಳೆ ಸೋನಮ್​ ವಾಂಗ್ಚುಕ್​ ಈ ಉಪವಾಸ ಮಾಡುತ್ತಲೇ ಸಾವನ್ನಪ್ಪಿದರೆ ಅದು ಕೇವಲ ದೇಶಕ್ಕೆ ಮಾತ್ರವಲ್ಲ ಈಡೀ ಪ್ರಪಂಚಕ್ಕೆ ಕಳಂಕವಾಗುತ್ತದೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
ವಾಂಗ್ಚುಕ್​ ಇಲ್ಲಿವರೆಗೆ ಕೇವಲ ನೀರನ್ನು ಸೇವಿಸುತ್ತಿದ್ದಾರೆ. ಆದರೆ ಅವರ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ಹೀಗಾಗಿ ಅವರು ಸರ್ಕಾರದ ವಿರುದ್ಧ ಹೋರಾಡುತ್ತಿದರೂ ಸಹ ಸರ್ಕಾರ ಇಲ್ಲಿ ಮದ್ಯ ಪ್ರವೇಶಿಸಿ ವಾಂಗ್ಚುಕ್​ ಅವರು ಆಹಾರ ಸೇವಿಸುವಂತೆ ಮಾಡಬೇಕೆಂದು ಪಿಐಎಲ್​ ನಲ್ಲಿ ಹೇಳಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net