ವಾಕಿಂಗ್ ಮಾಡುತ್ತಿದ್ದ ಸಹೋದರಿಯರಿಗೆ ಕಾರು ಡಿಕ್ಕಿ: 5 ಅಡಿ ದೂರ ಹಾರಿಬಿದ್ದ ಮಹಿಳೆಯರು; ವಿಡಿಯೋ ವೈರಲ್! Mathura Road Accident
ವಾಕಿಂಗ್ ಮಾಡುತ್ತಿದ್ದ ಇಬ್ಬರು ಸಹೋದರಿಯರಿಗೆ ವೇಗವಾಗಿ ಬಂದ ಕಾರು ಡಿಕ್ಕಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಇಬ್ಬರು ಸಹೋದರಿಯರಿಗೆ ವೇಗವಾಗಿ ಬಂದ ಕಾರು ಡಿಕ್ಕಿ
ಉತ್ತರಪ್ರದೇಶದ ಮಥುರಾದಲ್ಲಿ ನಡೆದ ಘಟನೆ
ಕಾರು ಡಿಕ್ಕಿಯಾದ ರಭಸಕ್ಕೆ 5 ಅಡಿ ದೂರ ಹಾರಿಬಿದ್ದ ಮಹಿಳೆಯರು
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಮಥುರಾ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ರಸ್ತೆ ಅಫಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಮಥುರಾದಲ್ಲಿ (Mathura Road Accident) ಬೆಳಗ್ಗಿನ ವಾಕಿಂಗ್ಗೆ ತೆರಳಿದ್ದ ಇಬ್ಬರು ಮಹಿಳೆಯರನ್ನು ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ.
ಈ ಭೀಕರ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾರ್ ಚಾಲಕನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಮಾಹಿತಿ ಪ್ರಕಾರ, ಈ ಘಟನೆಯು ಮಥುರಾದಲ್ಲಿ ನಡೆದಿದೆ. ಬೆಳಿಗ್ಗೆ ವಾಕಿಂಗ್ ಮಾಡುವ ಉದ್ದೇಶದಿಂದ ಮನೆಯಿಂದ ಕೇವಲ 500 ಮೀಟರ್ ದೂರಬಂದಿದ್ದ ಸಹೋದರಿಯರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿದೆ.
ಕಾರು ಢಿಕ್ಕಿ ಹೊಡೆದ ರಭಸಕ್ಕೆ, ಇಬ್ಬರು ಮಹಿಳೆಯರು ಸುಮಾರು 5 ಅಡಿ ದೂರ ಹೋಗಿ ಬಿದ್ದಿದ್ದಾರೆ. ತನ್ನಿಂದ ಉಂಟಾದ ಅಫಘಾತಕ್ಕೆ ಪ್ರಾಯಶ್ಚಿತ ಎಂಬಂತೆ ಗಾಯಾಳುಗಳನ್ನು ಕನಿಷ್ಟ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಕಾರ್ ಚಾಲಕ ಮಾಡಿಲ್ಲ.
ಆಸ್ಪತ್ರೆಯಲ್ಲಿ ಚಿಕಿತ್ಸೆ; ಮುಂದುವರಿದ ತನಿಖೆ
ನಂತರ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಇಬ್ಬರು ಸಹೋದರಿಯರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಖ, ಕಾಲು, ಕೈ, ಕಣ್ಣುಗಳಿಗೆ ಗಂಭೀರವಾದ ಪೆಟ್ಟು ಬಿದ್ದಿರುವುದು ತಿಳಿದು ಬಂದಿದೆ. ಇಬ್ಬರ ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಈ ಕುರಿತು ಪೊಲೀಸರಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಇದು ಹರ್ಯಾಣ ನೋಂದಣಿಯಿರುವ ಮಾರುತು ಶಿಫ್ಟ್ ಕಾರೆಂದು ಗುರುತಿಸಿದ್ದಾರೆ. ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕೋಪದ ಕಟ್ಟೆ ಒಡೆದುಹೋಗಿದೆ.ನಗರದ ವ್ಯಾಪ್ತಿಯಲ್ಲಿ ಕಾರನ್ನು ಅಷ್ಟು ವೇಗವಾಗಿ ಚಲಾಯಿಸುವ ಅಗತ್ಯವೇನಿತ್ತು? ಎಂದು ಬಳಕೆದಾರರು ಕಿಡಿಕಾರಿದ್ದಾರೆ.
ಪಾಪ ಆ ಮಹಿಳೆಯರು ರಸ್ತದ ಮಡುವಿನಲ್ಲಿ ಬಿದ್ದರೂ ಸಹಾಯಕ್ಕೆ ಬಂದಿಲ್ಲ, ಆ ಚಾಲಕನನ್ನು ಕೂಡಲೇ ಬಂಧಿಸಿ ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ. ಕಾರು ಚಾಲಕನ ಪರವಾನಗಿಯನ್ನು ಜೀವನ ಪರ್ಯಂತ ನಿಷೇಧ ಮಾಡಬೇಕು, ಇಲ್ಲದಿದ್ದರೆ ಬುದ್ಧಿ ಬರುವುದಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್).