ವರ್ಕ್ ಫ್ರಂ ಹೋಮ್ ನೀತಿ ಅಂತ್ಯ: ಹಳೇ ನಿಯಮ ಮತ್ತೆ ಜಾರಿ; ದೆಹಲಿ ಸಿಎಂ ರೇಖಾ ಗುಪ್ತಾ ಮಹತ್ವದ ಆದೇಶ! Rekha Gupta on Work From Home

ದೆಹಲಿಯಲ್ಲಿ ವರ್ಕ್ ಫ್ರಂ ಹೋಮ್ ನೀತಿ ಅಂತ್ಯ
ದೆಹಲಿಯಲ್ಲಿ ವರ್ಕ್ ಫ್ರಂ ಹೋಮ್ ನೀತಿ ಅಂತ್ಯ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ವರ್ಕ್ ಫ್ರಂ ಹೋಮ್ ನೀತಿ ಅಂತ್ಯ
  • ದೆಹಲಿ ಸಿಎಂ ರೇಖಾ ಗುಪ್ತಾ ಮಹತ್ವದ ಆದೇಶ
  • ಮಧ್ಯಪ್ರಾಚ್ಯದಲ್ಲಿ ಸಂಘರ್ಷ, ದೇಶದಲ್ಲಿ ಹೆಚ್ಚಿದ ತಾಪಮಾನಕ್ಕಾಗಿ ಜಾರಿಗೆ ತಂದಿದ್ದ ನೀತಿ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹಾಗೂ ವಿಪರಿತ ಬಿಸಿಲಿನಿಂದ ತತ್ತರಿಸುತ್ತಿದ್ದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ರಾಜ್ಯದಲ್ಲಿ ವರ್ಕ್​ ಫ್ರಂ ಹೋಮ್ (Rekha Gupta on Work From Home)​ ನೀತಿಯನ್ನು ಜಾರಿ ಮಾಡಿತ್ತು. ಈಗ ಈ ಸಮಸ್ಯೆಗಳು ಪರಿಹಾರ ಕಂಡಿರುವ ಹಿನ್ನಲೆಯನ್ನು ಈ ನಿಯಮವನ್ನು ಹಿಂಪಡೆಯಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೂರಿದ್ದ ಹಿನ್ನಲೆ ತೈಲದ ಬಳಕೆಯನ್ನು ಕಡಿಮೆ ಮಾಡಲು ಈ ಕ್ರಮವನ್ನು ದೆಹಲಿ ಸರ್ಕಾರ ಕೈಗೊಂಡಿತ್ತು.

ಪ್ರಧಾನಿ ಮಾತಿಗೆ ಬೆಲೆ ಕೊಟ್ಟಿದ್ದೆವು!

ಇರಾನ್​ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರವಾಗಿದ್ದ ಹಿನ್ನಲೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶದ ನಾಗರಿಕರಿಗೆ ಇದು ಸಂಕಷ್ಟದ ಸಮಯ, ಚಿನ್ನದ ಖರೀದಿಯನ್ನು ಕಡಿಮೆ ಮಾಡಿ, ಪೆಟ್ರೋಲ್​-ಡೀಸೆಲ್​ ಬಳಕೆಯನ್ನು ಮಿತಗೊಳಿಸಿ, ದುಂದುವೆಚ್ಚ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ, ರಾಜ್ಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಎರಡು ದಿನ ವರ್ಕ್​ ಫ್ರಂ ಹೋಮ್​ ನೀತಿಯನ್ನು ಜಾರಿಗೆ ತಂದಿದ್ದರು. ಹಾಗೆಯೇ ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಅಧಿಕವಾಗಿದ್ದ ಹಿನ್ನಲೆ ಕಚೇರಿ ವೇಳೆಯನ್ನು ಬೆಳಿಗ್ಗೆ 10 ರಿಂದ ಸಂಜೆ 6 ಕ್ಕೆ ಬದಲಿಸಲಾಗಿತ್ತು.

ಹಳೆಯ ನೀತಿ ಜಾರಿಗೆ

ಈಗ ಮಧ್ಯಪ್ರಾಚ್ಯದಲ್ಲಿ ಮೊದಲಿದ್ದ ಉದ್ವಿಗ್ನ ಪರಿಸ್ಥಿತಿ ಇಲ್ಲವಾಗಿದೆ. ಇರಾನ್​ ಮತ್ತು ಅಮೆರಿಕ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ ಹೀಗಾಗಿ ವರ್ಕ್​ ಫ್ರಂ ಹೋಮ್​ ನೀತಿಯ ಅಗತ್ಯವಿಲ್ಲ. ಹಾಗೆಯೇ ಬಿಸಿಲಿನ ಆರ್ಭಟ ಕೂಡ ಕಡಿಮೆ ಆಗಿದ್ದು, ಈಗ ಮೊದಲಿದ್ದ ಬೆಳಿಗ್ಗೆ 8.30 ರಿಂದ ಸಂಜೆ 5 ರ ಕಚೇರಿ ಸಮಯವನ್ನು ಮತ್ತೆ ಮರುಸ್ಥಾಪನೆ ಮಾಡಲಾಗಿದೆ ಎಂದು ಸಿಎಂ ರೇಖಾ ಗುಪ್ತಾ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net