ತಮಿಳುನಾಡಿನಲ್ಲಿ ಟಿವಿಕೆ ಗೆಲುವು, ಡಿಎಂಕೆ ಸೋಲಿಗೂ ಎಸ್​ಐಆರ್ ಕಾರಣವಲ್ಲ: ಪಿ.ಚಿದಂಬರಂ | P. Chidambaram

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಗೆಲುವಿಗೆ ಅಥವಾ ಡಿಎಂಕೆ ಸೋಲಿಗೆ ಎಸ್​ಐಆರ್ ಕಾರಣವಲ್ಲ ಎಂದಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಚುನಾವಣಾ ಆಯೋಗವು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದ್ದು ತಪ್ಪು. ಆದರೆ ಅದರಿಂದಲೇ ಟಿವಿಕೆ ಗೆದ್ದಿದೆ ಮತ್ತು ಡಿಎಂಕೆ ಸೋತಿದೆ ಎಂದು ತೋರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ
Published on: 

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಗೆಲುವಿಗೆ ಅಥವಾ ಡಿಎಂಕೆ ಸೋಲಿಗೆ ಎಸ್​ಐಆರ್ ಕಾರಣವಲ್ಲ ಎಂದಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಚುನಾವಣಾ ಆಯೋಗವು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದ್ದು ತಪ್ಪು. ಆದರೆ ಅದರಿಂದಲೇ ಟಿವಿಕೆ ಗೆದ್ದಿದೆ ಮತ್ತು ಡಿಎಂಕೆ ಸೋತಿದೆ ಎಂದು ತೋರುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕೆಂಬ ಕರೆಗೆ ಟಿವಿಕೆ ಮೌನ ವಹಿಸಿರುವುದರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಟಿವಿಕೆ ಕಾಂಗ್ರೆಸ್‌ನ ಪಾಲುದಾರ ಎಂಬ ಕಾರಣಕ್ಕಾಗಿ ಪ್ರತಿಯೊಂದು ವಿಷಯದ ಬಗ್ಗೆಯೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗಿಲ್ಲ. ಉಪಚುನಾವಣೆಯ ನಂತರ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದಿದ್ದಾರೆ.

Also Read
ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಬಹಿರಂಗಪಡಿಸುವ ವಿಚಾರ: ಕೇಜ್ರಿವಾಲ್ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್ | Gujarat High Court
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ

ಜ್ಞಾನೇಶ್ ಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದ ಅವರು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಅವರನ್ನು ಬಂಧಿಸಬೇಕು. ಚುನಾವಣಾ ಆಯುಕ್ತರು ಮತ್ತು ಸಿಇಸಿ ನಡುವೆ ಭಿನ್ನಾಭಿಪ್ರಾಯಗಳು ಉದ್ಭವಿಸುವ ಮೊದಲೇ, ಮೂವರೂ ಒಟ್ಟಾಗಿ ಕೇಂದ್ರ ಸರ್ಕಾರದ ಪರವಾಗಿ ವರ್ತಿಸಿದ್ದಾರೆಂದು ನನಗೆ ಅನಿಸಿತು ಎಂದು ತಿಳಿಸಿದ್ದಾರೆ.

ಮುಂಬರುವ ಇಂಡಿಯಾ ಬ್ಲಾಕ್ ಸಭೆಯಲ್ಲಿ ಟಿವಿಕೆ ಭಾಗವಹಿಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಿದ ಚಿದಂಬರಂ, ಟಿವಿಕೆಗೆ ಯಾವುದೇ ಸಂಸದರಿಲ್ಲ ಮತ್ತು ಆದ್ದರಿಂದ ಅವರು ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).

Related Stories

ವಾರಾಣಸಿ ಫಲಿತಾಂಶ ರದ್ದುಗೊಳಿಸಿ ಮರುಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕನ ಆಗ್ರಹ
ಬಿಹಾರ, ಅಸ್ಸಾಂ ಸೇರಿ ಎಲ್ಲಾ ರಾಜ್ಯಗಳ ಮತದಾರರ ಪಟ್ಟಿ ಆದೇಶಗಳು ಒಮ್ಮತದ ನಿರ್ಧಾರ: ವಿವಾದಕ್ಕೆ ತೆರೆ ಎಳೆದ ಆಯೋಗದ ಮೂಲಗಳು | Election Commission
ಅಣ್ಣನಿಗೆ ರಾಜಕೀಯದ ಗಂಧ-ಗಾಳಿಯೂ ಗೊತ್ತಿಲ್ಲ, ತಂಗಿ ಗೆದ್ದಿದ್ದು ಮುಸ್ಲಿಂ ಲೀಗ್​​ನಿಂದ: ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ
ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net