ಅಳಿಯ ರೈಹಾನ್ ವಾದ್ರಾ ಪರ ಪೋಸ್ಟ್ ಹಾಕದೇ ಮೌನ: ಕಾಂಗ್ರೆಸ್​ನಲ್ಲಿ ರಾಹುಲ್ v/s ಪ್ರಿಯಾಂಕಾ ಸಂಘರ್ಷವಿದೆ ಎಂದ ಬಿಜೆಪಿ | BJP

ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಅವರ ಛಾಯಾಚಿತ್ರಗಳನ್ನು ಪ್ರದರ್ಶನದಿಂದ ತೆಗೆದು ಹಾಕಿದ ವಿವಾದಕ್ಕೆ ಸಂಬಂಧಿಸಿದಂತೆ ಈವರೆಗೂ ರಾಹುಲ್ ಗಾಂಧಿಯವರು ಯಾವುದೇ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆ ಉಲ್ಲೇಖಿಸಿ ಕಾಂಗ್ರೆಸ್​ನಲ್ಲಿ ರಾಹುಲ್ ಗಾಂಧಿ v/s ಪ್ರಿಯಾಂಕಾ ಸಂಘರ್ಷ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
Published on: 

ನವದೆಹಲಿ: ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಅವರ ಛಾಯಾಚಿತ್ರಗಳನ್ನು ಪ್ರದರ್ಶನದಿಂದ ತೆಗೆದು ಹಾಕಿದ ವಿವಾದಕ್ಕೆ ಸಂಬಂಧಿಸಿದಂತೆ ಈವರೆಗೂ ರಾಹುಲ್ ಗಾಂಧಿಯವರು ಯಾವುದೇ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆ ಉಲ್ಲೇಖಿಸಿ ಕಾಂಗ್ರೆಸ್​ನಲ್ಲಿ ರಾಹುಲ್ ಗಾಂಧಿ v/s ಪ್ರಿಯಾಂಕಾ ಸಂಘರ್ಷ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ನಡೆಯುತ್ತಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ರೈಹಾನ್ ವಾದ್ರಾ ಅವರ 'ನೋ ಐಡಿಯಾ ಈಸ್ ಫೈನಲ್' ಕಲಾ ಪ್ರದರ್ಶನದಲ್ಲಿ ಅಳವಡಿಸಿದ್ದ 105 ಫೋಟೋಗಳ ಪೈಕಿ 74 ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆಯ ಫೋಟೋಗಳನ್ನು ತೆರವು ಮಾಡುವಂತೆ ಆಡಳಿತ ಮಂಡಳಿ ಸೂಚಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಪ್ರಿಯಾಂಕಾ ಅವರು ವಿವಾದವೊಂದನ್ನು ಸೃಷ್ಟಿಸುವ ಮೂಲಕ ತಮ್ಮ ಮಗನನ್ನು ರಾಜಕೀಯ ರಂಗಕ್ಕೆ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಿಯಾಂಕಾ ಅವರಿಗೆ ತಮ್ಮ ಸಹೋದರನ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

Also Read
ರೈಹಾನ್​ ಕ್ಲಿಕ್ಕಿಸಿದ ದೆಹಲಿ ಪ್ರೊಟೆಸ್ಟ್ ಫೋಟೋ ತೆರವಿಗೆ ಸೂಚನೆ; ಬಿಕಾನೇರ್ ಹೌಸ್‌ ಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಕಿಡಿ..Priyanka Gandhi
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ

ವಿಯೆಟ್ನಾಂನಲ್ಲಿದ್ದುಕೊಂಡು ಪ್ರತಿಯೊಂದು ವಿಷಯದ ಬಗ್ಗೆಯೂ ಟ್ವೀಟ್ ಮಾಡುತ್ತಿರುವ ರಾಹುಲ್ ಗಾಂಧಿ, ರೈಹಾನ್ ವಾದ್ರಾ ಪರವಾಗಿ ಇದುವರೆಗೂ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಈಗ ಪ್ರಿಯಾಂಕಾ ಮತ್ತು ರಾಹುಲ್ ನಡುವೆ ಸಂಘರ್ಷ ಏರ್ಪಟ್ಟಿದೆ! ಎಂದು ಹೇಳಿದ್ದಾರೆ.

ಕಳೆದ ಭಾನುವಾರ ವೈಯಕ್ತಿಕ ಭೇಟಿಗಾಗಿ ವಿಯೆಟ್ನಾಂಗೆ ತೆರಳಿರುವ ರಾಹುಲ್, ಈ ವಿವಾದದ ಕುರಿತು ಇನ್ನೂ ತಮ್ಮ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ಪೋಸ್ಟ್ ಮಾಡಿಲ್ಲ. ಈ ಹಿನ್ನೆಲೆ ಬಿಜೆಪಿ ಅಣ್ಣ-ತಂಗಿ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿದೆ.

ರೈಹಾನ್ ವಾದ್ರಾ ಪ್ರದರ್ಶನದ ಕುರಿತಾದ ವಿವಾದವೇನು?

ಕಲಾವಿದ ಮತ್ತು ಛಾಯಾಗ್ರಾಹಕರಾಗಿರುವ ಸಂಸದೆ ಪ್ರಿಯಾಂಕಾ ಗಾಂಧಿಯವರ ಪುತ್ರ ರೈಹಾನ್, 'ನೋ ಐಡಿಯಾ ಈಸ್ ಫೈನಲ್' ಎಂಬ ಶೀರ್ಷಿಕೆಯ ಅಡಿ ತಮ್ಮ ಫೋಟೋಗಳ ಪ್ರದರ್ಶನಕ್ಕೂ ಮುಂದಾಗಿದ್ದರು. ಅದರಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಗಳನ್ನು ಬಿಂಬಿಸುವ ತಮ್ಮ ಕೆಲವು ಛಾಯಾಚಿತ್ರಗಳನ್ನು ಅಳವಡಿಸಿದ್ದರು ಎನ್ನಲಾಗಿದೆ. ಆದ್ರೆ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದ ಬಿಕಾನೇರ್ ಹೌಸ್ ಆಡಳಿತವು ಅದರಲ್ಲಿ105 ಚಿತ್ರಗಳ ಪೈಕಿ 75 ಚಿತ್ರಗಳನ್ನು ಪ್ರದರ್ಶಿಸದಂತೆ ತೆಗೆದು ಹಾಕಿದೆ. ಇದು ಕಾಂಗ್ರೆಸ್ ಮತ್ತು ಅದರ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net