

ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಕೇಂದ್ರ ಸರ್ಕಾರ ಭಾರಿ ರಿಲೀಫ್ ನೀಡಿದ್ದು, ವಿವಿಧ ಬ್ರ್ಯಾಂಡ್ಗಳ 137 ಕ್ಯಾನ್ಸರ್ ನಿರೋಧಕ ಔಷಧಗಳ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಿದೆ. ಟ್ರೇಡ್ ಮಾರ್ಜಿನ್ (ವ್ಯಾಪಾರ ಅಂತರ) ಮಿತಿಗೊಳಿಸುವ ಸರ್ಕಾರದ ನಿರ್ಧಾರದಿಂದಾಗಿ ಈ ಪರಿಷ್ಕೃತ ದರಗಳು ನ.9ರಿಂದ ಜಾರಿಗೆ ಬರಲಿದ್ದು, ಇದರಿಂದ ಗ್ರಾಹಕರಿಗೆ ವಾರ್ಷಿಕ ಅಂದಾಜು 3,502.31 ಕೋಟಿ ರೂ. ಉಳಿತಾಯವಾಗಲಿದೆ.
ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್ಪಿಪಿಎ) ಈ ದರ ಕಡಿತವನ್ನು ಪ್ರಕಟಿಸಿದೆ. ಇದುವರೆಗೆ 76 ಫಾಮಾ ಕಂಪನಿಗಳು 121 ಔಷಧಗಳನ್ನು ಒಳಗೊಂಡ 1,225 ಫಾಮುಲೇಶನ್ಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್ಪಿ)ಯನ್ನು ಸಲ್ಲಿಸಿವೆ. ಇದರಲ್ಲಿ 1,031 ಔಷಧಗಳ ಬೆಲೆ ಇಳಿಕೆಯಾಗಿದ್ದು, 600ಕ್ಕೂ ಹೆಚ್ಚು ಬ್ರ್ಯಾಂಡ್ಗಳ ಬೆಲೆಯಲ್ಲಿ ಶೇ.50ರಷ್ಟು ಕಡಿತವಾಗಿದೆ. ಗರಿಷ್ಠ ಶೇ.96.45ರಷ್ಟು ದರ ಇಳಿಕೆಯಾಗಿದೆ.
1. ಸ್ತನ ಕ್ಯಾನ್ಸರ್(ಪಲ್ಬೊಪ್ರೊ): 40,421.33ರಿಂದ 2,720 ರೂಪಾಯಿಗೆ ಇಳಿಕೆ.
2. ಪ್ರಾಸ್ಟೇಟ್ ಕ್ಯಾನ್ಸರ್(ಅಬಿರೋನ್): 41,250ರಿಂದ 3,218.23 ರೂ.ಗೆ ಕಡಿತ.
3. ಶ್ವಾಸಕೋಶದ ಕ್ಯಾನ್ಸರ್ (ಬ್ರಿಕ್ಸ್ಟಾ): 25,995ರಿಂದ 3,318 ರೂ.ಗೆ ಇಳಿಕೆ.
ಎಲ್ಲ ಚಿಲ್ಲರೆ ವ್ಯಾಪಾರಿಗಳು ಮತ್ತು ಆಸ್ಪತ್ರೆಗಳು ಪರಿಷ್ಕೃತ ದರಪಟ್ಟಿಯನ್ನು ಗ್ರಾಹಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ನಿಯಮ ಉಲ್ಲಂಘನೆ ಆಗದಂತೆ ರಾಜ್ಯ ಡ್ರಗ್ ಕಂಟ್ರೋಲರ್ಗಳು ನಿಗಾ ವಹಿಸಲಿದ್ದಾರೆ. ಗ್ರಾಹಕರು ಹೊಸ ದರಗಳನ್ನು ಎನ್ಪಿಪಿಎ ಪೋರ್ಟಲ್ ಅಥವಾ ‘ಫಾಮಾ ಸಾಹಿ ದಾಮ್ ಆಪ್ ಮೂಲಕ ಪರಿಶೀಲಿಸಬಹುದು ಮತ್ತು ನಿಯಮ ಉಲ್ಲಂಘನೆಯಾದರೆ ದೂರು ದಾಖಲಿಸಬಹುದು.