ದೀಪಾವಳಿಗೂ ಮುನ್ನ ಹೋಟೆಲ್, ರೆಸ್ಟೋರೆಂಟ್​ಗಳಿಗೆ ಶಾಕ್: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 10 ರೂ. ಹೆಚ್ಚಳ | LPG cylinder

ದೀಪಾವಳಿ ಹಬ್ಬಕ್ಕೂ ಮುನ್ನವೇ ಇಂದು(ನ. 01) ಹೋಟೆಲ್, ರೆಸ್ಟೋರೆಂಟ್​ಗಳಿಗೆ ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು ಶಾಕ್ ನೀಡಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 10-11.50 ರೂ.ಗಳಷ್ಟು ಹೆಚ್ಚಳ ಮಾಡಿವೆ. ಆದರೆ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on: 

ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುನ್ನವೇ ಇಂದು(ನ. 01) ಹೋಟೆಲ್, ರೆಸ್ಟೋರೆಂಟ್​ಗಳಿಗೆ ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು ಶಾಕ್ ನೀಡಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 10-11.50 ರೂ.ಗಳಷ್ಟು ಹೆಚ್ಚಳ ಮಾಡಿವೆ. ಆದರೆ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 10 ರೂ. ಏರಿಕೆಯಾಗಿ 2,820 ರೂ.ಗೆ ತಲುಪಿದೆ. ಮುಂಬೈನಲ್ಲಿ 2,774.50 ರೂ.ಗೆ, ಕೋಲ್ಕತ್ತಾದಲ್ಲಿ 2,964 ರೂ. ಗೆ ತಲುಪಿದೆ. ಚೆನ್ನೈನಲ್ಲಿ 11.50 ರೂ. ಹೆಚ್ಚಳವಾಗಿದ್ದು, ಹೊಸ ಬೆಲೆ 2,994.50 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ 10 ರೂ. ಏರಿಕೆಯಾಗಿ 2,908 ರೂ.ಗಳಿಗೆ ತಲುಪಿದೆ ಎಂದು ವರದಿಗಳು ಉಲ್ಲೇಖಿಸಿವೆ.

Also Read
15 ದಿನಗಳಲ್ಲೇ ಪವಾಡ; ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ ಫೇಲ್​; ವಿಎಒ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ : ಸಿಸಿಟಿವಿ ವೀಕ್ಷಿಸಿದ ಅಧಿಕಾರಿಗಳಿಗೆ ಶಾಕ್ | VAO Exam
ಸಾಂದರ್ಭಿಕ ಚಿತ್ರ

ವಾಣಿಜ್ಯ ಎಲ್‌ಪಿಜಿಯ ಬೆಲೆ ಸತತ ಮೂರನೇ ತಿಂಗಳು ಏರಿಕೆಯಾಗಿದ್ದು, ಈ ಹೆಚ್ಚಳವು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಅವಲಂಬಿಸಿರುವ ವ್ಯವಹಾರಗಳಿಗೆ, ವಿಶೇಷವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆಬದಿಯ ತಿನಿಸುಗಳು ಮತ್ತು ಅಡುಗೆ ಸೇವೆಗಳಿಗೆ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಏತನ್ಮಧ್ಯೆ, ಪರಿಷ್ಕೃತ ದರ ಪಟ್ಟಿಯ ಪ್ರಕಾರ, 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್‌ಗೆ ಹೊಸ ಸಂಪರ್ಕದ ಬೆಲೆ ಈಗ 1,903 ರೂ.ಗಳಾಗಿದ್ದರೆ, ಮರುಪೂರಣದ ಬೆಲೆ 782 ರೂ.ಗಳಾಗಿದೆ. ಈ ವರ್ಷದ ಆರಂಭದಲ್ಲಿ ಇರಾನ್-ಅಮೆರಿಕದ ಯುದ್ಧ ಮತ್ತು ಹಾರ್ಮೋಜ್ ಜಲಸಂಧಿಯಲ್ಲಿ ಬಂದ್ ಹಿನ್ನೆಲೆ ಮೇ 1 ರಂದು ಸಿಲಿಂಡರ್‌ಗೆ ಸುಮಾರು 1,000 ರೂ.ಗಳಷ್ಟು ಏರಿಕೆಯಾಗಿದ್ದು, ದೆಹಲಿ ದರವು 3,000 ರೂ.ಗಿಂತ ಹೆಚ್ಚಾಗಿ 3,071.50 ರೂ.ಗೆ ತಲುಪಿತ್ತು (ಏಜೆನ್ಸೀಸ್).