25 ಶಾಸಕರು ಪ್ರತ್ಯೇಕ ಸಭೆ ಬೆನ್ನಲ್ಲೇ ಸಿಎಂ ಓಮರ್ ಅಬ್ದುಲ್ಲಾಗೆ ಮತ್ತೊಂದು ಶಾಕ್: ಪಕ್ಷ & ಸಂಸದ ಸ್ಥಾನಕ್ಕೆ ಆಘಾ ರಾಜೀನಾಮೆ | Aga Ruhullah Mehdi

ಜಮ್ಮು-ಕಾಶ್ಮೀರದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದ್ದು, 25 ಎನ್​ಸಿಯ ಶಾಸಕರು ಪ್ರತ್ಯೇಕ ಸಭೆ ಬೆನ್ನಲ್ಲೇ ಇಂದು(ನ. 03) ಸಿಎಂ ಓಮರ್ ಅಬ್ದುಲ್ಲಾ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಶ್ರೀನಗರ ಲೋಕಸಭಾ ಸಂಸದ ಆಘಾ ಸೈಯದ್ ರುಹುಲ್ಲಾ ಮೆಹದಿ ತಮ್ಮ ಸಂಸದ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
25 ಶಾಸಕರು ಪ್ರತ್ಯೇಕ ಸಭೆ ಬೆನ್ನಲ್ಲೇ ಸಿಎಂ ಓಮರ್ ಅಬ್ದುಲ್ಲಾಗೆ ಮತ್ತೊಂದು ಶಾಕ್: ಪಕ್ಷ & ಸಂಸದ ಸ್ಥಾನಕ್ಕೆ ಆಘಾ ರಾಜೀನಾಮೆ | Aga Ruhullah Mehdi
Published on: 

ಶ್ರೀನಗರ: ಜಮ್ಮು-ಕಾಶ್ಮೀರದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದ್ದು, 25 ಎನ್​ಸಿಯ ಶಾಸಕರು ಪ್ರತ್ಯೇಕ ಸಭೆ ಬೆನ್ನಲ್ಲೇ ಇಂದು(ನ. 03) ಸಿಎಂ ಓಮರ್ ಅಬ್ದುಲ್ಲಾ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಶ್ರೀನಗರ ಲೋಕಸಭಾ ಸಂಸದ ಆಘಾ ಸೈಯದ್ ರುಹುಲ್ಲಾ ಮೆಹದಿ ತಮ್ಮ ಸಂಸದ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಶಿಯಾ ಸಮುದಾಯದ ಪ್ರಮುಖ ಮುಖಂಡರಾಗಿರುವ ಆಘಾ ಸೈಯದ್ ರುಹುಲ್ಲಾ ಮೆಹದಿ ಅವರು, ತಮ್ಮ ತಂದೆಯ 26ನೇ ಪುಣ್ಯತಿಥಿ ಸಂದರ್ಭದಲ್ಲಿ ಬುಡ್ಗಾಮ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಜೀನಾಮೆಯನ್ನು ಘೋಷಿಸಿದ್ದಾರೆ. ಮತ್ತು ಅದರಂತೆ ಲೋಕಸಭೆ ಸ್ಪೀಕರ್​ಗೆ ಪತ್ರ ಬರೆದು ರಾಜೀನಾಮೆ ಸಲ್ಲಿಸಿದ್ದಾರೆ.

ಆಘಾ ಅವರ ರಾಜೀನಾಮೆಯಿಂದ ಎನ್​ಸಿ ಪಕ್ಷದೊಂದಿಗಿನ ಅವರ ಸುಮಾರು 24 ವರ್ಷಗಳ ಸಂಬಂಧ ಅಂತ್ಯಗೊಂಡಿದೆ. ಮತ್ತು ಅವರ ರಾಜೀನಾಮೆ ಅಂಗೀಕಾರಗೊಂಡರೆ, ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ.

Also Read
ಪ್ರಬುದ್ಧ ವ್ಯಕ್ತಿಗಳ ನಡುವೆ ಚರ್ಚೆ ನಡೆಯಬೇಕು; ಪ್ರಧಾನಿ ಮೋದಿಯನ್ನು ಡಿಬೆಟ್​ಗೆ ಕರೆದ ರಾಹುಲ್​ ಗಾಂಧಿಗೆ ರಿಜಿಜು ತಿರುಗೇಟು | Kiren Rijiju
25 ಶಾಸಕರು ಪ್ರತ್ಯೇಕ ಸಭೆ ಬೆನ್ನಲ್ಲೇ ಸಿಎಂ ಓಮರ್ ಅಬ್ದುಲ್ಲಾಗೆ ಮತ್ತೊಂದು ಶಾಕ್: ಪಕ್ಷ & ಸಂಸದ ಸ್ಥಾನಕ್ಕೆ ಆಘಾ ರಾಜೀನಾಮೆ | Aga Ruhullah Mehdi

ಇನ್ನೂ ರಾಜೀನಾಮೆ ಘೋಷಣೆ ವೇಳೆ ಆಘಾ ಅವರು ನ್ಯಾಷನಲ್​ ಕಾನ್ಫರೆನ್ಸ್​ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದು, 2024ರಲ್ಲಿ ಎನ್‌ಸಿಯನ್ನು ಬೆಂಬಲಿಸಿದ ಜನರ ಭಾವನೆಗಳಿಗೆ ಪಕ್ಷ ದ್ರೋಹ ಬಗೆದಿದೆ. ಅಧಿಕಾರಕ್ಕೇರಿದ ಬಳಿಕ ಪಕ್ಷವು ಯು-ಟರ್ನ್ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ವಿಶೇಷವಾಗಿ, 370ನೇ ವಿಧಿಯನ್ನು ಮರುಸ್ಥಾಪಿಸುವುದು, ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು, ಸಮತೋಲಿತ ಮೀಸಲಾತಿ ನೀತಿ, ವಾರ್ಷಿಕ 200 ಯೂನಿಟ್ ಉಚಿತ ವಿದ್ಯುತ್ ಮತ್ತು 12 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸುವ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡಲು ಜನರ ಬೆಂಬಲವನ್ನು (ಮತಾದೇಶವನ್ನು) ಕೋರಿದ್ದ ಪಕ್ಷದ ನಾಯಕತ್ವವು, ಅಧಿಕಾರಕ್ಕೆ ಬಂದ ತಕ್ಷಣವೇ 370ನೇ ವಿಧಿಯನ್ನು ಮರುಸ್ಥಾಪಿಸುವ ಬೇಡಿಕೆಯಿಂದ ದೂರ ಸರಿದಿದೆ ಎಂದಿದ್ದಾರೆ.

Also Read
ಮುಖ್ಯಮಂತ್ರಿಯನ್ನು, ಸರ್ಕಾರವನ್ನು ಟೀಕಿಸುವ, ಹೊಗಳುವ ಹಕ್ಕು ಪ್ರತಿಯೊಬ್ಬರಿಗಿದೆ : ಮದ್ರಾಸ್ ಹೈಕೋರ್ಟ್ | Madras High Court
25 ಶಾಸಕರು ಪ್ರತ್ಯೇಕ ಸಭೆ ಬೆನ್ನಲ್ಲೇ ಸಿಎಂ ಓಮರ್ ಅಬ್ದುಲ್ಲಾಗೆ ಮತ್ತೊಂದು ಶಾಕ್: ಪಕ್ಷ & ಸಂಸದ ಸ್ಥಾನಕ್ಕೆ ಆಘಾ ರಾಜೀನಾಮೆ | Aga Ruhullah Mehdi

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ ವೇಳೆ, ಸಿಎಂ ಅಬ್ದುಲ್ಲಾ ಅವರು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿದ ರೀತಿ ಮತ್ತು ಪ್ರಧಾನಿಯನ್ನು ಶ್ಲಾಘಿಸಿದ ಕ್ರಮವನ್ನೂ ಪ್ರಶ್ನಿಸಿರುವ ಅವರು, ಪ್ರಧಾನಿಯವರ ಭೇಟಿಯ ಸಂದರ್ಭಗಳನ್ನು ಬಳಸಿಕೊಂಡು, ಈ ಪ್ರದೇಶದ ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಯಾಕೆ ಒತ್ತಾಯಿಸಲಿಲ್ಲ ಎಂದು ಕೇಳಿದ್ದಾರೆ.

ಇದೇ ವೇಳೆ ಎನ್‌ಸಿ ಪಕ್ಷದಿಂದ ಹೊರಬಂದ ಮಾತ್ರಕ್ಕೆ ನಾನು ಬೇರೆ ಪಕ್ಷಕ್ಕೆ ಸೇರುತ್ತೇನೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಪ್ರಾಮಾಣಿಕ ಹಾಗೂ ಸಮರ್ಪಣಾಭಾವವುಳ್ಳ ಯುವಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಲು ತಾನು ಬಯಸುವುದಾಗಿ ಹೇಳಿದ್ದಾರೆ (ಏಜೆನ್ಸೀಸ್).