1989 ರಿಂದ ಮುಂದಿನ 3 ದಶಕಗಳ ಕಾಲ ಭಾರತದ ರಾಜಕಾರಣವನ್ನು ಪ್ರಾದೇಶಿಕ ಪಕ್ಷಗಳೇ ನಿಯಂತ್ರಿಸುತ್ತಿದ್ದವು. ದೆಹಲಿಯಲ್ಲಿ ಯಾರು ಅಧಿಕಾರ ಹಿಡಿಯಬೇಕು ಎಂಬುದನ್ನು ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ, ಬಂಗಾಳದ ಟಿಎಂಸಿ, ಒಡಿಶಾದ ಬಿಜೆಡಿ, ಉತ್ತರ ಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಹಾಗೂ ಬಿಹಾರದ ಆರ್ಜೆಡಿ, ಜೆಡಿಯು ನಿರ್ಧರಿಸುತ್ತಿದ್ದವು. ಭಾಷೆ, ಜಾತಿ ಮತ್ತು ಪ್ರಾದೇಶಿಕ ಅಸ್ಮಿತೆಯ ಆಧಾರದ ಮೇಲೆ ಬೆಳೆದ ಈ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸಿಂಹಸ್ವಪ್ನವಾಗಿದ್ದವು.