ಶಿವಸೇನಾ ಸಂಸ್ಥಾಪನಾ ದಿನ; ಮುಂಬೈನಲ್ಲಿ ಉದ್ಧವ್ ಮತ್ತು ಶಿಂಧೆ ಬಣಗಳ ನಡುವೆ ಪೋಸ್ಟರ್ ವಾರ್ | Shiv Sena

ಶಿವಸೇನಾ ಬಣಗಳ ಪೋಸ್ಟರ್
ಶಿವಸೇನಾ ಬಣಗಳ ಪೋಸ್ಟರ್
Published on
ಮುಂಬೈ: ಶಿವಸೇನೆ(Shiv Sena) ಶುಕ್ರವಾರ(ಜೂ. 19) ತನ್ನ 60ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ವೇಳೆ ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಎರಡೂ ಬಣಗಳ ನಡುವೆ ಪೋಸ್ಟರ್ ವಾರ್ ನಡೆದಿದ್ದು, ಮುಂಬೈನಾದ್ಯಂತ ಎರಡೂ ಕಡೆಯವರು ಪಕ್ಷದ ಸಿದ್ಧಾಂತ ಮತ್ತು 60 ವರ್ಷಗಳ ರಾಜಕೀಯ ಪ್ರಯಾಣದ ಬಗ್ಗೆ ಪೋಸ್ಟರ್ ಹಾಕಿದ್ದಾರೆ.
ಠಾಕ್ರೆ ನೇತೃತ್ವದ ಶಿವಸೇನಾ, ತಮ್ಮ ಪಕ್ಷದಿಂದ ಮತ್ತೊಮ್ಮೆ ಬಂಡಾಯವೆದ್ದು, ಅಂತರ ಕಾಯ್ದುಕೊಂಡಿರು ಆರು ಸಂಸದರನ್ನು ಗುರಿಯಾಗಿಸಿ ಪೋಸ್ಟರ್ ಹಾಕಿದೆ. ದೇಶದ್ರೋಹಿಗಳ ಮುಖಗಳು ಬದಲಾಗಿವೆ, ಆದರೆ ನಮ್ಮ ಆಲೋಚನೆಗಳು ಬದಲಾಗಿಲ್ಲ ಎಂಬ ಸಂದೇಶದ ಪೋಸ್ಟರ್​ಗಳನ್ನು ಅಲ್ಲಲ್ಲಿ ಹಾಕಲಾಗಿದೆ.
ಇನ್ನೂ ಶಿಂಧೆ ನೇತೃತ್ವದ ಶಿವಸೇನಾ ಬಣವೂ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿಯ ಉದ್ದಕ್ಕೂ ಸೇರಿದಂತೆ ಮುಂಬೈನ ಹಲವಾರು ಭಾಗಗಳಲ್ಲಿ ಬ್ಯಾನರ್‌ಗಳು, ಪೋಸ್ಟರ್‌ಗಳು, ಪಕ್ಷದ ಧ್ವಜಗಳು ಮತ್ತು ಶಿವಸೇನೆಯ ಹುಲಿ ಚಿಹ್ನೆಯನ್ನು ಹಾಕಿ ಶುಭಕೋರಿದೆ.

ಬಂಡಾಯ ಸಂಸದರಿಗೆ ಭದ್ರತೆ

ಗುರುವಾರ ನವದೆಹಲಿಯಲ್ಲಿ ಠಾಕ್ರೆ ಬಣದ ನಾಯಕತ್ವ ಕರೆದಿದ್ದ ಸಂಸದೀಯ ಪಕ್ಷದ ಸಭೆಯಲ್ಲಿ ಆರು ಸಂಸದರು ಭಾಗವಹಿಸದೇ ತಾವು ಅಂತರ ಕಾಯ್ದುಕೊಂಡಿರುವುದು ಪಕ್ಷವನ್ನು ಕೆರಳಿಸಿದ್ದು, ಗೈರುಹಾಜರಾದ ಸಂಸದರಿಗೆ ಪಕ್ಷ ಎಚ್ಚರಿಕೆ ನೀಡಿದೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಮತ್ತು ಅರವಿಂದ್ ಸಾವಂತ್, ಗೈರುಹಾಜರಾದ ಸಂಸದರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ಹೇಳಿದ್ದಾರೆ. ಬಂಡಾಯ ಸಂಸದರ ಸದಸ್ಯತ್ವವನ್ನು ಪಕ್ಷವು ಶೀಘ್ರದಲ್ಲೇ ರದ್ದುಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣರಾಗಿರುವ ಆರು ಸಂಸದರಿಗೆ ಮಹಾರಾಷ್ಟ್ರ ಪೊಲೀಸರು ವೈ-ಪ್ಲಸ್ ಭದ್ರತೆಯನ್ನು ಒದಗಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net