ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು; ಬಿಜೆಪಿ-ಜೆಡಿಎಸ್​ನಲ್ಲಿನ ನಾಯಕತ್ವ ಕೊರತೆ ಸಾಬೀತಾಗಿದೆ: ಪ್ರಿಯಾಂಕ್ ಖರ್ಗೆ | Priyank Kharge

ಗೃಹಸಚಿವ ಪ್ರಿಯಾಂಕ್ ಖರ್ಗೆ
ಗೃಹಸಚಿವ ಪ್ರಿಯಾಂಕ್ ಖರ್ಗೆ
Published on
ಬೆಂಗಳೂರು: ಗುರುವಾರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್​ನ ಒಟ್ಟು ಐದು ಅಭ್ಯರ್ಥಿ ಗೆಲುವು ಸಾಧಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ(Priyank Kharge), ಬಿಜೆಪಿ ಮತ್ತು ಜೆಡಿಎಸ್​ನಲ್ಲಿ ನಾಯಕತ್ವದ ಕೊರತೆ ಇರೋದು ಈ ಚುನಾವಣೆಯಲ್ಲಿ ಬಹಳ ಸ್ಪಷ್ಟವಾಗಿ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಎರಡೂ ಪಕ್ಷದ ಶಾಸಕರಿಗೆ ಅವರ ನಾಯಕರ ಬಗ್ಗೆಯೇ ನಂಬಿಕೆ ಇಲ್ಲದಂತೆ ಆಗಿದೆ. ಜನರ ಪರ ಯೋಜನೆ ಗ್ಯಾರಂಟಿ ಕೊಟ್ಟಿದ್ದೇವೆ. ಕುಟುಂಬಕ್ಕೆ ಸ್ಥಿರತೆ ಕಾಯ್ದುಕೊಂಡಿದ್ದೇವೆ. ಹೀಗಾಗಿ ನಮಗೆ ಸ್ವಾಭಿಮಾನದ ಮತ ಹಾಕಿದ್ದಾರೆ. ಕೆಲ ಶಾಸಕರು ಆತ್ಮ ಸಾಕ್ಷಿ ಮತ ನೀಡಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿ-ಜೆಡಿಎಸ್​ನವರಿಗೆ ಈ ಬಗ್ಗೆ ಕೇಳಿ, ಯಾವ ಪಕ್ಷದವರು ನಮ್ಮನ್ನು ಟೀಕೆ ಮಾಡ್ತಿದ್ದರೋ, ಅದೇ ಪಕ್ಷ ದ ನಾಯಕರ ಮತ ನಮಗೆ ಬಿದ್ದಿದೆ. ಅದಕ್ಕೆ ಬಿಜೆಪಿ, ಜೆಡಿಎಸ್‌ನವರು ಕೊಡಬೇಕು ಉತ್ತರ ಕೊಡಲಿ. ಇದು ಸ್ಪಷ್ಟವಾಗಿ ಅಶೋಕ್, ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಸೋಲಾಗಿದೆ ಎಂದು ತಿಳಿಸಿದ್ದಾರೆ.

ಕುದುರೆ ವ್ಯಾಪಾರ ಆರೋಪ

ಪರಿಷತ್ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕುದುರೆ ವ್ಯಾಪಾರ ನಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ನಾವು ಯಾರೂ ಸಹ ಬೇರೆ ಪಕ್ಷದವರನ್ನ ಸೆಳೆದಿಲ್ಲ. ನಾವು ಅಸಂವಿಧಾನವಾಗಿ ನಾವು ಗೆದ್ದಿಲ್ಲ. ಇದು ಸೀಕ್ರೆಟ್ ಎಲೆಕ್ಷನ್ ಬ್ಯಾಲೆಟ್ ಮತ ಇವು. ನಾವೇನು ಅವರ ಶಾಸಕರಿಗೆ ಕೈ ಕಾಲು ಬಿದ್ದಿಲ್ಲವಲ್ಲ ಎಂದಿದ್ದಾರೆ.

ಮೇಕೆದಾಟುವಿಗೆ ತಮಿಳುನಾಡು ರೆಸಲ್ಯೂಷನ್ ವಿಚಾರ

ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲೊರಟಿರುವ ಮೇಕೆದಾಟು ಡ್ಯಾಂ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿರುವ ಬಗ್ಗೆ ಮಾತನಾಡಿರುವ ಅವರು, ಅವರ ಹಿತಾಸಕ್ತಿ ಮೇಲೆ ರೆಸಲ್ಯೂಷನ್ ಪಾಸ್ ಮಾಡಿದ್ದಾರೆ. ಹೆಚ್ಚುವರಿ ನೀರು ಸಂಗ್ರಹಣೆ ಮಾಡಿ ಅಲ್ಲಿನ‌ ಜನರಿಗೆ ಅನುಕೂಲ ಆಗಲೆಂದು ಮಾಡಿದ್ದೇವೆ. ನಾವು ಕೂಡ ರಾಜ್ಯದ ಹಿತಾಸಕ್ತಿ ಕಾಪಾಡಬೇಕಾಗಿದೆ ಎಂದು ಹೇಳಿದ್ದಾರೆ.

ಕಲಬುರಗಿ ಪೊಲೀಸರ ಲಂಚ ಸ್ವೀಕಾರ ಆರೋಪ

ಕಲಬುರಗಿ ಪೊಲೀಸರು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಖರ್ಗೆ, ಎಲ್ಲಾ ಇಲಾಖೆಯಲ್ಲಿ ಇಂತಹವರು ಒಂದಿಬ್ಬರು ಇದ್ದೇ ಇರುತ್ತಾರೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಳ್ತಾರೆ ಅಂದ್ರೆ ನಾವೇ ಮಾಡಿರ್ತೇವೆ. ಯಾರ್ಯಾರು ಶಾಸಕರು ನಮ್ಮ ಬಳಿ ಬಂದು‌ ಮನವಿ ಮಾಡ್ತಾರೆ. ಅವರ ಶಿಫಾರಸ್ಸಿನಂತೆ ನಾವು ಹಾಕಿರ್ತೀವಿ. ಆದ್ರೆ ಅವರು ಪ್ರಾಮಾಣಿಕ ವಾಗಿ ಕೆಲಸ ಮಾಡಬೇಕು, ಅದನ್ನ ಬಿಟ್ಟು ಈ ರೀತಿ ಮಾಡಿದ್ರೆ ಕ್ರಮ ಆಗುತ್ತದೆ ಎಂದಿದ್ದಾರೆ.
ಇನ್ನೂ ಕಡೆಯದಾಗಿ ಜಿಬಿಎ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ, ರಾಜ್ಯ ಹಾಗೂ ಲೋಕಸಭಾ ಎಲೆಕ್ಷನ್ ಇದೆ. ಎಲ್ಲಾ ಕಡೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಗ್ಯಾರಂಟಿಗಳ ಪರಿಷ್ಕರಣೆ ಬಗ್ಗೆ ಸಿಎಂ ಈಗಾಗಲೇ ಮಾತನಾಡಿದ್ದಾರೆ. ಅನರ್ಹ ಇದ್ದವರಿಗೆ ಗ್ಯಾರಂಟಿ ಹೋಗಬಾರದು. ತಾಂತ್ರಿಕವಾಗಿ ಕ್ರಮ‌ ತೆಗೆದುಕೊಳ್ಳಲಾಗಿದೆ. ಅಂಕಿ ಅಂಶ ಇದೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗ್ತಿದೆ, ಅದನ್ನ ಕೂಡಲೇ ತಡೀಬೇಕು. ಮೃತಪಟ್ಟವರಿಗೂ ಹಣ ಹೋಗ್ತಿದೆ ಹೀಗಾಗಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net