ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತಿದ್ದು, ಇದು ಸಮರ್ಥ ನಾಯಕತ್ವದ ಕೊರತೆಯನ್ನು ಪ್ರತಿಬಿಂಬಿಸುತ್ತದೆ, ವಂಶಪಾರಂಪರ್ಯ ರಾಜಕೀಯಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆಮ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎನ್ನುವ ವಿಶ್ಲೇಷಣೆಗಳು ಬಿಜೆಪಿ ವಲಯದಿಂದ ಕೇಳಿ ಬರುತ್ತಿವೆ. ಒಂದು ದಶಕದ ಹಿಂದಿನಿಂದ ಬದ್ಲಾಪುರ ಭಾಗದಲ್ಲಿ ಮ್ಹಾತ್ರೆ ಕುಟುಂಬ ಹಿಡಿತ ಹೊಂದಿದ್ದು, 2015 ರ ಪುರಸಭೆಯ ಚುನಾವಣೆಯಲ್ಲಿ ಆ ಕುಟುಂಬದ ನಾಲ್ವರು ಸದಸ್ಯರು ಕೌನ್ಸಿಲ್ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.