ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರಿಗೆ ಕರೆ ಮಾಡಿದ ವಂಚಕ ಆಕೆಯ ಹೆಸರು, ಕುಟುಂಬಸ್ಥರ ಬಗ್ಗೆ ಹೇಳುವ ಮೂಲಕ, ಅವರ ಭರವಸೆಯನ್ನು ಗಳಿಸಿದ. ಆನಂತರ ಹೇಳಿದ್ದು ಹೀಗೆ, "ಕೋವಿಡ್ ಹೋಲುವ ಹೊಸ ಸಾಂಕ್ರಾಮಿಕ ರೋಗ ಮಾನವನ ತಲೆ ಕೂದಲಿನಿಂದ ಹರಡುತ್ತದೆ. ತಲೆ ಬೋಳಿಸಿಕೊಳ್ಳುವ ಮೂಲ ಈ ರೋಗವನ್ನು ತಡೆಗಟ್ಟಬಹುದು. ಈ ಪ್ರಕ್ರಿಯೆ ಪ್ರೋತ್ಸಾಹಿಸಿದವರಿಗೆ ಸರ್ಕಾರ ಮಹಿಳೆಯರಿಗೆ 15,000 ರೂ. ಹಾಗೂ ಶಾಲಾ- ಕಾಲೇಜು ಮಕ್ಕಳಿಗೆ ಲ್ಯಾಪ್‌ಟಾಪ್ ಜೊತೆಗೆ 45,000 ರೂ. ನೀಡಲಾಗುತ್ತದೆ. ಪುರುಷರಿಗೆ 6,000 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ" ಎಂದು ನಂಬಿಸಿದ್ದಾರೆ.