Reels addiction Bengaluru: ಮೊಬೈಲ್ ನಮ್ಮ ಜೀವನದ ಒಂದು ಭಾಗವಾಗುತ್ತಿದೆ. ಅದರಲ್ಲಿಯೂ ರೀಲ್ಸ್ಗಳು ಬದುಕನ್ನು ಆವರಿಸಿಕೊಂಡಿದೆ. ಊಟ ಮಾಡುವಾಗ, ನಡೆದಾಡುವಾಗ, ಒಬ್ಬಂಟಿಯಾಗಿದ್ದಾಗ, ಗೆಳತಿಯರ ಜೊತೆ ಇದ್ದಾಗ ಹೀಗೆ ಕೊಂಚವು ಮೆದುಳಿಗೆ ರೆಸ್ಟ್ ಕೊಡದಂತೆ ಅಡಿಕ್ಟ್ ಆಗಿಬಿಟ್ಟಿದ್ದೇವೆ. ಮನುಷ್ಯರೊಂದಿಗೆ ಹೊಂದಿಕೊಳ್ಳುವ ಪ್ರಮೇಯವೇ ಈಗಿಲ್ಲ. ಎಲ್ಲವೂ ಮೊಬೈಲ್ ಮಯ. ಇನ್ನೂ ಈ ಬಗ್ಗೆ ಎಕ್ಸ್ನಲ್ಲಿ ಮಲ್ಟಿಬ್ಯಾಗ್ AI ನ ಸಂಸ್ಥಾಪಕ ಮತ್ತು ಸಿಇಒ ಆದಿತ್ಯ ಆನಂದ್ ಮಹತ್ವದ ವಿಚಾರವೊಂದು ಹಂಚಿಕೊಂಡಿದ್ದಾರೆ.