ರಾಂಚಿಯ ಧುರ್ವಾ ಮೂಲದ ಈ ಯುವ ಈಜುಗಾರ ಇಶಾಂಕ್, ಶ್ರೀಲಂಕಾದ ತಲೈಮನ್ನಾರ್ನಿಂದ ಭಾರತದ ಧನುಷ್ಕೋಡಿಯವರೆಗಿನ ಪಾಕ್ ಜಲಸಂಧಿಯನ್ನು (Palk Strait) ಕೇವಲ 9 ಗಂಟೆ 50 ನಿಮಿಷಗಳಲ್ಲಿ ದಾಟಿ ಇತಿಹಾಸ ನಿರ್ಮಿಸಿದ್ದಾನೆ. ಸಮುದ್ರದ ಭೀಕರ ಅಲೆಗಳು, ಪ್ರವಾಹ ಮತ್ತು ಅಪಾಯಕಾರಿ ಜಲಚರಗಳ ನಡುವೆಯೂ ಧೃತಿಗೆಡದೆ ಗುರಿ ತಲುಪಿದ ಇಶಾಂಕ್, ಈ ಮಾರ್ಗವನ್ನು ದಾಟಿದ ವಿಶ್ವದ ಅತ್ಯಂತ ಕಿರಿಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.