ಆಧಾರ್ ಬಯೋಮೆಟ್ರಿಕ್​ ಉಚಿತ ಅಪ್ಡೇಟ್​ಗೆ ಇದೇ ಕೊನೇ ದಿನಾಂಕ! UIDAI ಗಡುವು ವಿಸ್ತರಣೆ ಬಹುತೇಕ ಡೌಟ್​ | Aadhaar Biometric Update

ಇದನ್ನು ಸಾಮಾನ್ಯವಾಗಿ ಏಳರಿಂದ ಹದಿನೈದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ವಿಧಿಸಲಾಗುತ್ತದೆ. ಪ್ರಸ್ತುತ, ಈ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವ ಸೌಲಭ್ಯವು 5ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಮಾಡಲಾಗಿದೆ.
Aadhaar Biometric Update
ಆಧಾರ್ ಬಯೋಮೆಟ್ರಿಕ್​ ಉಚಿತ ಅಪ್ಡೇಟ್​ಗೆ ಇಲ್ಲಿದೆ ನೋಡಿ ಕೊನೇ ದಿನಾಂಕ! UIDAI ಗಡುವು ವಿಸ್ತರಣೆ ಬಹುತೇಕ ಡೌಟ್​
Published on: 

Aadhaar Biometric Update: ಶ್ರೀಸಮಾನ್ಯನ ಅಧಿಕಾರ ಎನ್ನುವಂತೆ ದೇಶದಲ್ಲಿ ಪ್ರತಿ ಮಗು, ವಯಸ್ಕರು ಮತ್ತು ವೃದ್ಧರು ಎಲ್ಲರಿಗೂ ಆಧಾರ್ ಪ್ರಮುಖ ಗುರುತಿನ ಚೀಟಿಯಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಇದು ಕಡ್ಡಾಯವಾಗಿದೆ. ಆದರೆ, ಐದು ವರ್ಷದೊಳಗಿನ ಮಕ್ಕಳಿಗೆ ‘ಬಾಲ್ ಆಧಾರ್’ ನೀಡುವಾಗ ಅವರ ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ ತೆಗೆದುಕೊಳ್ಳುವುದಿಲ್ಲ ಎಂಬುದು ಬಹುತೇಕರಿಗೆ ಗೊತ್ತಿದೆ. ಮಕ್ಕಳಿಗೆ ಐದು ವರ್ಷ ತುಂಬಿದ ನಂತರವೇ, ಅವರ ಫೋಟೋದೊಂದಿಗೆ ಮೊದಲ ಬಾರಿಗೆ ಆಧಾರ್‌ನಲ್ಲಿ ಅವರ ಬೆರಳಚ್ಚು ಮತ್ತು ಐರಿಸ್ ಮಾಹಿತಿಯನ್ನು ನವೀಕರಿಸುವುದು ಕಡ್ಡಾಯವಾಗಿದೆ.

ಅದೇ ಮಕ್ಕಳು ಹದಿನೈದು ವರ್ಷ ದಾಟಿದ ಎರಡನೇ ಬಾರಿಗೆ ಈ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ ನವೀಕರಣ ಶುಲ್ಕವನ್ನು ಒಂದು ವರ್ಷದವರೆಗೆ ಮನ್ನಾ ಮಾಡಲು ನಿರ್ಧರಿಸಿದ್ದು, ಇದನ್ನು ಸಾಮಾನ್ಯವಾಗಿ ಏಳರಿಂದ ಹದಿನೈದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ವಿಧಿಸಲಾಗುತ್ತದೆ. ಪ್ರಸ್ತುತ, ಈ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವ ಸೌಲಭ್ಯವು 5ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಮಾಡಲಾಗಿದೆ.

ಆದಾಗ್ಯೂ, ಈ ಉಚಿತ ಬಯೋಮೆಟ್ರಿಕ್ ಅಪ್‌ಡೇಟ್ ಸೇವೆಗಳು ಇದೇ ಸೆಪ್ಟೆಂಬರ್ 30 ರವರೆಗೆ ಮಾತ್ರ ಲಭ್ಯವಿರುತ್ತವೆ ಎಂದು UIDAI ಸ್ಪಷ್ಟಪಡಿಸಿದೆ. ಈ ಗಡುವು ಮುಗಿದ ಮೇಲೂ ಉಚಿತ ಮಾಡಿಕೊಡಿ ಎಂದು ಕೇಳಲು ಸಾಧ್ಯವಿಲ್ಲ. ಅವಧಿ ಮುಗಿದ ನಂತರ ಮುಂದಾದರೆ, ನಿಮ್ಮದೇ ಸ್ವಂತ ದುಡ್ಡಿನಿಂದ ಪಾವತಿಸಬೇಕಾಗುತ್ತದೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ಯಾವುದೇ ವಿಳಂಬವಿಲ್ಲದೆ ಹತ್ತಿರದ ಆಧಾರ್ ದಾಖಲಾತಿ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಕರೆದೊಯ್ದು ಈ ಕೆಲಸವನ್ನು ಮಾಡಬಹುದು.

Also Read
ತಾಯಿ ಆರೈಕೆ, ಮನುಷ್ಯರ ಕಾಳಜಿ ದೊರೆಯದೆ; ಶಿವಮೊಗ್ಗದಲ್ಲಿ ಜನಿಸಿದ ಕೆಲವೇ ದಿನಗಳಲ್ಲಿ ಪ್ರಾಣಬಿಟ್ಟ ಸಿಂಹಿಣಿಯ 4 ಮರಿಗಳು! Lion Cubs
Aadhaar Biometric Update

ಇದಕ್ಕಾಗಿ ಈಗಾಗಲೇ 1.56 ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ವಿಶೇಷ ಕ್ಯಾಂಪ್​ಗಳನ್ನು ಏರ್ಪಡಿಸಲಾಗಿದ್ದು, 2 ಕೋಟಿಗೂ ಹೆಚ್ಚು ಮಕ್ಕಳ ಬಯೋಮೆಟ್ರಿಕ್ಸ್ ಅಪ್ಡೇಟ್​ ಮಾಡಲಾಗಿದೆ. ಈ ಗಡುವಿನೊಳಗೆ ನೀವು ಅವುಗಳನ್ನು ನವೀಕರಿಸದಿದ್ದರೆ, ಭವಿಷ್ಯದಲ್ಲಿ ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಶಾಲಾ-ಕಾಲೇಜು ಪ್ರವೇಶ, ಸರ್ಕಾರದ ಶಿಷ್ಯವೇತನ, ಕಲ್ಯಾಣ ಯೋಜನೆಗಳಿಗೆ ಮಾತ್ರವಲ್ಲದೆ ನೀಟ್, ಜೆಇಇ, ಸಿಯುಇಟಿಯಂತಹ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಾಗ ಆಧಾರ್ ಬಯೋಮೆಟ್ರಿಕ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಗಂಭೀರ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಹೀಗಾಗಿಯೇ, ಈ ಗಡುವು ಮುಕ್ತಾಯಗೊಳ್ಳುವ ಮೊದಲು ನಿಮ್ಮ ಮಗುವಿನ ಆಧಾರ್ ಬಯೋಮೆಟ್ರಿಕ್ ನವೀಕರಣವನ್ನು ಪೂರ್ಣಗೊಳಿಸುವಂತೆ ಯುಐಡಿಎಐ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net