ಶನಿವಾರ (ಮೇ 9) ಬೆಳಿಗ್ಗೆ ಈ ಘಟನೆ ನಡೆದಿದ್ದು ಪ್ರಾಣಿ ಕಲ್ಯಾಣ ಕಾರ್ಯಕರ್ತೆ ಜಸ್ಮೀತ್ ಕೌರ್ ಅರೋರಾ, ಸಮವಸ್ತ್ರದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಭದ್ರತಾ ಸಿಬ್ಬಂದಿ ಸ್ಥಳೀಯ ಬೀದಿ ನಾಯಿಯೊಂದನ್ನು ಕೋಲಿನಿಂದ ಹೊಡೆದು ಸಾಯಿಸಿದ್ದನಂತೆ, ಇದರಿಂದ ಕುಪಿತಳಾದ ಜಸ್ಮೀತ್ ಗಾರ್ಡ್ ಮೇಲೆ ದಾಳಿ ಮಾಡಿದ್ದಾರೆ.