ವೈರಲ್ ಭೂತದ ಹೊಸ ಅವತಾರ: ಬದುಕಿರುವ ಹೆಂಡತಿಯ ಪಿಂಡದಾನ ಮಾಡಿದ ಪತಿರಾಯ; ವಿಡಿಯೋ ವೈರಲ್​! Viral Video

ನದಿದಡದಲ್ಲಿ ಪಿಂಡದಾನ ಮಾಡಿದ ಪತಿರಾಯ
ನದಿದಡದಲ್ಲಿ ಪಿಂಡದಾನ ಮಾಡಿದ ಪತಿರಾಯ
Published on

ಪ್ರಮುಖ ಮುಖ್ಯಾಂಶಗಳು

  • ಹೆಂಡತಿಯ ರೀಲ್ಸ್ ಹುಚ್ಚಿಗೆ ಬೇಸತ್ತ ಪತಿ
  • ನದಿದಡದಲ್ಲಿ ಪಿಂಡದಾನ ಮಾಡಿದ ಪತಿರಾಯ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ವೈರಲ್​: ಯಾವಾಗ ಪ್ರತಿಯೊಬ್ಬರ ಕೈಗೆ ಮೊಬೈಲ್​ ತಲುಪಿತೋ ಅಂದಿನಿಂದ ಈ ವೈರಲ್​ ಆಗಬೇಕೆಂಬ ಭೂತ ಜನರ ತಲೆ ಏರಿದೆ. ಆದ್ದರಿಂದ ನಮ್ಮ ದೇಶದಲ್ಲಿ ಯಾವುದಾದರೊಂದು ವಿಡಿಯೋ ವೈರಲ್ (Viral Video)​ ಆಗುತ್ತಲೇ ಇರುತ್ತದೆ.
ಕೆಲ ದಿನಗಳ ಹಿಂದೆ ಬದುಕಿರುವ ಪತ್ನಿಯ ಪಿಂಡದಾನ ಮಾಡಿರುವ ಗಂಡನ ವಿಡಿಯೋವೊಂದು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಗಂಡನೊಬ್ಬ ತನ್ನ ಪತ್ನಿಯ ಫೋಟೊವನ್ನು ಹಿಡಿದುಕೊಂಡು ನದಿ ತಟದಲ್ಲಿ ಪಿಂಡದಾನ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಮಾಹಿತಿ ಪ್ರಕಾರ ಇತನ ಹೆಂಡತಿ ಯಾವಾಗಲೂ ರೀಲ್ಸ್​ ಮಾಡುತ್ತಿದ್ದು, ಇದರಿಂದ ರೋಸಿ ಹೋಗಿರುವ ಪತಿರಾಯ ಪಿಂಡದಾನ ಮಾಡಿದ್ದಾನೆ. ಅದರೆ ಇತನ ಹೆಂಡತಿ ಜೀವಂತಯವಾಗಿದ್ದಾಳೆ ಎಂದು ತಿಳಿದು ಬಂದಿದೆ.
ನೆಟ್ಟಿಗರಿಂದ ಪರ-ವಿರೋಧದ ಚರ್ಚೆ!
ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದಂತೆ ನೆಟ್ಟಿಗರು ಕಮೆಂಟ್​ ಮಾಡಲು ಶುರುವಿಟ್ಟಿದ್ದಾರೆ. ಈ ದಂಪತಿಗಳ ಜಗಳಕ್ಕಾಗಿ ನಮ್ಮ ಸನಾತನ ಹಿಂದೂ ಪದ್ಧತಿಯನ್ನು ಏಕೆ ಬಳಕೆ ಮಾಡಿಕೊಳ್ಳುತ್ತಿದ್ದಿರಿ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇವೆಲ್ಲಾ ಕೇವಲ ಲೈಕ್ಸ್​ಗಾಗಿ ಮಾಡಿರುವ ಗಿಮಿಕ್​ ಅಷ್ಟೇ ಇದನ್ನು ಸೀರಿಯಸ್​ ಆಗಿ ತೆಗೆದುಕೊಳ್ಳಬೇಡಿ ಎಂದು ಇಬ್ಬೊಬ್ಬರು ಹೇಳಿದ್ದಾರೆ.
ನಿಮ್ಮ ದಾಂಪತ್ಯದಲ್ಲಿ ಸಮಸ್ಯೆಯಿದ್ದರೆ ನ್ಯಾಯಾಲಯಕ್ಕೆ ಹೋಗಿ ಅದರ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚಾಟ ಮಾಡಬೇಡಿ ಎಂದು ಮತ್ತೊಬ್ಬರು ತಿಳಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net