ಮತ ಮತ್ತು ದೇಶದ ಉಳಿವಿಗಾಗಿ ರಾಮಲೀಲಾ ಮೈದಾನಕ್ಕೆ ಬನ್ನಿ!... ಯುವಜನತೆಗೆ ರಾಹುಲ್ ಗಾಂಧಿ ಕರೆ; ಬಿಜೆಪಿಗೆ ಧನ್ಯವಾದ ಹೇಳಿದ್ದೇಕೆ..? | Rahul Gandhi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಜಕೀಯ ಸಮರ ಸಾರಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಮತ್ತು ಮತದಾರರ ಹಕ್ಕುಗಳ ಕಳವನ್ನು ತಡೆಯಲು ನವೆಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದ ವತಿಯಿಂದ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಘೋಷಿಸಿದ್ದಾರೆ.
ಮತ ಮತ್ತು ದೇಶದ ಉಳಿವಿಗಾಗಿ ರಾಮಲೀಲಾ ಮೈದಾನಕ್ಕೆ ಬನ್ನಿ!... ಯುವಜನತೆಗೆ ರಾಹುಲ್ ಗಾಂಧಿ ಕರೆ; ಬಿಜೆಪಿಗೆ ಧನ್ಯವಾದ ಹೇಳಿದ್ದೇಕೆ..? | Rahul Gandhi
Published on: 

ದೇಶದ ಭವಿಷ್ಯ ಹಾಗೂ ಸಂವಿಧಾನದ ಉಳಿವಿಗಾಗಿ ಆಯೋಜಿಸಲಾಗಿರುವ ಈ ಸಮಾವೇಶದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ, ವಿಶೇಷವಾಗಿ ಯುವಜನತೆ ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಅವರು ಕಳಕಳಿಯ ಕರೆ ನೀಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ಕುರಿತು ಸುದೀರ್ಘ ಸಂದೇಶ ಹಂಚಿಕೊಂಡಿರುವ ರಾಹುಲ್ ಗಾಂಧಿ, ಈ ಬೃಹತ್ ದೆಹಲಿ ಚಲೋ ಕಾಲ್ನಡಿಗೆ ಜಾಥಾ ಹಾಗೂ ಸಮಾವೇಶದ ಬಗ್ಗೆ ತೀವ್ರವಾಗಿ ಚರ್ಚಿಸಿ, ಹೆಚ್ಚು ಪ್ರಚಾರ ಸಿಗುವಂತೆ ಮಾಡಿದ್ದಕ್ಕಾಗಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ನಾಯಕರಿಗೆ ವ್ಯಂಗ್ಯಾತ್ಮಕ ಶೈಲಿಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಮತಗಳನ್ನು ಕದಿಯಲಾಗುತ್ತಿದೆ. ಇಂತಹ ಅಕ್ರಮಗಳನ್ನು ನಾವು ಯಾವುದೇ ಕಾರಣಕ್ಕೂ ಮೌನವಾಗಿ ಸಹಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ:ಯತೀಂದ್ರ ಬಳಿ ಮಾಹಿತಿ ಇರಬಹುದು....ಕಾಂಗ್ರೆಸ್ ನಾಯಕರೇ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಪರಮೇಶ್ವರ್ ಪ್ರತಿಕ್ರಿಯೆ!

ಚುನಾವಣಾ ಆಯೋಗದ ಪಟ್ಟಿಯಿಂದ ಲಕ್ಷಾಂತರ ನಿಜವಾದ ಮತದಾರರ ಹೆಸರುಗಳನ್ನು ಏಕಾಏಕಿ ತೆಗೆದುಹಾಕಲಾಗಿದೆ. ಪ್ರಜಾಪ್ರಭುತ್ವದ ನಿಯಮ ಹಾಗೂ ಕಾಯ್ದೆಗಳನ್ನು ಬಹಿರಂಗವಾಗಿ ಗಾಳಿಗೆ ತೂರಲಾಗಿದೆ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಪ್ರಶ್ನೆ ಕೇಳಿದ ವಿರೋಧ ಪಕ್ಷದ ನಾಯಕರು ಹಾಗೂ ನಾಗರಿಕರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಲಾಗಿದೆ. ಆದರೆ ಈಗ ಕಾಲ ಬಂದಿದ್ದು, ದೇಶದ ಪ್ರಜೆಗಳೇ ಈ ಸರ್ವಾಧಿಕಾರಿ ಧೋರಣೆಗೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ರಾಹುಲ್ ಆಕ್ರೋಶ ಹೊರಹಾಕಿದ್ದಾರೆ.

ಎಕ್ಸ್ ಪೋಸ್ಟ್​!

ನವೆಂಬರ್ 1: ಚಲೋ ದೆಹಲಿ! ಮತ ಉಳಿಸಿ, ದೇಶ ಉಳಿಸಿ ಎನ್ನುವ ಈ ಐತಿಹಾಸಿಕ ಸಾರ್ವಜನಿಕ ಜಾಥಾ ದೇಶದ ವಿದ್ಯಾರ್ಥಿಗಳು, ಶ್ರಮಿಕ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಸಣ್ಣ ವರ್ತಕರು ಸೇರಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಅಚಲ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರೂ ಧಾವಿಸಿ ಬರಬೇಕು. ಮತ ಚಲಾಯಿಸುವ ಹಕ್ಕು ನಿಮ್ಮದು, ಆ ಹಕ್ಕನ್ನು ರಕ್ಷಿಸಿಕೊಳ್ಳುವ ಈ ಕಠಿಣ ಹೋರಾಟವೂ ನಿಮ್ಮದೇ ಆಗಿದೆ ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

Also Read
ಚುನಾವಣಾ ಆಯೋಗದ ವಿರುದ್ಧ ಹೋರಾಟ: ನವೆಂಬರ್ 1ರ ವಿಪಕ್ಷಗಳ ರ‍್ಯಾಲಿಗೆ ದೆಹಲಿ ಪೊಲೀಸರ ಗ್ರೀನ್ ಸಿಗ್ನಲ್! | Congress Rally
ಮತ ಮತ್ತು ದೇಶದ ಉಳಿವಿಗಾಗಿ ರಾಮಲೀಲಾ ಮೈದಾನಕ್ಕೆ ಬನ್ನಿ!... ಯುವಜನತೆಗೆ ರಾಹುಲ್ ಗಾಂಧಿ ಕರೆ; ಬಿಜೆಪಿಗೆ ಧನ್ಯವಾದ ಹೇಳಿದ್ದೇಕೆ..? | Rahul Gandhi

ಚುನಾವಣಾ ಆಯೋಗವು ನಡೆಸಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರೀ ಮಟ್ಟದ ಗೋಲ್ಮಾಲ್ ಹಾಗೂ ಮತಕಳ್ಳತನ ನಡೆದಿದೆ ಎಂದು ಆರೋಪಿಸಿರುವ ಇಂಡಿಯಾ ಮೈತ್ರಿಕೂಟ, ದೆಹಲಿ ಚಲೋ ಆಂದೋಲನದ ಅಂತಿಮ ಹಂತವಾಗಿ ಈ ಬೃಹತ್ ರ‍್ಯಾಲಿಯನ್ನು ಆಯೋಜಿಸಿದೆ. ಕಾಂಗ್ರೆಸ್ ನೇತೃತ್ವದ ಈ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಬೆಂಬಲಿಗರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.

ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದ ಈ ದೆಹಲಿ ಚಲೋ ರ‍್ಯಾಲಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಬ್ಬದ ಋತುವಿನಲ್ಲಿ ನವೆಂಬರ್ 1ರಂದು ಬೃಹತ್ ರ‍್ಯಾಲಿ ನಡೆಸುವುದರಿಂದ ಕೋಟ್ಯಂತರ ರೂಪಾಯಿ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುತ್ತದೆ ಎಂದು ಹಲವು ವರ್ತಕರ ಸಂಘಟನೆಗಳು ಕಾಂಗ್ರೆಸ್‌ಗೆ ಪತ್ರ ಬರೆದಿವೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಅಲ್ಲದೆ, 1984ರ ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಗಾಯದ ಮೇಲೆ ಬಿಸಿ ನೀರು ಎರಚುವ ಉದ್ದೇಶದಿಂದಲೇ ಕಾಂಗ್ರೆಸ್ ನವೆಂಬರ್ 1ರ ದಿನವನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net