ಚುನಾವಣಾ ಆಯೋಗದ ವಿರುದ್ಧ ಹೋರಾಟ: ನವೆಂಬರ್ 1ರ ವಿಪಕ್ಷಗಳ ರ‍್ಯಾಲಿಗೆ ದೆಹಲಿ ಪೊಲೀಸರ ಗ್ರೀನ್ ಸಿಗ್ನಲ್! | Congress Rally

ನವದೆಹಲಿ: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದ ಹಾಗೂ ಇವಿಎಂ ವಿರುದ್ಧ ಇಂಡಿಯಾ ಒಕ್ಕೂಟ ರೂಪಿಸಿರುವ ಹೋರಾಟದ ಭಾಗವಾಗಿ, ನವೆಂಬರ್ 1 ರಂದು ರಾಷ್ಟ್ರರಾಜಧಾನಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ (Congress Rally) ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ.
ನವೆಂಬರ್ 1ರ ವಿಪಕ್ಷಗಳ ರ‍್ಯಾಲಿಗೆ ದೆಹಲಿ ಪೊಲೀಸರ ಗ್ರೀನ್ ಸಿಗ್ನಲ್!
ನವೆಂಬರ್ 1ರ ವಿಪಕ್ಷಗಳ ರ‍್ಯಾಲಿಗೆ ದೆಹಲಿ ಪೊಲೀಸರ ಗ್ರೀನ್ ಸಿಗ್ನಲ್!
Published on: 

ನವದೆಹಲಿ: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದ ಹಾಗೂ ಇವಿಎಂ ವಿರುದ್ಧ ಇಂಡಿಯಾ ಒಕ್ಕೂಟ ರೂಪಿಸಿರುವ ಹೋರಾಟದ ಭಾಗವಾಗಿ, ನವೆಂಬರ್ 1 ರಂದು ರಾಷ್ಟ್ರರಾಜಧಾನಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ (Congress Rally) ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಇಂಡಿಯಾ ಒಕ್ಕೂಟವು ಈ ಬೃಹತ್ ಆಂದೋಲನವನ್ನು ಹಮ್ಮಿಕೊಂಡಿದೆ.

ಕಾಂಗ್ರೆಸ್ ಪಕ್ಷದ ರ‍್ಯಾಲಿಗೆ ನೀಡಿರುವ ಅನುಮತಿ ಕುರಿತು ಮಾಹಿತಿ ನೀಡಿರುವ ದೆಹಲಿ ಮಧ್ಯ ವಲಯದ ಉಪ ಪೊಲೀಸ್ ಆಯುಕ್ತ ರೋಹಿತ್ ರಾಜ್‌ಬೀರ್ ಸಿಂಗ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನವೆಂಬರ್ 1 ರಂದು ರಾಮಲೀಲಾ ಮೈದಾನದಲ್ಲಿ ರ‍್ಯಾಲಿ ನಡೆಸಲು ಯೋಜಿಸಿದ್ದು, ನಿಗದಿತ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಲು ಅಗತ್ಯವಿದ್ದ ಎನ್‌ಒಸಿ ನೀಡಲಾಗಿದೆ. ಅಕ್ಟೋಬರ್ 25 ರಿಂದ ನವೆಂಬರ್ 3 ರವರೆಗಿನ ಅವಧಿಗೆ ಈ ನಿರಾಕ್ಷೇಪಣಾ ಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ರ‍್ಯಾಲಿ ಸುಗಮವಾಗಿ ನಡೆಯಲು, ಸಂಚಾರ ನಿರ್ವಹಣೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಆಯೋಜಕರು ಮತ್ತು ಸಂಚಾರ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು: ಜೈಲಿನಿಂದ ಹೊರಬಂದ ಬಳಿಕ ತಮಾಷೆಯ ಪೋಸ್ಟ್ ವೈರಲ್! | Abhijeet Dipke release

ಇಂಡಿಯಾ ಒಕ್ಕೂಟದ ಜಂಟಿ ಹೋರಾಟ!

ಸೆಪ್ಟೆಂಬರ್ 30 ರಂದು ನಡೆದ ಇಂಡಿಯಾ ಒಕ್ಕೂಟದ ಪ್ರಮುಖ ಸಭೆಯಲ್ಲಿ ಎಸ್‌ಐಆರ್ ವಿವಾದ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸರಣಿ ಪ್ರತಿಭಟನೆ ಮತ್ತು ಪ್ರಜಾಪ್ರಭುತ್ವ ಉಳಿಸಿ ಹೆಸರಿನಲ್ಲಿ ಜಾಥಾ ನಡೆಸಲು ತೀರ್ಮಾನಿಸಲಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಭವಿಷ್ಯದ ಎಲ್ಲಾ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಿ ನಡೆಸಬೇಕೆಂಬುದು ಒಕ್ಕೂಟದ ಎಲ್ಲಾ ಪಕ್ಷಗಳ ಒಮ್ಮತದ ನಿರ್ಧಾರವಾಗಿದೆ ಎಂದು ಘೋಷಿಸಿದ್ದರು. ಇದರ ಮುಂದುವರಿದ ಭಾಗವಾಗಿ ನವೆಂಬರ್ 1 ರಂದು ಈ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ.

Also Read
ಪ್ರತಿಭಟನೆಗಳ ಅಬ್ಬರಕ್ಕೆ ನಲುಗಿದ ದೆಹಲಿ ವ್ಯಾಪಾರ ವಲಯಕ್ಕೆ 3,000 ಕೋಟಿ ರೂ ನಷ್ಟ!...ವರ್ತಕರ ಬೇಡಿಕೆಗಳೇನು ಗೊತ್ತಾ..? | Delhi Protests
ನವೆಂಬರ್ 1ರ ವಿಪಕ್ಷಗಳ ರ‍್ಯಾಲಿಗೆ ದೆಹಲಿ ಪೊಲೀಸರ ಗ್ರೀನ್ ಸಿಗ್ನಲ್!

ಚುನಾವಣಾ ಆಯೋಗದಲ್ಲಿನ ಭಿನ್ನಾಭಿಪ್ರಾಯದ ವರದಿ!

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಯೋಗದ ನಿರ್ಧಾರಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತಮ್ಮ ಗಮನಕ್ಕೆ ಬಾರದೆ ಹೊರಡಿಸಲಾದ ಆದೇಶಗಳ ವಿರುದ್ಧ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪಣೆ ಎತ್ತಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿತ್ತು. ಈ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗವು, ಯಾವುದೇ ಸಂಸ್ಥೆಯ ಆಂತರಿಕ ಚರ್ಚೆಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಮತ್ತು ವೀಕ್ಷಣೆಗಳು ವ್ಯಕ್ತವಾಗುವುದು ಸಹಜ. ಆಯೋಗ ಹೊರಡಿಸುವ ಎಲ್ಲಾ ಆದೇಶಗಳು ಸಂಪೂರ್ಣ ಕಾನೂನುಬದ್ಧವಾಗಿದ್ದು, ಶಾಸನಬದ್ಧ ಪ್ರಕ್ರಿಯೆಗಳನ್ನು ಅನುಸರಿಸಿಯೇ ಕೈಗೊಳ್ಳಲಾಗಿದೆ ಎಂದು ಹೇಳಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net