ಪ್ರತಿಭಟನೆಗಳ ಅಬ್ಬರಕ್ಕೆ ನಲುಗಿದ ದೆಹಲಿ ವ್ಯಾಪಾರ ವಲಯಕ್ಕೆ 3,000 ಕೋಟಿ ರೂ ನಷ್ಟ!...ವರ್ತಕರ ಬೇಡಿಕೆಗಳೇನು ಗೊತ್ತಾ..? | Delhi Protests

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳಿಂದಾಗಿ ( Delhi Protests) ಸ್ಥಳೀಯ ಉದ್ಯಮಿಗಳು ಹಾಗೂ ವರ್ತಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರಿಗೆ ವ್ಯತ್ಯಯ, ಮಾರುಕಟ್ಟೆಗಳು, ರಸ್ತೆಗಳ ಬಂದ್​​ನಿಂದಾಗಿ ಚಿಲ್ಲರೆ ಮತ್ತು ಸಗಟು ವ್ಯಾಪಾರ ಸಂಪೂರ್ಣವಾಗಿ ಕುಸಿದಿದ್ದು, ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಸುಮಾರು 3,000 ಕೋಟಿ ರೂಪಾಯಿ ಭಾರಿ ನಷ್ಟ ಸಂಭವಿಸಿದೆ ಎಂದು ನವದೆಹಲಿಯ ಪ್ರಮುಖ ವರ್ತಕರ ಒಕ್ಕೂಟವಾದ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ತಿಳಿಸಿದೆ.
ಪ್ರತಿಭಟನೆಗಳ ಅಬ್ಬರಕ್ಕೆ ನಲುಗಿದ ದೆಹಲಿ ವ್ಯಾಪಾರ ವಲಯಕ್ಕೆ 3,000 ಕೋಟಿ ರೂ ನಷ್ಟ
ಪ್ರತಿಭಟನೆಗಳ ಅಬ್ಬರಕ್ಕೆ ನಲುಗಿದ ದೆಹಲಿ ವ್ಯಾಪಾರ ವಲಯಕ್ಕೆ 3,000 ಕೋಟಿ ರೂ ನಷ್ಟ
Published on: 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳಿಂದಾಗಿ ( Delhi Protests) ಸ್ಥಳೀಯ ಉದ್ಯಮಿಗಳು ಹಾಗೂ ವರ್ತಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರಿಗೆ ವ್ಯತ್ಯಯ, ಮಾರುಕಟ್ಟೆಗಳು, ರಸ್ತೆಗಳ ಬಂದ್​​ನಿಂದಾಗಿ ಚಿಲ್ಲರೆ ಮತ್ತು ಸಗಟು ವ್ಯಾಪಾರ ಸಂಪೂರ್ಣವಾಗಿ ಕುಸಿದಿದ್ದು, ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಸುಮಾರು 3,000 ಕೋಟಿ ರೂಪಾಯಿ ಭಾರಿ ನಷ್ಟ ಸಂಭವಿಸಿದೆ ಎಂದು ನವದೆಹಲಿಯ ಪ್ರಮುಖ ವರ್ತಕರ ಒಕ್ಕೂಟವಾದ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ತಿಳಿಸಿದೆ.

ಸಿಟಿಐ ಸಂಸ್ಥೆಯ ಅಧ್ಯಕ್ಷ ಬ್ರಿಜೇಶ್ ಗೋಯಲ್ ಈ ಕುರಿತು ಮಾಹಿತಿ ನೀಡಿ, ಅಕ್ಟೋಬರ್ 10 ರಂದು ನಡೆದ ಮೊದಲ ಪ್ರತಿಭಟನೆಯಿಂದಾಗಿ ಉದ್ಯಮ ವಲಯಕ್ಕೆ 2,000 ಕೋಟಿ ರೂ ನಷ್ಟವಾಗಿತ್ತು. ತದನಂತರ ಅಕ್ಟೋಬರ್ 13 ರಿಂದ 16 ರವರೆಗೆ ಸೆಂಟ್ರಲ್ ಡೆಲ್ಲಿಯಲ್ಲಿ ನಡೆದ ರಸ್ತೆ ಬಂದ್, ಮೆಟ್ರೋ ನಿಲ್ದಾಣಗಳ ಬಂದ್ ಹಾಗೂ ಸೆಂಟ್ರಲ್ ಪಾರ್ಕ್ ಮುಚ್ಚಿದ್ದರಿಂದ ಹೆಚ್ಚುವರಿಯಾಗಿ 1,000 ಕೋಟಿ ರೂ ನಷ್ಟವಾಗಿದೆ ಎಂದು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ:MI ಪಾಳಯದಲ್ಲಿ ದಿಢೀರ್ ಬೆಳವಣಿಗೆ: ಮಹೇಲಾ ಜಯವರ್ಧನೆ ನಿರ್ಗಮನದ ಬೆನ್ನಲ್ಲೇ ರೋಹಿತ್ ಶರ್ಮಾಗೆ ಮಹತ್ವದ ಜವಾಬ್ದಾರಿ..? | Mumbai Indians

700 ಮಾರುಕಟ್ಟೆಗಳು ಸ್ತಬ್ಧ!

ಇದು ಸಾಲು ಸಾಲು ಹಬ್ಬಗಳ ದಿನವಾಗಿದ್ದು, ನವರಾತ್ರಿ ಹಾಗೂ ದೀಪಾವಳಿಯಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲೇ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ದೆಹಲಿಯ ಸಾದರ್ ಬಜಾರ್, ಚಾಂದನಿ ಚೌಕ್, ಕಾಶ್ಮೀರಿ ಗೇಟ್, ಚಾವಡಿ ಬಜಾರ್, ಭಗೀರಥ ಪ್ಲೇಸ್, ಗಾಂಧಿ ನಗರ, ನಯಾ ಬಜಾರ್, ಖಾರಿ ಬಾವೊಲಿ, ಕರಾವಳ್ ನಗರ, ಕರೋಲ್ ಬಾಗ್, ಲಜಪತ್ ರಾಯ್ ಮಾರ್ಕೆಟ್ ಮತ್ತು ಕನಾಟ್ ಪ್ಲೇಸ್ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಮಾರುಕಟ್ಟೆಗಳು ಪ್ರತಿಭಟನೆಯ ಬಿಸಿಗೆ ತತ್ತರಿಸಿವೆ. ಪರಿಣಾಮವಾಗಿ ಚಿಲ್ಲರೆ ವ್ಯಾಪಾರ ಒಂದರಲ್ಲೇ ಬರೋಬ್ಬರಿ 1,800 ಕೋಟಿ ರೂ ನಷ್ಟ ಉಂಟಾಗಿದೆ.

ಪ್ರತಿಭಟನೆಯಿಂದಾಗಿ ಸೋನಿಪತ್, ಪಾನಿಪತ್, ಗುರುಗ್ರಾಮ್, ಫರೀದಾಬಾದ್, ನೋಯ್ಡಾ, ಘಾಜಿಯಾಬಾದ್ ಮತ್ತು ರಾಜಸ್ಥಾನದಿಂದ ದೆಹಲಿಗೆ ಆಗಮಿಸಬೇಕಿದ್ದ ಸುಮಾರು 3 ರಿಂದ 4 ಲಕ್ಷ ಸಗಟು ಗ್ರಾಹಕರು ಹಾಗೂ ವ್ಯಾಪಾರಿಗಳು ನಗರಕ್ಕೆ ಬರಲು ಸಾಧ್ಯವಾಗಿಲ್ಲ. ಇದರಿಂದ ಸಗಟು ವ್ಯಾಪಾರದಲ್ಲಿ 600 ಕೋಟಿ ರೂ ನಷ್ಟವಾಗಿದೆ. ಇಷ್ಟೇ ಅಲ್ಲದೆ, ಲಾರಿಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಪೂರೈಕೆ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿದ್ದು, ಹಬ್ಬಕ್ಕಾಗಿ ಸಿದ್ಧಪಡಿಸಲಾಗಿದ್ದ ದಾಸ್ತಾನು ಗೋಡೌನ್‌ಗಳಲ್ಲೇ ಉಳಿದುಕೊಂಡಿದೆ.

Also Read
ಜಿರಳೆಗಳ ಕಾಟಕ್ಕೆ ನಲುಗಿದ ದೆಹಲಿ ವ್ಯಾಪಾರಸ್ಥರು: ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮಧ್ಯಸ್ಥಿಕೆಗೆ ಮನವಿ! | PM Modi Intervention
ಪ್ರತಿಭಟನೆಗಳ ಅಬ್ಬರಕ್ಕೆ ನಲುಗಿದ ದೆಹಲಿ ವ್ಯಾಪಾರ ವಲಯಕ್ಕೆ 3,000 ಕೋಟಿ ರೂ ನಷ್ಟ

ವಿವಿಧ ವಲಯಗಳಿಗೆ ಆದ ನಷ್ಟದ ವಿವರ

  • ಆತಿಥ್ಯ ಮತ್ತು ಸೇವಾ ವಲಯ: 300 ಕೋಟಿ ರೂ ನಷ್ಟ

  • ಸಾರಿಗೆ, ಆಟೋ-ಟ್ಯಾಕ್ಸಿ ಮತ್ತು ಪ್ರವಾಸೋದ್ಯಮ: 180 ಕೋಟಿ ರೂ ನಷ್ಟ

  • ಅಸಂಘಟಿತ ವಲಯ (ದೈನಂದಿನ ಕೂಲಿಕಾರರು, ಕುಶಲಕರ್ಮಿಗಳು, ಲೋಡಿಂಗ್ ಕಾರ್ಮಿಕರು): 120 ಕೋಟಿ ರೂ ನಷ್ಟ

ದೀಪಾವಳಿಯವರೆಗೆ ಪ್ರತಿಭಟನೆ ಮುಂದೂಡಲು ಒತ್ತಾಯ

ನವರಾತ್ರಿ, ರಾಮಲೀಲಾ ಮತ್ತು ದೀಪಾವಳಿ ಹಬ್ಬಗಳ ಸೀಸನ್ ನಮಗೆ ವರ್ಷ ಪೂರ್ತಿ ಸಂಪಾದಿಸಲು ಇರುವ ಏಕೈಕ ಸಮಯವಾಗಿದ್ದು, ಹೀಗೆಯೇ ಪ್ರತಿ ವಾರ ಪ್ರತಿಭಟನೆಗಳು ಮುಂದುವರಿದರೆ ದೀಪಾವಳಿಯ ವೇಳೆಗೆ ನಷ್ಟದ ಪ್ರಮಾಣ 10,000 ಕೋಟಿ ರೂ ದಾಟಲಿದೆ ಎಂದು ಬ್ರಿಜೇಶ್ ಗೋಯಲ್ ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೀಪಾವಳಿ ಮುಗಿಯುವವರೆಗೆ ಸೆಂಟ್ರಲ್ ಡೆಲ್ಲಿ, ನವದೆಹಲಿ ಮತ್ತು ಲುಟ್ಯೆನ್ಸ್ ವಲಯದಲ್ಲಿ ಯಾವುದೇ ರೀತಿಯ ಧರಣಿ ಅಥವಾ ಪ್ರತಿಭಟನೆಗಳನ್ನು ಮುಂದೂಡಬೇಕು ಮತ್ತು ಮುಂದಿನ ದಿನಗಳಲ್ಲಿ ನಡೆಯಲಿರುವ ಪ್ರತಿಭಟನೆಗಳಿಗಾಗಿ ಹೊರ ದೆಹಲಿಯ ಬುರಾರಿ, ರೋಹಿಣಿ, ದ್ವಾರಕಾದಂತಹ ಪ್ರದೇಶಗಳಲ್ಲಿ ಪ್ರತ್ಯೇಕ ಪ್ರತಿಭಟನಾ ವಲಯ ನಿರ್ಮಿಸಬೇಕು ಎಂದು ಸಿಟಿಐ ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೆ, ಅಕ್ಟೋಬರ್‌ನಲ್ಲಿ ಉಂಟಾದ 3,000 ಕೋಟಿ ರೂ ನಷ್ಟಕ್ಕೆ ಪರಿಹಾರವಾಗಿ ವರ್ತಕರಿಗೆ ವಿಶೇಷ ಪರಿಹಾರ ಪ್ಯಾಕೇಜ್, ವಿದ್ಯುತ್-ನೀರಿನ ಬಿಲ್ ಮತ್ತು ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು ಹಾಗೂ ಪೊಲೀಸರು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸದೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net