500 ಕೋಟಿ ರೂಪಾಯಿ ಆಡಿಯೋ ಬಾಂಬ್ ಪ್ರಕರಣ: ತನಿಖೆಗೆ ಎಸ್​ಐಆರ್ ರಚಿಸಿದ ಮಹಾರಾಷ್ಟ್ರ ಸರ್ಕಾರ | SIT

ಮರಾಠಾ ಮೀಸಲಾತಿ ಹೋರಾಟ ಕೈಬಿಡಲು ಹೋರಾಟಗಾರ ಮನೋಜ್ ಜಾರಂಗೆ 500 ಕೋಟಿ ರೂ. ನೀಡಲಾಗಿದೆ ಎಂಬ ಆಡಿಯೋವೊಂದರ ಹೇಳಿಕೆ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಆಡಿಯೋ ಕ್ಲಿಪ್ ಬಗ್ಗೆ ಆಳವಾದ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಸೋಮವಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡ(ಎಸ್​ಐಟಿ) ರಚಿಸಿದೆ.
500 ಕೋಟಿ ರೂಪಾಯಿ ಆಡಿಯೋ ಬಾಂಬ್ ಪ್ರಕರಣ: ತನಿಖೆಗೆ ಎಸ್​ಐಆರ್ ರಚಿಸಿದ ಮಹಾರಾಷ್ಟ್ರ ಸರ್ಕಾರ | SIT
Published on: 

ಮುಂಬೈ: ಮರಾಠಾ ಮೀಸಲಾತಿ ಹೋರಾಟ ಕೈಬಿಡಲು ಹೋರಾಟಗಾರ ಮನೋಜ್ ಜಾರಂಗೆ 500 ಕೋಟಿ ರೂ. ನೀಡಲಾಗಿದೆ ಎಂಬ ಆಡಿಯೋವೊಂದರ ಹೇಳಿಕೆ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಆಡಿಯೋ ಕ್ಲಿಪ್ ಬಗ್ಗೆ ಆಳವಾದ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಸೋಮವಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡ(ಎಸ್​ಐಟಿ) ರಚಿಸಿದೆ.

2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ನಾಯಕರು ಸಂಸದ ಶ್ರೀಕಾಂತ್ ಶಿಂಧೆ ಮೂಲಕ ಜರಾಂಗೇ ಪಾಟೀಲ್​ಗೆ 500 ಕೋಟಿ ರೂ ತಲುಪಿಸಲು ಯತ್ನಿಸಿದ್ದರು ಎಂದು ಆಡಿಯೋ ಸಂಭಾಷಣೆಯಲ್ಲಿ ಮಹಿಳೆಯೊಬ್ಬಳು ಹೇಳಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮತ್ತು ಆಡಳಿತರೂಢ ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನಾ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರ ಸರ್ಕಾರದ ಎಸ್​ಐಟಿ ರಚನೆ ಆದೇಶದ ಪ್ರಕಾರ, ಮುಂಬೈ ದಕ್ಷಿಣ ಪ್ರದೇಶದ ಹೆಚ್ಚುವರಿ ಪೊಲೀಸ್ ಆಯುಕ್ತ ಶೈಲೇಶ್ ಬಲ್ಕವಾಡೆ ತಂಡದ ನೇತೃತ್ವ ಎಸ್​ಐಆರ್ ರಚಿಸಲಾಗಿದೆ. ಮತ್ತು ಮುಂಬೈ ವಲಯ 3 ಉಪ ಪೊಲೀಸ್ ಆಯುಕ್ತ ವಿಜಯಕಾಂತ್ ಸಾಗರ್ ಹಾಗೂ ಸೈಬರ್, ಅಪರಾಧ ಶಾಖೆ, ಮುಂಬೈ ಉಪ ಪೊಲೀಸ್ ಆಯುಕ್ತ ಬಜರಂಗ್ ಬನ್ಸೋಡೆ ತಂಡದಲ್ಲಿದ್ದಾರೆ.

Also Read
ಪ್ರಧಾನಿ ಮೋದಿ ಅದನ್ನು ಮಾಡಲು ಹೇಳಿ, 30 ಸೆಕೆಂಡ್​ಗಳಲ್ಲಿ ಪ್ರತಿಭಟನೆ ನಿಲ್ಲಿಸುತ್ತೇವೆ: ದೆಹಲಿ ವ್ಯಾಪಾರಿಗಳಿಗೆ ರಾಹುಲ್ ಗಾಂಧಿ ಸಲಹೆ | Rahul Gandhi
500 ಕೋಟಿ ರೂಪಾಯಿ ಆಡಿಯೋ ಬಾಂಬ್ ಪ್ರಕರಣ: ತನಿಖೆಗೆ ಎಸ್​ಐಆರ್ ರಚಿಸಿದ ಮಹಾರಾಷ್ಟ್ರ ಸರ್ಕಾರ | SIT

ಎಸ್‌ಐಟಿಯು ರೆಕಾರ್ಡಿಂಗ್ ಬಗ್ಗೆ ವಿಧಿವಿಜ್ಞಾನ ಪರೀಕ್ಷೆ, ತಾಂತ್ರಿಕ ವಿಶ್ಲೇಷಣೆ ಮತ್ತು ಸಮಗ್ರ, ನಿಷ್ಪಕ್ಷಪಾತ ತನಿಖೆಯನ್ನು ಕೈಗೊಳ್ಳುತ್ತದೆ. ವಿಚಾರಣೆಗೆ ಅಗತ್ಯವಿರುವ ಯಾವುದೇ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲು ಎಸ್‌ಐಟಿ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಇನ್ನೂ ಆಡಿಯೋ ಬಿಡುಗಡೆ ಮಾಡಿದ್ದ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ, ತಾವು ಯಾವುದೇ ರೀತಿಯ ಹಣವನ್ನು ಕೇಳಿಯೂ ಇಲ್ಲ ಮತ್ತು ಪಡೆದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಆರೋಪ ಕೇಳಿಬರುತ್ತಿದ್ದಂತೆಯೇ ಶಿಂಧೆ ಬಣ ಇದನ್ನು ತಮ್ಮ ನಾಯಕನ ವಿರುದ್ಧ ನಡೆಯುತ್ತಿರುವ ಸಂಚು ಎಂದು ಕರೆದಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net