ಇತ್ತೀಚೆಗೆ ಉದ್ಧವ್ ಠಾಕ್ರೆ ಅವರು ತಮ್ಮ ಮಾತೋಶ್ರೀ ನಿವಾಸದಲ್ಲಿ ಕರೆದಿದ್ದ ಪ್ರಮುಖ ಸಭೆಗೆ 9 ಸಂಸದರ ಪೈಕಿ 5 ಸಂಸದರು ಬಾರದೇ ಇರುವುದು ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸಭೆಗೆ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ಸಂಜಯ್ ದಿನಾ ಪಾಟೀಲ್ ಮತ್ತು ರಾಜಾಭೌ ವಾಜೆ ಮಾತ್ರ ಖುದ್ದಾಗಿ ಬಂದಿದ್ದರು. ಆದರೆ, ಸಂಜಯ್ ಜಾಧವ್, ಸಂಜಯ್ ದೇಶ್‌ಮುಖ್, ಓಮ್ರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ನಾಗೇಶ್ ಪಾಟೀಲ್ ಅಷ್ಟೀಕರ್ ಸಭೆಗೆ ಹಾಜರಾಗಿರಲಿಲ್ಲ. ಆ ಐದು ಸಂಸದರು ವರ್ಚುವಲ್ (ಆನ್‌ಲೈನ್) ಮೂಲಕ ಸಭೆಗೆ ಜಾಯಿನ್ ಆಗಿದ್ದರು ಎಂದು ಪಕ್ಷ ಸಮರ್ಥಿಸಿಕೊಂಡಿದೆ.