ಕ್ರಿಕೆಟ್ ವಲಯದಲ್ಲಿ ಈಗ ರೋ-ಕೊ ಸೌಂಡ್​: ಕ್ರಿಕೆಟ್​ ದೇವರ ಆ ದಾಖಲೆಗಳ ಮೇಲೆಯೇ ರೋಹಿತ್-ವಿರಾಟ್ ಕಣ್ಣು! | INDvsWI

INDvsWI: ತಿರುವನಂತಪುರಂನಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಪ್ರಮುಖ ಆಕರ್ಷಣೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ

ಕ್ರಿಕೆಟ್ ವಲಯದಲ್ಲಿ ಈಗ ರೋ-ಕೊ ಸೌಂಡ್​
ಕ್ರಿಕೆಟ್ ವಲಯದಲ್ಲಿ ಈಗ ರೋ-ಕೊ ಸೌಂಡ್​
Published on: 

INDvsWI: ತಿರುವನಂತಪುರಂನಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಪ್ರಮುಖ ಆಕರ್ಷಣೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ. ಈ ಇಬ್ಬರೂ ದಿಗ್ಗಜ ಆಟಗಾರರು ಈಗ ಸಂಪೂರ್ಣವಾಗಿ ಏಕದಿನ ಕ್ರಿಕೆಟ್‌ನತ್ತ ಗಮನ ಹರಿಸುತ್ತಿದ್ದು, 2027 ರ ಏಕದಿನ ವಿಶ್ವಕಪ್‌ಗೆ ಭಾರತ ಸಿದ್ಧತೆ ಆರಂಭಿಸುತ್ತಿರುವಂತೆಯೇ, ಮೊದಲ ಪಂದ್ಯ ಅವರ ನೂತನ ದಾಖಲೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ,

ವೆಸ್ಟ್ ಇಂಡೀಸ್ ವಿರುದ್ಧ ಇಬ್ಬರೂ ಬ್ಯಾಟರ್‌ಗಳು ಅದ್ಭುತ ಯಶಸ್ಸು ಕಂಡಿದ್ದಾರೆ. ರೋಹಿತ್ ಶರ್ಮಾ ವಿಂಡೀಸ್ ವಿರುದ್ಧ 37 ಪಂದ್ಯಗಳ 35 ಇನ್ನಿಂಗ್ಸ್‌ಗಳಲ್ಲಿ 57.60 ಸರಾಸರಿಯಲ್ಲಿ 1,613 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು, 12 ಅರ್ಧಶತಕಗಳು ಹಾಗೂ 162 ರನ್‌ಗಳ ಅತ್ಯಧಿಕ ವೈಯಕ್ತಿಕ ಮೊತ್ತ ಸೇರಿದೆ. ಇತ್ತ ಕೊಹ್ಲಿ ಅಂಕಿಅಂಶಗಳು ಸಹ ಅಷ್ಟೆ ಉತ್ತಮವಾಗಿದ್ದು, ಆಡಿದ 43 ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 66.50 ಗಳ ಅದ್ಭುತ ಸರಾಸರಿಯಲ್ಲಿ 2,261 ರನ್ ಬಾರಿಸಿದ್ದಾರೆ. ವಿಂಡೀಸ್ ವಿರುದ್ಧ 9 ಶತಕ ಮತ್ತು 11 ಅರ್ಧಶತಕ ಗಳಿಸಿರುವ ಕೊಹ್ಲಿ ಅವರ ಗರಿಷ್ಠ ಸ್ಕೋರ್ 183 ರನ್ ಆಗಿದೆ.

ಇದನ್ನೂ ಓದಿ:ಸೋಶಿಯಲ್ ಮೀಡಿಯಾ ಮಾತು ಕೇಳಿ....ಪ್ಲೇಯಿಂಗ್ 11 ಅಂತಿಮ ನಿರ್ಧಾರ ಅವರಿಬ್ಬರದ್ದೇ ಎಂದ ಗೌತಿ! | Gautam Gambhir

15,000 ಏಕದಿನ ರನ್‌ಗಳ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ದಾಖಲೆಯ ಸಮೀಪದಲ್ಲಿದ್ದಾರೆ. ಕೇವಲ 59 ರನ್ ಗಳಿಸಿದರೆ ಸಾಕು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 15,000 ರನ್‌ಗಳ ಗಡಿ ದಾಟಿದ ವಿಶ್ವದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಪ್ರಸ್ತುತ 314 ಪಂದ್ಯಗಳ 302 ಇನ್ನಿಂಗ್ಸ್‌ಗಳಲ್ಲಿ 58.59 ಸರಾಸರಿಯಲ್ಲಿ 14,941 ರನ್ ಬಾರಿಸಿರುವ ಕೊಹ್ಲಿ, ಅತ್ಯಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಪ್ರಸ್ತುತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (18,426 ರನ್) ಮಾತ್ರ ಈ ಮೈಲಿಗಲ್ಲು ತಲುಪಿದ ಏಕೈಕ ಆಟಗಾರರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ 85 ಶತಕಗಳನ್ನು ಪೂರೈಸಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ 100 ಶತಕಗಳ ಮಹಾ ದಾಖಲೆಯತ್ತ ದಾಪುಗಾಲು ಹಾಕುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧವೇ ಈಗಾಗಲೇ 9 ಏಕದಿನ ಶತಕಗಳನ್ನು ಸಿಡಿಸಿರುವ ಕೊಹ್ಲಿ, ಈ ಸರಣಿಯಲ್ಲೂ ಅಬ್ಬರಿಸುವ ಸಂಪೂರ್ಣ ಆತ್ಮವಿಶ್ವಾಸದಲ್ಲಿದ್ದಾರೆ.

ತಿರುವನಂತಪುರಂನಲ್ಲಿ ಹೀಗಿದೆ ನೋಡಿ ಕಿಂಗ್​ ಟ್ರ್ಯಾಕ್ ರೆಕಾರ್ಡ್

ಸರಣಿಯ ಮೊದಲ ಪಂದ್ಯ ನಡೆಯಲಿರುವ ತಿರುವನಂತಪುರಂ ಮೈದಾನ ಕೊಹ್ಲಿಗೆ ಅತ್ಯಂತ ವಿಶೇಷವಾಗಿದೆ. ಇಲ್ಲಿ ಆಡಿದ 2 ಏಕದಿನ ಪಂದ್ಯಗಳಲ್ಲಿ ಅವರು ಇದುವರೆಗೆ ಔಟಾಗದೆ ಒಟ್ಟು 199 ರನ್ ಕಲೆಹಾಕಿದ್ದಾರೆ. 2023ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಕೇವಲ 110 ಎಸೆತಗಳಲ್ಲಿ ಔಟಾಗದೆ 166 ರನ್ ಸಿಡಿಸಿದ್ದು ಇಲ್ಲಿನ ಅತ್ಯುತ್ತಮ ಇನಿಂಗ್ಸ್ ಆಗಿದೆ. 13 ಬೌಂಡರಿ ಮತ್ತು 8 ಸಿಕ್ಸರ್‌ಗಳಿದ್ದ ಆ ಇನ್ನಿಂಗ್ಸ್, ಶತಕದ ನಂತರ ಕೊಹ್ಲಿ ಎಷ್ಟು ವೇಗವಾಗಿ ರನ್ ಗಳಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿತ್ತು.

ಮತ್ತಷ್ಟು ದಾಖಲೆ ಬರೆಯಲು ಕೊಹ್ಲಿ ರೆಡಿ!..

ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಟೀಮ್​ ಇಂಡಿಯಾ ರನ್ ಮಿಷನ್ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹಲವು ಪ್ರಮುಖ ದಾಖಲೆಗಳನ್ನು ಮುರಿಯುವ ತುದಿಯಲ್ಲಿದ್ದಾರೆ. ಪ್ರಸ್ತುತ 59 ಲಿಸ್ಟ್-ಎ ಶತಕಗಳನ್ನು ಹೊಂದಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 60 ಲಿಸ್ಟ್-ಎ ಶತಕಗಳ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಲು ಇನ್ನು ಕೇವಲ 2 ಶತಕಗಳ ಅಗತ್ಯವಿದೆ. ಇದರ ಜೊತೆಗೆ ಭಾರತದ ಮಣ್ಣಿನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಸಿಡಿಸಿದ ಸಚಿನ್ (42 ಶತಕ) ಅವರ ದಾಖಲೆಗೂ ಕೊಹ್ಲಿ ಸಮೀಪಿಸಿದ್ದು, ಸ್ವದೇಶದಲ್ಲಿ 41 ಶತಕ ಬಾರಿಸಿರುವ ಅವರಿಗೆ ಸಚಿನ್ ದಾಖಲೆ ಮುರಿಯಲು ಇನ್ನು 2 ಶತಕಗಳು ಬೇಕಾಗಿವೆ.

ಸ್ವದೇಶದ ಅಂಗಳದಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ಮಹತ್ವದ ದಾಖಲೆಯನ್ನೂ ಕೊಹ್ಲಿ ಶೀಘ್ರದಲ್ಲೇ ಮುರಿಯಲಿದ್ದಾರೆ. ಸಚಿನ್ ಭಾರತದಲ್ಲಿ ಆಡಿದ 164 ಪಂದ್ಯಗಳಲ್ಲಿ 6,976 ರನ್ ಗಳಿಸಿದ್ದರೆ, ಕೊಹ್ಲಿ ಕೇವಲ 130 ಪಂದ್ಯಗಳ 127 ಇನ್ನಿಂಗ್ಸ್‌ಗಳಲ್ಲಿ 62.42 ರ ಅದ್ಭುತ ಸರಾಸರಿಯಲ್ಲಿ 27 ಶತಕ ಹಾಗೂ 36 ಅರ್ಧಶತಕಗಳೊಂದಿಗೆ ಈಗಾಗಲೇ 6,867 ರನ್ ಕಲೆಹಾಕಿದ್ದಾರೆ.

ಪ್ರಸ್ತುತ ವರ್ಷದಲ್ಲೂ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಈ ವರ್ಷ ಆಡಿದ 6 ಏಕದಿನ ಇನ್ನಿಂಗ್ಸ್‌ಗಳಲ್ಲಿ 64.00 ಸರಾಸರಿ ಮತ್ತು 106 ಕ್ಕೂ ಹೆಚ್ಚಿನ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 1 ಶತಕ ಹಾಗೂ 3 ಅರ್ಧಶತಕಗಳೊಂದಿಗೆ 384 ರನ್ ಸಿಡಿಸಿ ಮಿಂಚುತ್ತಿದ್ದಾರೆ.

Also Read
ರೋಹಿತ್-ಕೊಹ್ಲಿ ತಂಡದಲ್ಲಿದ್ರೆ ಶುಭಮಾನ್​ಗೆ....ರೋಕೊ ಜೋಡಿಯ ಬಗ್ಗೆ ಗಂಭೀರ್​ ಶಾಕಿಂಗ್ ಸ್ಟೇಟಮೆಂಟ್​! |Gautam Gambhir

ಕ್ರಿಕೆಟ್ ವಲಯದಲ್ಲಿ ಈಗ ರೋ-ಕೊ ಸೌಂಡ್​

ರೋಹಿತ್ ಶರ್ಮಾ ಕಥೆ ಹೀಗಿದೆ!

ಭಾರತದ ಮೂರನೇ ಅತಿ ಹೆಚ್ಚು ಏಕದಿನ ರನ್ ಸರದಾರರಾಗಿರುವ ರೋಹಿತ್ ಶರ್ಮಾ 288 ಪಂದ್ಯಗಳ 280 ಇನ್ನಿಂಗ್ಸ್‌ಗಳಲ್ಲಿ 11,895 ರನ್ ಗಳಿಸಿದ್ದಾರೆ. ಸಚಿನ್ ಮತ್ತು ಕೊಹ್ಲಿ ನಂತರ ಏಕದಿನದಲ್ಲಿ 12,000 ರನ್ ಪೂರೈಸಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಳ್ಳಲು ಹಿಟ್​ಮ್ಯಾನ್​ಗೆ ಇನ್ನು 105 ರನ್‌ಗಳ ಅಗತ್ಯವಿದೆ. ರೊಹಿತ್​ ಏಕದಿನ ಕ್ರಿಕೆಟ್‌ನಲ್ಲಿ 48.95 ಸರಾಸರಿ ಹೊಂದಿದ್ದು, 34 ಶತಕ ಹಾಗೂ 62 ಅರ್ಧಶತಕ ಬಾರಿಸಿದ್ದಾರೆ.

ಆರಂಭಿಕ ಆಟಗಾರನಾಗಿ 10,000 ರನ್ ಸನಿಹದಲ್ಲಿ ರೋಹಿತ್

ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಅಪರೂಪದ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಆರಂಭಿಕರಾಗಿ 10,000 ರನ್ ಪೂರೈಸಿದ ವಿಶ್ವದ ನಾಲ್ಕನೇ ಹಾಗೂ ಸಚಿನ್ ತೆಂಡೂಲ್ಕರ್ ನಂತರ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ರೋಹಿತ್‌ಗೆ ಇನ್ನು ಕೇವಲ 135 ರನ್‌ಗಳ ಅಗತ್ಯವಿದೆ. ರೋಹಿತ್ ಇದುವರೆಗೆ ಆರಂಭಿಕ ಬ್ಯಾಟರ್ ಆಗಿ 201 ಪಂದ್ಯಗಳ 199 ಇನ್ನಿಂಗ್ಸ್‌ಗಳಲ್ಲಿ 54.50 ಸರಾಸರಿಯಲ್ಲಿ 32 ಶತಕ ಹಾಗೂ 49 ಅರ್ಧಶತಕಗಳೊಂದಿಗೆ 9,865 ರನ್ ಕಲೆಹಾಕಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 344 ಪಂದ್ಯಗಳ 340 ಇನ್ನಿಂಗ್ಸ್‌ಗಳಲ್ಲಿ 45 ಶತಕಗಳೊಂದಿಗೆ 15,310 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ ಕೂಡ ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ಆಡಿದ 9 ಏಕದಿನ ಇನ್ನಿಂಗ್ಸ್‌ಗಳಲ್ಲಿ 42.11 ಸರಾಸರಿಯಲ್ಲಿ 379 ರನ್ ಬಾರಿಸಿರುವ ಅವರು, ಇತ್ತೀಚೆಗೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 138 ರನ್‌ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಇಂತಹ ಹಲವು ಮಹತ್ವದ ದಾಖಲೆಗಳು ಕೈಗೆಟುಕುವ ಹಂತದಲ್ಲಿರುವುದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ಅತ್ಯಂತ ಪ್ರಮುಖ ಕ್ಷಣವಾಗಲಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net