ಥೋ... ಏನ್ರೀ ಜೀವನಾ... ಲೋನ್ ಇಎಂಐ ಕಟ್ಟಬೇಕು, ಮನೆ ಓನರ್ ಮುಂದಿನ ತಿಂಗಳಿಂದ ಬಾಡಿಗೆ ಜಾಸ್ತಿ ಮಾಡ್ತೀನಿ ಅಂದಿದಾರೆ, ಮಕ್ಕಳ ಸ್ಕೂಲ್ ಫೀಸ್ ಹೊರೆ, ಹೆಂಡತಿ ಈ ಸಲ ಆನಿವರ್ಸರಿಗೆ ನೆಕ್ಲೇಸೇ ಬೇಕು ಅಂತಿದಾಳೆ, ಸಂಬಳ ಬೇರೆ ಹೈಕ್ ಆಗ್ತಿಲ್ಲ... ಅಯ್ಯೋ ಈ ಬಿಸಿಲು ಬೇರೆ, ನೆತ್ತಿ ಸುಡ್ತಿದೆ, ಅದೇನು ರೋಡ್ ಅಂತ ಮಾಡಿದಾರೋ ಏನೋ, ಬರೀ ಹಂಪ್ಗಳು, ಗುಂಡಿಗಳು, ಆಫೀಸಿಗೆ ಬೇರೆ ಲೇಟ್ ಆಗ್ತಿದೆ, ಅರ್ಧ ದಿನ ಸ್ಯಾಲರಿ ಕಟ್ ಆಗುತ್ತೆ...