ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯ ವರದಿ: ವಿಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ: ಮತಗಳ್ಳತನ ಆರೋಪಕ್ಕೆ ಬಿಜೆಪಿ ತಿರುಗೇಟು|BJP

ಎಸ್​ಐಆರ್ ಪ್ರಕ್ರಿಯೆ ಕುರಿತಂತೆ ಮೂವರು ಭಾರತೀಯ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯದ ಬಗ್ಗೆ ತನಿಖಾ ಪತ್ರಿಕಾ ವರದಿ ಉಲ್ಲೇಖಿಸಿ ವಿಪಕ್ಷಗಳು ಮತಗಳ್ಳತನ ಬಗ್ಗೆ ಆರೋಪವನ್ನು ಮತ್ತೆ ಮುನ್ನೆಲೆಗೆ ತರುತ್ತಿದ್ದಂತೆ ಆರೋಪವನ್ನು ತಿರಸ್ಕರಿಸಿರುವ ಬಿಜೆಪಿ, ವಿಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿದೆ.
Sambit Patra
ಬಿಜೆಪಿ ಸಂಸದ ಸಂಬಿತ್ ಪಾತ್ರಾ
Published on

ನವದೆಹಲಿ: ಎಸ್​ಐಆರ್ ಪ್ರಕ್ರಿಯೆ ಕುರಿತಂತೆ ಮೂವರು ಭಾರತೀಯ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯದ ಬಗ್ಗೆ ತನಿಖಾ ಪತ್ರಿಕಾ ವರದಿ ಉಲ್ಲೇಖಿಸಿ ವಿಪಕ್ಷಗಳು ಮತಗಳ್ಳತನ ಬಗ್ಗೆ ಆರೋಪವನ್ನು ಮತ್ತೆ ಮುನ್ನೆಲೆಗೆ ತರುತ್ತಿದ್ದಂತೆ ಆರೋಪವನ್ನು ತಿರಸ್ಕರಿಸಿರುವ ಬಿಜೆಪಿ, ವಿಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ ಎಂದು ತಿರುಗೇಟು ನೀಡಿದೆ.

ನವದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಸಂಬಿತ್ ಪಾತ್ರಾ, ಎಸ್​ಐಆರ್ ಪ್ರಕ್ರಿಯೆ ಮೂಲಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದ್ದರಿಂದಲೇ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ಎಂದು ಹೇಳಿದ್ದಾರೆ.

ಒಟ್ಟು 20 ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಈ ಪೈಕಿ ಟಿಎಂಸಿ 13 ಸ್ಥಾನಗಳನ್ನು ಮತ್ತು ಬಿಜೆಪಿ 6 ಸ್ಥಾನಗಳನ್ನು ಗೆದ್ದುಕೊಂಡಿವೆ. ಒಂದು ವೇಳೆ ನಾವು ಮತಗಳ ಕಳ್ಳತನದ ಮೂಲಕ ಗೆದ್ದಿದ್ದೇ ಆಗಿದ್ದರೆ, ನಾವು ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಹೇಗೆ ಕಳೆದುಕೊಂಡೆವು ಎಂದು ಪ್ರಶ್ನಿಸಿದ್ದಾರೆ.

Also Read
ಬಿಜೆಪಿ, ಆರ್​ಎಎಸ್​ಎಸ್ ಹಾಗೂ ಚುನಾವಣೆ ಆಯೋಗದಿಂದ ದೇಶದ್ರೋಹದ ಕೃತ್ಯ: ಸಿಇಸಿ ವಿರುದ್ಧ ಏಕಚಕ್ರಾಧಿಪತ್ಯ ಆರೋಪ ಬೆನ್ನಲ್ಲೇ ರಾಹುಲ್ ಗಾಂಧಿ ಕಿಡಿ | Rahul Gandhi
Sambit Patra

ಮುರ್ಷಿದಾಬಾದ್‌ನ ಸಂಸರ್‌ಗಂಜ್‌ ಕ್ಷೇತ್ರದ ಉದಾಹರಣೆ ನೀಡಿದ ಪಾತ್ರಾ, ಅಲ್ಲಿ ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ 91,712 ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು. ಇದು ಇಡೀ ಬಂಗಾಳದಲ್ಲೇ ಅತಿ ಹೆಚ್ಚು ಮತದಾರರನ್ನು ತೆಗೆದು ಹಾಕಿದ ಕ್ಷೇತ್ರವಾಗಿದೆ. ಇಲ್ಲಿ ಟಿಎಂಸಿಯ ಮೊಹಮ್ಮದ್ ನೂರ್ ಆಲಂ ಅವರು 61,918 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಅಲ್ಲಿ ಬಿಜೆಪಿ ಪ್ರಬಲವಾಗಿ ಕಂಡು ಬರಲಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ 2014ರಿಂದಲೂ ಜನರು ವಿರೋಧ ಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಈಗ ಮತ್ತೆ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತ ಬಳಿಕವೇ ಕಾಂಗ್ರೆಸ್ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read
ಕೆಪಿಎಸ್​ಸಿ ಮುಚ್ಚುವೆ ಎಂಬ ಹೇಳಿಕೆ; ಸಿಎಂಗೆ ಶಾಸನದ ಗಂಧಗಾಳಿಯೇ ಗೊತ್ತಿಲ್ಲ: ಡಿಕೆ ವಿರುದ್ಧ ಹೆಚ್​ಡಿಕೆ ವಾಗ್ದಾಳಿ | HDK
Sambit Patra

ಕಾಂಗ್ರೆಸ್ ಭಾರತದ ಚುನಾವಣಾ ಆಯೋಗದ ಮೇಲೆ ಪದೇ ಪದೇ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಭಿನ್ನಾಭಿಪ್ರಾಯದ ವರದಿ ಸಂಬಂಧ ಆಯೋಗವು ಒಂದು ವಿವರವಾದ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯವಲ್ಲ, ಎಲ್ಲಾ ಚುನಾವಣಾ ಆಯುಕ್ತರ ನಡುವೆ ಅಧಿಕೃತ ಸಮಾಲೋಚನೆಗಳು ನಡೆದಿವೆ ಎಂಬುದನ್ನು ಟಿಪ್ಪಣಿಯು ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಈ ಟಿಪ್ಪಣಿಯ ಪ್ರಕಾರ, ಎಲ್ಲಾ ಚುನಾವಣಾ ಆಯುಕ್ತರ ನಡುವೆ ಅಧಿಕೃತ ಚರ್ಚೆಗಳು ನಡೆದಿವೆ ಎಂದು ಗಮನಿಸಬಹುದು. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯ ಸೌಂದರ್ಯ ಎಂದು ಹೇಳಬಹುದು. ಎಲ್ಲಾ ಚರ್ಚೆಗಳ ಬಳಿಕ ಮೂವರು ಚುನಾವಣಾ ಆಯುಕ್ತರು ಒಂದೇ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net