ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕತ್ವದ ವಿಚಾರ ಅಂತಿಮ ಹಂತಕ್ಕೆ ತಲುಪಿದ್ದು, ಬೈಂಡಿಂಗ್ ಆಫರ್‌ಗಳನ್ನು ಸಲ್ಲಿಸಿದ ಬಳಿಕ ಇಬ್ಬರು ಬಿಡ್ಡರ್‌ಗಳು ಮಾತ್ರ ಉಳಿದಿದ್ದು, ಡಿಯಾಜಿಯೊ ಗುಂಪಿನ ಭಾಗವಾಗಿರುವ ಯುನೈಟೆಡ್ ಸ್ಪಿರಿಟ್ಸ್ ಈಗ ಉಳಿದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಆದ್ಯತೆಯ ಖರೀದಿದಾರರನ್ನು ನಿರ್ಧರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.